ಬೆಂಗಳೂರು: ನಗರದಲ್ಲಿ ಬೈಕ್ ಟ್ಯಾಕ್ಸಿ ಸವಾರನೋರ್ವನಿಂದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಈ ಬಗ್ಗೆ ಸ್ವತಃ ಯುವತಿ ಸೋಷಿಯಲ್ ಮೀಡಿಯಾದಲ್ಲಿ (Social Media) ವಿಡಿಯೋ ಹಂಚಿಕೊಂಡು, ಆರೋಪಿಸಿದ್ದಾರೆ. ಯಲಹಂಕದ ಜ್ಯುಡಿಷಿಯಲ್ ಲೇಔಟ್‌ನಿಂದ ಯುವತಿ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು. ಸವಾರ ಲೋಕೇಷನ್‌ಗೆ ಬಂದು ಕಾಲ್ ಮಾಡದೇ, ಮೆಸೇಜ್ ಕೂಡ ಮಾಡದೇ ವಾಪಸ್ಸಾಗಿದ್ದಾನೆ.
ವಾಪಸ್ಸಾಗಿದ್ದ ವಿಷಯ ತಿಳಿದು ಯುವತಿ ಕಾಲ್ ಮಾಡಿದಾಗ, ಬೈಕ್ ಸವಾರ ಸೆಕ್ಸ್ ಅವೈಲೆಬಲ್ ಇದ್ಯಾ ಎಂದು ಕೇಳಿದ್ದಾನೆ. ಈ ಬಗ್ಗೆ ಯುವತಿ ಅಸಾಮಾಧಾನ ಹೊರಹಾಕಿದ್ದಾರೆ.
ಇಂತಹವರಿಂದ ಬೇರೆ ಡ್ರೈವರ್‌ಗಳಿಗೆ ಕೆಟ್ಟ ಹೆಸರು. ಹೆಣ್ಮಕ್ಕಳು ಯಾವುದೇ ಕಾರಣಕ್ಕೂ ಟೂ ವೀಲ್ಹರ್ ಬುಕ್ ಮಾಡಬೇಡಿ, ಹೆಣ್ಮಕ್ಕಳ ಸೇಫ್ಟಿ ವಿಚಾರವಾಗಿ ಹೇಳ್ತಿದ್ದೀನಿ. ಯಾರೇ ಆದ್ರೂ ನೋಡಿಕೊಂಡು ಬುಕ್ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
Laxmi News 24×7