ಬೆಂಗಳೂರು: ಬೈಕ್ ಟ್ಯಾಕ್ಸಿ ಹತ್ತಿ 29 ಕಿ.ಮೀ. ಸವಾರಿ ಮಾಡಿ, ಬಳಿಕ ಡ್ರಾಪ್ ಮಾಡಿದಾಗ ಯುವತಿಯೊಬ್ಬರು ನನ್ನ ಬಳಿ ಹಣವಿಲ್ಲ ಎಂದು ಕಿರಿಕ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಓರ್ವ ಯುವತಿ ಗುಂಜೂರು ರಸ್ತೆಯಿಂದ ಸುಭೇದಾರ್ ಪಾಳ್ಯಕ್ಕೆ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಳು. ಟ್ಯಾಕ್ಸಿ ಬಂದ ಮೇಲೆ ಬರೋಬ್ಬರಿ 89 ನಿಮಿಷ ಪ್ರಯಾಣ ಮಾಡಿದ್ದಾಳೆ. ಡ್ರಾಪ್ ಮಾಡಿದ ಮೇಲೆ ಚಾಲಕ 384 ರೂ. ಕೇಳಿದಾಗ ನನ್ನ ಬಳಿ ಹಣ ಇಲ್ಲ ಎಂದು ಕ್ಯಾತೆ ತೆಗೆದಿದ್ದಾಳೆ.
ಚಾಲಕ, ಅಕ್ಕಾ.. ಅಕ್ಕಾ ಎಂದು ಕೇಳಿಕೊಂಡು ಹಣ ಕೇಳಿದ್ರೂ ಕೂಡ ಯುವತಿ ಮಾತ್ರ ನನ್ನ ಹತ್ರ ದುಡ್ಡಿಲ್ಲ, ಏನ್ ಮಾಡ್ಕೋತೀಯಾ ಎಂದು ಅವಾಜ್ ಹಾಕಿದ್ದಾಳೆ. ದುಡ್ಡಿಲ್ಲ ಅಂದ್ಮೇಲೆ ಯಾಕೆ ಬಂದಿದ್ದೀರಾ ಎಂದು ಕೇಳಿದ್ದಕ್ಕೆ ಹೊಡೆದು ಬಿಡ್ತೀನಿ. ಮುಚ್ಕೊಂಡು ನಿಂತ್ಕೋ ಎಂದಿದ್ದಾಳೆ. ಯುವತಿಯ ವರಸೆ ಕಂಡು ಬೈಕ್ ರೈಡರ್ ಕಕ್ಕಾಬಿಕ್ಕಿಯಾಗಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Laxmi News 24×7