ರಾಮನಗರ: ನಡುರಾತ್ರಿ 2 ಗಂಟೆ ಸುಮಾರಿಗೆ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ ಖಾದರ್ ಭೇಟಿ ನೀಡಿದ್ದರು.
ಖಾಸಗಿ ಕಾರ್ಯಕ್ರಮ ನಿಮಿತ್ತ ತಡರಾತ್ರಿ ಚನ್ನಪಟ್ಟಣಕ್ಕೆ ಅವರು ಬಂದಿದ್ದರು. ಈ ವೇಳೆ ಸಾರ್ವಜನಿಕ ಆಸ್ಪತ್ರೆಯನ್ನು ಪರಿಶೀಲನೆ ನಡೆಸಿದರು. ಜನರಲ್ ವಾರ್ಡ್, ಐಸಿಯು, ಶೌಚಾಲಯವನ್ನು ಪರಿಶೀಲಿಸಿದರು. ಸಿಬ್ಬಂದಿ ಹಾಜರಾತಿ ಪರಿಶೀಲಿಸಿ ವೈದ್ಯರಿಂದ ಮಾಹಿತಿ ಸಂಗ್ರಹಿಸಿದರು.
ಇದೇ ವೇಳೆ ಔಷಧಿಯನ್ನು ಹೊರಗಡೆ ಮೆಡಿಕಲ್‌ಗಳಿಗೆ ಬರೆದುಕೊಡುವ ವಿಚಾರಕ್ಕೆ ಸಚಿವರು ಗರಂ ಆದರು. ಇಷ್ಟೆಲ್ಲಾ ಸೌಲಭ್ಯ ಇದ್ದರೂ, ಹೊರಗಡೆ ಯಾಕೆ ಬರೆದು ಕೊಡ್ತೀರಾ ಎಂದು ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದರು.
Laxmi News 24×7