ಬೆಂಗಳೂರು: ಬೆಲೆ ಏರಿಕೆ ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿದೆ ಎಂದು ಡಿಸಿಎಂ ಪರಮೇಶ್ವರ್ ಬೆಲೆ ಏರಿಕೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ಡಿಸಿಎಂ ಪರಮೇಶ್ವರ್, ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ ಮಾಡ್ತಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೆಲೆ ಏರಿಕೆ ಕೆಲವು ಅನಿವಾರ್ಯತೆ ಇದೆ. ಕೇಂದ್ರ ನಮಗೆ ಕೊಡಬೇಕಾದ ಹಣ ಕೊಟ್ಟರೆ ನಮಗೆ ಹೊರೆ ಆಗಲ್ಲ. ಕೇಂದ್ರ ನಮ್ಮ ಹಣ ಕೊಟ್ಟರೆ ಆಗ ನಾವು ರೇಟ್ ಜಾಸ್ತಿ ಮಾಡಲ್ಲ. ಈಗ ನಮಗೆ ಅನಿವಾರ್ಯತೆ ಎಂದಿದ್ದಾರೆ
ಕೇಂದ್ರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದೆ. ಅದರ ಇಂಪ್ಯಾಕ್ಟ್ ಆಗಿದೆ. ಹೀಗಾಗಿ ನಾವು ರೈತರ ಪರ ನಿಲ್ಲಬೇಕು ಅಲ್ಲವಾ? ಬರ ಏರಿಕೆ ಸಮರ್ಥನೆ ಮಾಡಿಕೊಳ್ಳಲ್ಲ. ಆದರೆ ಕೇಂದ್ರ ನಮಗೆ ಸಹಕಾರ ಕೊಟ್ಟರೆ ನಾವು ಏರಿಕೆ ಮಾಡಲ್ಲ ಎಂದು ಪರೋಕ್ಷವಾಗಿ ಕೇಂದ್ರದ ವಿರುದ್ದ ಕಿಡಿಕಾರಿದ್ದಾರೆ.
ಬಿಜೆಪಿ ಅವಧಿಯಲ್ಲಿ ಹೆಚ್ಚಿಸಿದ್ದ SC-ST ಮೀಸಲಾತಿಯನ್ನ ಹೈಕೋರ್ಟ್ನಲ್ಲಿ ರದ್ದು ಮಾಡಿರುವ ವಿಚಾರವಾಗಿ ಸುಪ್ರೀಂಕೋರ್ಟ್ಗೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದೆ.
ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಅಪೀಲ್ ಹಾಕಿದ್ದೇವೆ. ಸುಪ್ರೀಂಕೋರ್ಟ್ಗೆ SLP ಫೈಲ್ ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕೂ ನಾವು 9ನೇ ಶೆಡ್ಯೂಲ್ಡ್ಗೆ ಸೇರಿಸಲು ಮನವಿ ಮಾಡ್ತೀವಿ ಎಂದಿದ್ದಾರೆ.
ತಮಿಳುನಾಡಿಲ್ಲಿ 69% ಮೀಸಲಾತಿ ಇದೆ. ನಮ್ಮ ರಾಜ್ಯದಲ್ಲಿ ಮಾಡಲ್ಲ ಅಂದರೆ ಹೇಗೆ? ಬಿಜೆಪಿ ಸರ್ಕಾರ ಇದ್ದಾಗಲೇ 9ನೇ ಶೆಡ್ಯೂಲ್ಡ್ಗೆ ಸೇರಿಸಬೇಕಿತ್ತು. ಆಗ ಈ ಪ್ರಶ್ನೆ ಬರುತ್ತಿರಲಿಲ್ಲ. ಈಗ ನೇಮಕಾತಿಯಲ್ಲಿ ಗೊಂದಲ ಇದೆ. ನಾವು ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಮಾಡಿದ್ದೇವೆ. ಸುಪ್ರೀಂಕೋರ್ಟ್ನಲ್ಲಿ ಏನು ತೀರ್ಮಾನ ಬರುತ್ತದೆ ನೋಡೋಣ ಎಂದು ಹೇಳಿದ್ದಾರೆ.
Laxmi News 24×7