Breaking News

ನನ್ನ ಜೊತೆ ನೇರ ಚರ್ಚೆಗೆ ಬನ್ನಿ, ಚರ್ಚೆಯ ಬಳಿಕ ಮೋದಿ ರಾಜಕೀಯ ಜೀವನ ಅಂತ್ಯ: ರಾಹುಲ್‌ ಸವಾಲು

Spread the love

ನವದೆಹಲಿ: ನರೇಂದ್ರ ಮೋದಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡುವಿನ ವಾಕ್ಸಮರ ತೀವ್ರಗೊಂಡಿದ್ದು, ಮುಕ್ತ ವೇದಿಕೆಯಲ್ಲಿ ನೇರ ಚರ್ಚೆಗೆ ಬರುವಂತೆ ರಾಹುಲ್ ಪ್ರಧಾನಿಯವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.

ಕಳೆದ 12 ದಿನಗಳಲ್ಲಿ 7ನೇ ಬಾರಿಗೆ ಪ್ರಧಾನಿ ಮೋದಿಗೆ ಸವಾಲು ಹಾಕಿರುವ ರಾಹುಲ್ ಗಾಂಧಿ, “ನನ್ನೊಂದಿಗೆ ನೇರ ಚರ್ಚೆ ನಡೆಸಿದ ಬಳಿಕ ಮೋದಿ ಅವರ ಪ್ರಧಾನಿ ಸ್ಥಾನ ಉಳಿಯುವುದಿಲ್ಲ ಹಾಗೂ ಅವರ ರಾಜಕೀಯ ಜೀವನವೇ ಮುಕ್ತಾಯವಾಗಲಿದೆ” ಎಂದು ಹೇಳಿದ್ದಾರೆ.

ಬಿಜೆಪಿ ನಾಯಕರು ಸಂಸದೀಯ ಚರ್ಚೆಯನ್ನೇ ಸೂಕ್ತ ವೇದಿಕೆ ಎನ್ನುತ್ತಾರೆ. ಆದರೆ, ಸಂಸತ್ತಿನಲ್ಲಿ ರೈತರ ಮಸೂದೆ, ಮತ ಕಳ್ಳತನ, ಎಸ್‌ಐಆರ್, ಚೀನಾ ವಿಚಾರ ಹಾಗೂ ಎಪ್‌ಸ್ಟೀನ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಲು ನನಗೆ ಅವಕಾಶ ನೀಡಲಿಲ್ಲ; ನನ್ನ ಮೈಕ್ ಆಫ್ ಮಾಡಲಾಗುತ್ತದೆ. ಆದ್ದರಿಂದ ಮುಕ್ತ ವೇದಿಕೆಯಲ್ಲಿ ಮುಖಾಮುಖಿಯಾಗಿ ಚರ್ಚೆ ನಡೆಸೋಣ ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ನನ್ನೊಂದಿಗೆ ಚರ್ಚೆಗೆ ಬರುವಾಗ ನೀವು ಬೇಕಿದ್ದರೆ ಟೆಲಿಪ್ರಾಂಪ್ಟರ್ ತಂದುಕೊಳ್ಳಿ. ತೀರ್ಪುಗಾರರನ್ನೂ ನೀವೇ ಆರಿಸಿಕೊಳ್ಳಿ, ಬೇಕಿದ್ದರೆ ಅದಾನಿ ಅಥವಾ ಮೋಹನ್ ಭಾಗವತ್ ಅವರೇ ತೀರ್ಪುಗಾರರಾಗಲಿ. ನಿಜವಾದ ದೇಶದ್ರೋಹಿ ಯಾರು ಎಂಬುದು ದೇಶಕ್ಕೆ ತಿಳಿಯಬೇಕಿದೆ ಎಂದು ಅವರು ಸವಾಲು ಎಸೆದಿದ್ದಾರೆ.

ರಾಜಕೀಯ ವಿಚಾರಗಳಷ್ಟೇ ಅಲ್ಲದೆ ದೆಹಲಿಯ ವಾಯು ಗುಣಮಟ್ಟದ ಕುರಿತೂ ಚರ್ಚೆಗೆ ತಾವು ಸಿದ್ಧವಿರುವುದಾಗಿ ತಿಳಿಸಿರುವ ರಾಹುಲ್ ಗಾಂಧಿ, ಪ್ರಧಾನಿಯವರು ತಮ್ಮ ‘ಏರ್ ಚೇಂಬರ್’ನಿಂದ ಹೊರಬಂದು ಸಾಮಾನ್ಯ ನಾಗರಿಕರಂತೆ ಉಸಿರಾಡಬೇಕಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

 

ಸೀತಾರಾಮನ್ ತಿರುಗೇಟು
ರಾಹುಲ್ ಗಾಂಧಿ ಅವರ ಬಹಿರಂಗ ಚರ್ಚೆಯ ಸವಾಲನ್ನು ಬಿಜೆಪಿ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ನಡೆಯುವ ಚರ್ಚೆಗಳಿಗೆ ಹಾಜರಾಗದೆ ಪದೇ ಪದೇ ದೂರ ಉಳಿಯುತ್ತಾರೆ. ಸಂಸತ್ತಿನಲ್ಲೇ ಚರ್ಚೆಗೆ ಸೂಕ್ತ ವೇದಿಕೆ ಲಭ್ಯವಿರುವಾಗ, ಪ್ರಧಾನ ಮಂತ್ರಿಯವರು ಪ್ರತ್ಯೇಕ ಸ್ಥಳವನ್ನು ಆರಿಸಿಕೊಳ್ಳಬೇಕೆಂದು ಅವರು ಏಕೆ ಒತ್ತಾಯಿಸುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರು ತಮ್ಮ ಸಾಂವಿಧಾನಿಕ ಜವಾಬ್ದಾರಿಯ ವಿಷಯದಲ್ಲಿ ಗಂಭೀರತೆಯನ್ನು ಪ್ರದರ್ಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಕೆರೆಗೆ ಬಿದ್ದಿದ್ದ ಹೋರಿ ರಕ್ಷಿಸಲು ಹೋಗಿ ಯುವಕ ಸಾವು

Spread the loveಶಿವಮೊಗ್ಗ: ಕೆರೆಗೆ ಬಿದ್ದು ಒದ್ದಾಡುತ್ತಿದ್ದ ಹೋರಿ ರಕ್ಷಿಸಲು ಹೋಗಿ ಯುವಕನೊಬ್ಬ ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿದ ಘಟನೆ ಶಿಕಾರಿಪುರ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ