Breaking News

ನ.10 ರೊಳಗೆ‌ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿ: ಪಡಿತರ ಚೀಟಿದಾರರಿಗೆ ಸೂಚನೆ

Spread the love

ಬೆಂಗಳೂರು: ಪಡಿತರ ಚೀಟಿದಾರರು ಇ-ಕೆವೈಸಿ (e-KYC) ಮಾಡಿಸಲು ನವೆಂಬರ್ 10 ಕೊನೆಯ ದಿನವಾಗಿದ್ದು, ಬಾಕಿ ಇರುವ ಪಡಿತರ ಚೀಟಿದಾರರು ಕೊನೆಯ ದಿನಾಂಕದೊಳಗೆ ತಪ್ಪದೇ ಇ-ಕೆವೈಸಿ ಮಾಡಿಸಬೇಕೆಂದು ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ‌ ವ್ಯವಹಾರಗಳ ಇಲಾಖೆ ತಿಳಿಸಿದೆ.‌

2,67,64,276 ಪಡಿತರ ಚೀಟಿ ಫಲಾನುಭವಿಗಳು ರಾಜ್ಯದಲ್ಲಿ ಮರು ಇ-ಕೆವೈಸಿ ಮಾಡಿಸಬೇಕಿತ್ತು. ಅವರ ಪೈಕಿ ನವೆಂಬರ್ 3 ರವರೆಗೆ 2,26,30,747 ಫಲಾನುಭವಿಗಳು ಇ-ಕೆವೈಸಿ ಮಾಡಿಸಿದ್ದಾರೆ‌. ಇನ್ನೂ 41,33,529 ಫಲಾನುಭವಿಗಳು ಇ-ಕೆವೈಸಿ ಮಾಡಿಸಬೇಕಿದೆ.‌

ನ.10 ರೊಳಗೆ‌ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿ: ಪಡಿತರ ಚೀಟಿದಾರರಿಗೆ ಸೂಚನೆ

ಈಗಾಗಲೇ ಒಂದು ಬಾರಿ ಇ-ಕೆವೈಸಿ ಮಾಡಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದ್ದು, ನವೆಂಬರ್ 10ರ ನಂತರ ಯಾವುದೇ ಕಾರಣಕ್ಕೂ ಕೊನೆಯ ದಿನಾಂಕ ವಿಸ್ತರಣೆ ಮಾಡಲಾಗುವುದಿಲ್ಲ. ಹಾಗಾಗಿ, ಬಾಕಿ ಉಳಿದಿರುವ ಎಲ್ಲ ಫಲಾನುಭವಿಗಳು ‘ಅನ್ನ ಸೇವೆ’ ಮೊಬೈಲ್ ಅಪ್ಲಿಕೇಶನ್ ಮೂಲಕ ಖುದ್ದಾಗಿ ಅಥವಾ ನ್ಯಾಯಬೆಲೆ ಅಂಗಡಿಗಳಲ್ಲಿ ‘AHARA’ ತಂತ್ರಾಂಶದ ಮೂಲಕ ನವೆಂಬರ್ 10 ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ಇಲ್ಲವಾದಲ್ಲಿ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.


Spread the love

About Laxminews 24x7

Check Also

22 ವರ್ಷ ಹಳೆಯ NASA ಉಪಗ್ರಹ ಭೂಮಿಗೆ ವಾಪಸ್- ಬೆಂಗಳೂರಿನ ಮೇಲೂ ಬೀಳಲಿದೆಯೇ ಅವಶೇಷ?

Spread the love ವಾಷಿಂಗ್ಟನ್‌: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಸೇರಿದ 22 ವರ್ಷ ಹಳೆಯ ಉಪಗ್ರಹವೊಂದು ಇಂದು ಭೂಮಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ