Breaking News

ಬಿಜೆಪಿ ಅವರು ರೀಲ್ಸ್ ರಾಜರು: ಪ್ರಿಯಾಂಕ್ ಖರ್ಗೆ ಕಿಡಿ

Spread the love

ಬೆಂಗಳೂರು : ಬಿಜೆಪಿ ಅವರು ರೀಲ್ಸ್ ರಾಜರು ಅಂತ ಗೃಹ ಸಚಿವ ಪ್ರಿಯಾಂಕ್ ಖರ್ಗೆ  ಕಿಡಿಕಾರಿದ್ದಾರೆ. ಮೆಟ್ರೋ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯ ಆ್ಯಕ್ಟೀವ್ ಆಗಿರೋ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದರು.

ಕ್ಯಾಬಿನೆಟ್ ರೀ ಶಫಲ್ ಇದೆ. ಅವರಿಗೆ ಏನಾದ್ರು ಬರ್ತಿದೆಯಾ ಕೇಳಿ ನೋಡಿ. ಇಂತಹದ್ದಕ್ಕೆ ಅವರು ಆ್ಯಕ್ಟೀವ್ ಇರ್ತಾರೆ. ಜನಸಮಾನ್ಯರಿಗೆ ಇವರ ಕೊಡುಗೆ ಏನು? ಬೆಂಗಳೂರಿಗೆ ಒಂದು ರೂಪಾಯಿ ಆದ್ರೂ ತಂದಿದ್ದಾರಾ? ಇವರು ಅಂತ ಕಿಡಿಕಾರಿದರು.

ಟನಲ್ ಮಾಡಬೇಕು ಅಂದ್ರೆ ಟನಲ್ ಸರಿ ಇಲ್ಲ ಅಂತಾರೆ. ಮೆಟ್ರೋ ಮಾಡೋದಕ್ಕೆ ಹೋದ್ರೆ ಮೆಟ್ರೋ ಸರಿ ಇಲ್ಲ ಅಂತಾರೆ. ಏನೋ ಒಂದು ವಿಶೇಷ ಟಿಪ್ಪಣಿ ಇರುತ್ತೆ ಯಜಮಾನದ್ದು. ಇಂಥದ್ದೊಂದು ಕೆಲಸ ನನ್ನಿಂದ ಕರ್ನಾಟಕಕ್ಕೆ ಆಗಿದೆ ಅಂತ ಏನಾದ್ರು ಇದೆಯಾ ಇವರದ್ದು? ಇವರದ್ದು ಕೇವಲ‌ ಮನವಿ ಪತ್ರ ಕೊಡೋದು. ಕೇಂದ್ರ ಮಂತ್ರಿಗೆ ಪತ್ರ ಕೊಡೋದು ಫೋಟೊ ತೆಗೆದುಕೊಂಡು ಬರೋದು ಅಷ್ಟೆ. ಶೋ ಮಿ ಒನ್ ಸ್ಕೀಮ್. ಮೋದಿಯವರು ಒಂದು ಮಾಡೆಲ್ ಹೇಳಿಕೊಟ್ಟಿದ್ದಾರೆ ಈ ಯಂಗ್ ಎಂಪಿಗಳಿಗೆ ರೀಲ್ ಹೇಗೆ ಮಾಡೋದು ಅಂತ. ಇವರೆಲ್ಲಾ ರೀಲ್ ಮಾಡೋಕೆ ಸೀಮಿತ. ರೀಲ್ ರಾಜರು. ಅದು ಬಿಟ್ಟರೆ‌ ಒಂದು ನಾಯಾ ಪೈಸೆ ಬೆಂಗಳೂರಿಗೆ ಹೊಸ ಯೋಜನೆ ತಂದಿಲ್ಲ ಯಾರು ಅಂತ ತೇಜಸ್ವಿ, ಬಿಜೆಪಿ ಸಂಸದರ ವಿರುದ್ದ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.


Spread the love

About Laxminews 24x7

Check Also

ಅಡುಗೆ ಎಣ್ಣೆ ಮರುಬಳಕೆಗೆ ಸರ್ಕಾರ ನಿರ್ಬಂಧ – ಶೀಘ್ರದಲ್ಲೇ ಹೊಸ ಆ್ಯಪ್ ಬಿಡುಗಡೆ

Spread the loveಬೆಂಗಳೂರು: ಅಡುಗೆ ಎಣ್ಣೆ  ಮರುಬಳಕೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ  ದಿಟ್ಟ ಹೆಜ್ಜೆ ಇಟ್ಟಿದೆ. ಹೋಟೆಲ್‌ಗಳಲ್ಲಿ ಇನ್ಮುಂದೆ ಅಡುಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ