Breaking News

2011ರ ಘಟನೆ ಇಟ್ಕೊಂಡು 2023ರಲ್ಲಿ ಸಿದ್ದರಾಮಯ್ಯ ಸ್ಟಿಂಗ್‌ ಆಪರೇಷನ್‌; ಕೃಪಾ ಆಳ್ವಾ ವಿರುದ್ಧ ಹೆಚ್‌ಡಿಕೆ ಮತ್ತೊಂದು ಬಾಂಬ್‌

Spread the love

ಬೆಂಗಳೂರು: 2011ರಲ್ಲಿ ನಡೆದ ಘಟನೆ ಇಟ್ಕೊಂಡು 2023ರಲ್ಲಿ ಕೃಪಾ ಆಳ್ವಾ ಅವರಿಂದ ಸ್ಟಿಂಗ್‌ ಆಪರೇಷನ್‌ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ  ಮತ್ತೊಂದು ಬಾಂಬ್‌ ಸಿಡಿಸಿದರು.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಲವು ವಿಚಾರಗಳನ್ನ ಪ್ರಸ್ತಾಪಿಸಿದರು. ಕೆಪಿಎಸ್‌ಸಿ, ನೈಸ್, ಬಿಡದಿ, ಸ್ಟಿಂಗ್ ವಿಚಾರ ಯಾವುದನ್ನು ನಾನು ಬಿಡಲ್ಲ. ಡಿಕೆ ಶಿವಕುಮಾರ್‌ ಅವರಿಂದ ಸಿದ್ದರಾಮಯ್ಯ ಅವರ ವರ್ಚಸ್ಸು ಹಾಳಾಗಿದೆ. ಯತೀಂದ್ರ ಹೇಳಿದ್ದು ಸತ್ಯ, ನಿಮಗೆ ಸ್ವಲ್ಪ ಕ್ರಿಯೆ ಇದ್ದರೆ ಯಾಕೆ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಅಪರೇಷನ್‌ ಮಾಡಿದ್ರಿ? ಎಂದು ಪ್ರಶ್ನೆ ಮಾಡಿದ್ರು.

ಕಾಂಗ್ರೆಸ್ ಹೆಣ್ಣು ಮಗಳು ಕೃಪಾ ಆಳ್ವಾ ಸ್ಟಿಂಗ್ ಆಪರೇಷನ್‌  ಮಾಡಿದ್ದಾರೆ. ಯಾಕೆ ಸಿದ್ದರಾಮಯ್ಯ ಹೆಸರು ಹಾಳು ಮಾಡಿದ್ರಿ? 2011 ರಲ್ಲಿ ನಡೆದಿದ್ದ ಯಾವುದೋ ಘಟನೆ ಇಟ್ಟಿಕೊಂಡು 2023 ರಲ್ಲಿ ಈ ಸ್ಟಿಂಗ್ ಆಪರೇಷನ್‌ ಮಾಡಿಸಿದ್ದಾರೆ. ಕೃಪಾ ಆಳ್ವಾ, ಸಿದ್ದರಾಮಯ್ಯ ಬಲಗೈ ಬಂಟ, ಅವರೇ ಇದನ್ನ ಮಾಡೋದು. ನಿಮ್ಮ ಪಕ್ಷದವರು ಮಾಡಿದ್ದು ನಮ್ಮವರಿಗೆ ನೊಟೀಸ್ ಕೊಡ್ತೀರಾ? ಆ ಹೆಣ್ಣು ಮಗಳ ವಿಚಾರಣೆ ಮಾಡಿದ್ರಾ? ಈ ಸತ್ಯ ಹೊರಗೆ ತರುತ್ತೀರಾ. ಹೋಂ ಮಿನಿಸ್ಟರ್ ಸಾಕ್ಷಿ ಕೊಡಿ ಅಂತಾರೆ, ಬೀದಿ ಬೀದಿಗಳಲ್ಲಿ ಚೆಲ್ಲಾಡುತ್ತಿದೆ. ಸಾಕ್ಷಿ ಬೇಕಾ? ಅಂತ ಪ್ರಶ್ನೆಗಳ ಮಳೆ ಸುರಿಸಿದ್ರು.

ಮುಂದುವರಿದು.. ಕರ್ನಾಟಕದಲ್ಲಿ ಕಾಂಗ್ರೆಸ್ ಸಿದ್ದರಾಮಯ್ಯರಿಂದ ಉಳಿದಿದೆ. ಅವರಿಗೆ ನೀವು ಹೀಗೆ ಮಾಡೋದಾ? ಇವರಿಗೆ ಮಾನ ಮರ್ಯಾದೆ ಇದೆಯಾ? ಸಿದ್ದರಾಮಯ್ಯ ಬಿಟ್ಟು ನಿಮ್ಮಲ್ಲಿ ವೋಟ್‌ ತರೋಕೆ ಯಾರು ಇದ್ದೀರ? ಸಿದ್ದರಾಮಯ್ಯ ವರ್ಚಸ್ಸು ಹಾಳು ಮಾಡಿ ಕಾಂಗ್ರೆಸ್ ಮುಗಿಸೋಕೆ ಹೋಗಿದ್ದೀರಾ? ಇವತ್ತು ಅವರ ಬಾಯಿ ಮುಚ್ಚಿಸಿ ಮನೆಯಲ್ಲಿ ಕೂರಿಸಿದ್ದೀರಿ. ಸಿದ್ದರಾಮಯ್ಯ ಅವರ ವರ್ಚಸ್ಸು ಹಾಳು ಮಾಡಿದ್ದು ಡಿಕೆ ಶಿವಕುಮಾರ್. ಡಿಕೆಶಿ ಅವರೇ ಹೊಟೇಲ್ ಕೂತು ಯಾಕೆ ಚರ್ಚೆ ಮಾಡಿದ್ರಿ? ಡಿಕೆಶಿ ಸುತ್ತ ಇರೋರು, ಸ್ವಿಂಗ್ ಮಾಡಿದವನ ಫೋನ್ ಪಡೆದ್ರೆ ಸತ್ಯ ಗೊತ್ತಾಗುತ್ತೆ ಎಂದು ಸ್ಫೋಟಕ ಹೇಳಿಕೆ ನೀಡಿದರು.

ಅವಶ್ಯಕತೆ ಬಂದ್ರೆ ಸಿದ್ದರಾಮಯ್ಯ ಭೇಟಿ
ಇನ್ನೂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ್ದೀರಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಸಿದ್ದರಾಮಯ್ಯ ಭೇಟಿ ಮಾಡೋ ಅವಶ್ಯಕತೆ ಬಂದರೆ ಭೇಟಿ ಮಾಡ್ತೀನಿ. ಅವರು ಮಾಜಿ ಮುಖ್ಯಮಂತ್ರಿ ಆಗಿದ್ದವರು ಭೇಟಿ ಮಾಡೋದ್ರಲ್ಲಿ ತಪ್ಪೇನು ಇಲ್ಲ ಎಂದಿದ್ದಾರೆ.


Spread the love

About Laxminews 24x7

Check Also

ದೆಹಲಿ ಹೈಕೋರ್ಟ್‌ನಲ್ಲಿ ನೆಹಾ ಬೋರಾಗೆ ಹಿನ್ನಡೆ – 10,000 ರೂ. ಬಾಂಡ್‌ಗೆ ಸಹಿ ಹಾಕಿ ಶಾಂತಿ ಕಾಪಾಡುವಂತೆ ಸೂಚನೆ

Spread the loveನವದೆಹಲಿ: ಅಖಿಲ ಭಾರತ ವಿದ್ಯಾರ್ಥಿ ಸಂಘದ ರಾಷ್ಟ್ರೀಯ ಅಧ್ಯಕ್ಷೆ ಹಾಗೂ ಹೋರಾಟಗಾರ್ತಿ ನೆಹಾ ಬೋರಾ ಅವರಿಗೆ ದೆಹಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ