Breaking News

ಐವಿ ಇಂಜೆಕ್ಷನ್ ಬಳಿಕ ನೀಲಿ ಬಣ್ಣಕ್ಕೆ ತಿರುಗಿದ ಪಾದ – 57 ದಿನದ ಹಸುಗೂಸಿನ ಬೆರಳುಗಳು ಕಟ್

Spread the love

ಬೆಂಗಳೂರು: ಐವಿ ಇಂಜೆಕ್ಷನ್ ಬಳಿಕ 57 ದಿನದ ಹಸುಗೂಸಿನ ಪಾದ ನೀಲಿ ಬಣ್ಣಕ್ಕೆ ತಿರುಗಿದ್ದಕ್ಕೆ ಕಾಲಿನ ಬೆರಳುಗಳನ್ನು ಕತ್ತರಿಸಿರುವ ಮಾಡಿರುವ ಘಟನೆ ನಗರದ ವಾಣಿ ವಿಲಾಸ ಆಸ್ಪತ್ರೆಯಲ್ಲಿ ನಡೆದಿದೆ.

ಸೆ.15ರಂದು ಜ್ವರಕ್ಕೆ ಚಿಕಿತ್ಸೆ ಕೊಡಿಸಲು ಮಗುವನ್ನು ವಾಣಿ ವಿಲಾಸ ಆಸ್ಪತ್ರೆಗೆ ಕರೆತಂದಾಗ ಅಲ್ಲಿನ ವೈದ್ಯರು ಐವಿ ಇಂಜೆಕ್ಷನ್ ನೀಡಿದ್ದರು. ಅದಾದ ಬಳಿಕ ಮಗುವಿನ ಕಾಲು ನೀಲಿ ಬಣ್ಣಕ್ಕೆ ತಿರುಗಿದ್ದು, ಕಾಲಿನ ಸ್ಥಿತಿ ಹದಗೆಟ್ಟಿತ್ತು ಎಂದು ಪೋಷಕರು ಆರೋಪಿಸಿದ್ದಾರೆ.

ಸದ್ಯ ವೈದ್ಯರು ಮಗುವಿನ ಕಾಲಿನ ಬೆರಳುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದಿದ್ದಾರೆ.

ಈ ಬಗ್ಗೆ ಮಗುವಿನ ತಂದೆ ಅಮರ್ ನಾಥ್ ಮಾತನಾಡಿ, ಮಗುವನ್ನ ಸೆ.15ಕ್ಕೆ ಜ್ವರ, ಪಿಡ್ಸ್ ಅಂತ ಕರೆದುಕೊಂಡು ಬಂದಿದ್ವಿ. ಸೆ.23ನೇ ತಾರೀಖಿನಂದು ಮಗುವಿನ ಕಾಲು ನೀಲಿ ಬಣ್ಣಕ್ಕೆ ತಿರುಗಿತ್ತು. ಆಸ್ಪತ್ರೆಯಲ್ಲಿ ಹೇಳಿದ್ರೂ ನಿರ್ಲಕ್ಷ್ಯ ಮಾಡಿದ್ರು. ಚೆನ್ನಾಗಿದ್ದ ಮಗುವಿನ ಕಾಲನ್ನ ತೆಗೆದುಕೊಂಡು ಹೋಗಿ ಅಂತಿದ್ದಾರೆ. ನಮಗೆ ನ್ಯಾಯ ಬೇಕು. 58 ದಿನದ ಮಗುವಿನ ಕಾಲು ತೆಗೆದುಕೊಟ್ಟಿದ್ದಾರೆ. ಇದಕ್ಕೆ ವಾಣಿವಿಲಾಸ್ ವೈದ್ಯರು, ಸಿಬ್ಬಂದಿಗಳೇ ಕಾರಣ ಎಂದಿದ್ದಾರೆ.

ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ.ಸುರೇಶ್ ಹಾಗೂ ಹೆಚ್‌ಓಡಿ ಡಾ.ಚಿಕ್ಕನರಸರೆಡ್ಡಿ ಮಾತನಾಡಿ, Septicemia ನಂಜಿನ ಸಮಸ್ಯೆಯಿಂದ ವಾಣಿವಿಲಾಸ್ ಆಸ್ಪತ್ರೆಗೆ ಬಂದಿದ್ರು. ಮೊದಲು ಮಗುವನ್ನ ಬೇರೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ರು. ನಂತರ ಹೆಚ್ಚಿನ ಚಿಕಿತ್ಸೆಗೆ ವಾಣಿವಿಲಾಸ್ ಆಸ್ಪತ್ರೆಗೆ ಬಂದಿದ್ರು.. ಆಸ್ಪತ್ರೆಗೆ ಬಂದಾಗಲೇ ಮಗುವಿಗೆ ನಂಜಾಗಿತ್ತು. ನಮ್ಮಿಂದ ಯಾವುದೇ ನಿರ್ಲಕ್ಷ್ಯವಾಗಿಲ್ಲ. ಬಂದ ಕೂಡಲೇ ಮಗುವಿಗೆ NICU ವಿನಲ್ಲಿ ಚಿಕಿತ್ಸೆ ನೀಡಿದ್ದೇವೆ. ಮಗುವಿನ ಪ್ರಾಣಕ್ಕೆ ತೊಂದರೆ ಇತ್ತು. ಮಗುವಿನ ಪ್ರಾಣ ಉಳಿಸುವುದು ನಮಗೆ ಚಾಲೆಂಜ್ ಆಗಿತ್ತು. ಕೊನೆಗೆ ನಂಜು ಹರಡದಂತೆ ಮಗುವಿನ ನಾಲ್ಕು ಬೆರಳು ತೆಗೆದಿದ್ದೇವೆ. ಸದ್ಯ ಮಗುವಿನ ಸ್ಥಿತಿ ಸಹಜ ಸ್ಥಿತಿಗೆ ಬರ್ತಿದೆ. ಇನ್ನೂ ಎರಡು ವಾರ ಚಿಕಿತ್ಸೆ ಮುಂದುವರೆಯುತ್ತೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ದೆಹಲಿ ಹೈಕೋರ್ಟ್‌ನಲ್ಲಿ ನೆಹಾ ಬೋರಾಗೆ ಹಿನ್ನಡೆ – 10,000 ರೂ. ಬಾಂಡ್‌ಗೆ ಸಹಿ ಹಾಕಿ ಶಾಂತಿ ಕಾಪಾಡುವಂತೆ ಸೂಚನೆ

Spread the loveನವದೆಹಲಿ: ಅಖಿಲ ಭಾರತ ವಿದ್ಯಾರ್ಥಿ ಸಂಘದ ರಾಷ್ಟ್ರೀಯ ಅಧ್ಯಕ್ಷೆ ಹಾಗೂ ಹೋರಾಟಗಾರ್ತಿ ನೆಹಾ ಬೋರಾ ಅವರಿಗೆ ದೆಹಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ