Breaking News

ಹಾಲಿನ ದರ ಆಯ್ತು ಶೀಘ್ರವೇ ಬಸ್‌ ದರ ಏರಿಕೆ – ಎಷ್ಟು ಏರಿಕೆಯಾಗಬಹುದು?

Spread the love

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗಷ್ಟೇ ಹಾಲಿನ ದರ ಹೆಚ್ಚಳವಾಗಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಬಿದ್ದ ಬೆನ್ನಲ್ಲೇ, ಇದೀಗ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಏರಿಕೆಯ ಬಿಸಿ ತಟ್ಟಲು ಸಜ್ಜಾಗಿದೆ. ನವೆಂಬರ್ ಮೊದಲ ವಾರದಲ್ಲೇ ಸಾರಿಗೆ ಇಲಾಖೆ ಪ್ರಯಾಣ ದರ ಪರಿಷ್ಕರಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ನವೆಂಬರ್ 3 ರಂದು ಸಾರಿಗೆ ಸಚಿವರು ಮತ್ತು ಅಧಿಕಾರಿಗಳ ನಡುವೆ ನಿರ್ಣಾಯಕ ಸಭೆ ನಡೆಯಲಿದ್ದು, ನವೆಂಬರ್ 4 ರಂದು ಹೊಸ ದರ ಜಾರಿಯ ಅಧಿಕೃತ ವಿವರಗಳನ್ನು ಪ್ರಕಟಿಸುವ ಸಾಧ್ಯತೆಯಿದೆ. ಬಿಎಂಟಿಸಿ ದರ ಶೇ.15 ರಿಂದ 17% ಏರಿಕೆಯ ಪ್ರಸ್ತಾವನೆ ಇದ್ದರೆ ಕೆಎಸ್‌ಆರ್‌ಟಿಸಿ/ನಿಗಮಗಳಲ್ಲಿ ಶೇ. 15% ರಷ್ಟು ಹೆಚ್ಚಳ ಮಾಡುವಂತೆ ಮನವಿ ಮಾಡಿದೆ.

‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಮುಂದುವರಿಯಲಿದ್ದು, ಅದರ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ಹೀಗಾಗಿ ಟಿಕೆಟ್ ಖರೀದಿಸಿ ಸಂಚರಿಸುವ ಪುರುಷರು ಹಾಗೂ ಇತರೆ ಪ್ರಯಾಣಿಕರ ಜೇಬಿಗೆ ಈ ಹೆಚ್ಚಳ ನೇರ ಹೊರೆಯಾಗಲಿದೆ.

ಸಚಿವ ಸಂಪುಟ ಸಭೆಯಲ್ಲಿ ನಡೆದ ಚರ್ಚೆಗಳ ನಂತರ, ದರ ಪರಿಷ್ಕರಣೆಯ ಅಂತಿಮ ತೀರ್ಮಾನವನ್ನು ಸಾರಿಗೆ ಇಲಾಖೆಯ ವಿವೇಚನೆಗೆ ಬಿಡಲಾಗಿದೆ. ನವೆಂಬರ್ 3 ರ ಸಭೆಯಲ್ಲಿ ಅಂತಿಮ ಲೆಕ್ಕಾಚಾರಗಳು ಹೊರಬೀಳಲಿವೆ.

ಇಂಧನ ಬೆಲೆ ಏರಿಕೆ, ಬಸ್‌ಗಳ ನಿರ್ವಹಣಾ ವೆಚ್ಚ ಹಾಗೂ ಸಿಬ್ಬಂದಿ ವೇತನ ಪರಿಷ್ಕರಣೆಯ ಹೊರೆಯಿಂದಾಗಿ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ಸಮಿತಿಯು ದರ ಏರಿಕೆಗೆ ಶಿಫಾರಸು ಮಾಡಿದೆ.

ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಜನಸಾಮಾನ್ಯರಿಗೆ ಈ ದರ ಏರಿಕೆ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಲಿದ್ದು, ದಿನನಿತ್ಯ ಕಚೇರಿ ಹಾಗೂ ದೂರದ ಊರುಗಳಿಗೆ ಸಂಚರಿಸುವ ಪುರುಷ ಪ್ರಯಾಣಿಕರ ಮಾಸಿಕ ಬಜೆಟ್ ಮೇಲೆ ಗಂಭೀರ ಪರಿಣಾಮ ಬೀರಲಿದೆ.


Spread the love

About Laxminews 24x7

Check Also

ಬ್ಯಾಲೆಟ್ ಪೇಪರ್‌ನಲ್ಲೇ ಕಾಂಗ್ರೆಸ್ ಸೋತಿದೆ, ಪತನದ ದಿನಗಳು ಹತ್ತಿರ ಬರ್ತಿದೆ: ನಿಖಿಲ್ ಕುಮಾರಸ್ವಾಮಿ

Spread the loveರಾಮನಗರ: ಕಾಂಗ್ರೆಸ್  ಇವಿಎಂ ಮೇಲೆ ಅನುಮಾನ ಪಟ್ಟು, ಬ್ಯಾಲೆಟ್ ಪೇಪರ್  ಚುನಾವಣೆ ಬೇಕು ಅಂತಿದ್ದರು. ಈಗ ಬ್ಯಾಲೆಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ