ಬೆಂಗಳೂರು: ಫುಟ್ಪಾತ್ಗಳ ಮೇಲೆ ವಾಹನಗಳನ್ನ ಚಲಾಯಿಸುವವರಿಗೆ ಬ್ರೇಕ್ ಹಾಕಲು 500 ರೂ. ಇದ್ದ ದಂಡವನ್ನು 5000 ರೂ.ಗೆ ಹೆಚ್ಚಿಸಲು ಇಲಾಖೆ ಮುಂದಾಗಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ರಸ್ತೆ ನಿಯಮಗಳನ್ನು ಕಠಿಣಗೊಳಿಸುವುದರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಚಾರದ ಕುರಿತು ಸಾರಿಗೆ ಇಲಾಖೆ ಮತ್ತು ಗೃಹ ಇಲಾಖೆ ಸೇರಿ ಚರ್ಚೆ ಮಾಡಿದ್ದೇವೆ. ಎಲ್ಲರೂ ಸೇರಿ ಒಮ್ಮತದ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ.
ಜನಗಳು ಓಡಾಡುವ ಫುಟ್ಪಾತ್ ಮೇಲೆ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ಚಲಾಯಿಸಿ ಹಲವಾರು ಜನರ ಪ್ರಾಣಕ್ಕೆ ಕುತ್ತು ತಂದಿದ್ದಾರೆ. ಇಂತಹವರಿಂದ ಬಹಳಷ್ಟು ಜನಕ್ಕೆ ಗಾಯಗಳಾಗಿವೆ.
ಈ ರೀತಿ ಫುಟ್ಪಾತ್ ಮೇಲೆ ವಾಹನ ಓಡಾಡಿಸಿಕೊಂಡು ಹೋಗುವವರಿಗೆ 500 ರೂ. ಫೈನ್ ಇದೆ. ಅದನ್ನು 5,000 ಸಾವಿರ ರೂ. ಮಾಡಲು ಸಾರಿಗೆ ಇಲಾಖೆ ಚರ್ಚಿಸಿದೆ. ಈ ಬದಲಾವಣೆ ಆಗೇ ಆಗುತ್ತದೆ. ಈ ತರ ಫೈನ್ಗಳನ್ನು ಜಾಸ್ತಿ ಮಾಡಿ ಟ್ರಾಫಿಕ್ ವೈಯೋಲೇಷನ್ ತಡೆಯಬೇಕು. ನಿಯಮ ಉಲ್ಲಂಘಿಸುವವರಿಗೆ ತಕ್ಕ ಪಾಠ ಕಲಿಸೋದಕ್ಕೆ ಈ ರೀತಿ ಮಾಡ್ತಿದ್ದೇವೆ ಎಂದು ಸಚಿವರು ಹೇಳಿದ್ದಾರೆ
Laxmi News 24×7