ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆ ಬೆಂಗಳೂರಿನಿಂದ ಊರುಗಳತ್ತ ಜನರು ಹೊರಟಿದ್ದಾರೆ. ಇಂದು ಕೂಡ ಮೆಜೆಸ್ಟಿಕ್‌ನಲ್ಲಿ ಜನದಟ್ಟಣೆ ಕಂಡುಬಂತು. ಕೆಎಸ್‌ಆರ್‌ಟಿಸಿಯಿಂದ 908 ವಿಶೇಷ ಬಸ್‌ಗಳು ಸಂಚಾರ ನಡೆಸಿವೆ.
ನಗರದಿಂದ ಊರುಗಳಿಗೆ ತೆರಳುವವರ ಅನುಕೂಲಕ್ಕಾಗಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಮೆಜೆಸ್ಟಿಕ್ ಹೊರತುಪಡಿಸಿ ನಗರದ 11 ಸ್ಥಳಗಳಲ್ಲಿ ಬಸ್‌ಗಳ ಪಿಕಪ್ ಪಾಯಿಂಟ್ ಮಾಡಲಾಗಿದೆ. ಟಿಕೆಟ್ ಕಾಯ್ದಿರಿಸುವ ಕೌಂಟರ್‌ಗಳನ್ನು ತೆರೆಯಲಾಗಿತ್ತು.
ಮಂಗಳೂರಿಗೆ 49, ದಾವಣಗೆರೆಗೆ 42, ಹುಬ್ಬಳ್ಳಿ ಮತ್ತು ಕುಂದಾಪುರಕ್ಕೆ ತಲಾ 35, ಬೆಳಗಾವಿಗೆ 29, ಶಿವಮೊಗ್ಗ ಮತ್ತು ತಿರುಪತಿಗೆ ತಲಾ 24, ಹೊಸಪೇಟೆಗೆ 23, ವಿಜಯಪುರ & ತಿರುಚಿರಾಪಳ್ಳಿಗೆ ತಲಾ 22, ಗೋಕರ್ಣ, ಸಾಗರ ಮತ್ತು ಮಧುರೈಗೆ ತಲಾ 21 ವಿಶೇಷ ಬಸ್‌ಗಳು ಕಾರ್ಯಾಚರಣೆ ನಡೆಸಿವೆ.
ಶಿರಸಿಗೆ 17, ಉಡುಪಿ & ಬಳ್ಳಾರಿಗೆ ತಲಾ 16, ಕಲಬುರಗಿ-15 ಕುಂಭಕೋಣಂಗೆ 14, ಪುತ್ತೂರು & ತಿರುಕ್ಕೋಯಿಲೂರಿಗೆ ತಲಾ 13, ಚಿಕ್ಕಮಗಳೂರಿಗೆ 12, ಸೇಲಂಗೆ 11, ಹರಿಹರ ಶೃಂಗೇರಿ & ತಿರುವಣ್ಣಾಮಲೈಗೆ ತಲಾ 10, ಮಡಿಕೇರಿ, ಯಲ್ಲಾಪುರ & ಚಿಕ್ಕೋಡಿಗೆ ತಲಾ 9 ಬಸ್‌ಗಳು ಸಂಚರಿಸಲಿವೆ.
ಹಗರಿಬೊಮ್ಮನಹಳ್ಳಿ, ಹೊರನಾಡು, ಹೂವಿನಹಡಗಲಿ & ಕಲ್ಲಕುರಿಚಿಗೆ ತಲಾ 8, ಭಟ್ಕಳ, ಬೀದರ್, ಕಾರವಾರ, ಸಂಕೇಶ್ವರ, ಸುಳ್ಯ, ಜಮಖಂಡಿ, ಪುದುಚೇರಿ & ವಿಲ್ಲುಪುರಂಗೆ ತಲಾ 7 ವಿಶೇಷ ಬಸ್ ವ್ಯವಸ್ಥೆ ಇರಲಿದೆ.
Laxmi News 24×7