ಬಳ್ಳಾರಿ: ಮಾಜಿ ಸಚಿವ ಶ್ರೀರಾಮುಲು ಸೋದರಳಿಯ ಸುರೇಶ್ ಬಾಬು ಅವರಿಗೆ ಬಿಹಾರದ ಈಸ್ಟ್ ಚಂಪಾರಣ್ ಕೋರ್ಟ್ನಿಂದ ನಾನ್ ಬೇಲೇಬಲ್ ವಾರಂಟ್ ಜಾರಿಯಾಗಿದೆ.
ಸುರೇಶ್ ಬಾಬು ಅವರ ಬಂಧನಕ್ಕಾಗಿ ಬಿಹಾರ ಪೊಲೀಸರ ತಂಡ ಬಳ್ಳಾರಿಗೆ ಆಗಮಿಸಿದ್ದು, ಬಳ್ಳಾರಿ ಎಸ್ಪಿ ಅವರ ಸಹಕಾರ ಕೋರಿದೆ. ಈ ಬಗ್ಗೆ ಬಳ್ಳಾರಿ ಎಸ್ಪಿ ಡಾ.ಸುಮನ್ ಡಿ.ಪೆನ್ನೇಕರ್ ಅವರು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.
ಈವರೆಗೂ ಯಾವ ಪ್ರಕರಣ ಸಂಬಂಧ ನಾನ್ ಬೇಲೇಬಲ್ ವಾರಂಟ್ ಜಾರಿಯಾಗಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಸದ್ಯ ವಾರಂಟ್ ಹಿಂದಿನ ಕಾರಣ ಏನು ಎನ್ನುವುದಕ್ಕೆ ಕುತೂಹಲ ಕೆರಳಿಸಿದ್ದು, ಮಾಜಿ ಶಾಸಕ ಸುರೇಶ್ ಬಾಬು ಬಂಧನ ಭೀತಿ ಎದುರಾಗಿದೆ.
Laxmi News 24×7