Breaking News

ನನಗೆ ಮದ ಇದ್ದರೆ ಇಳಿಸಲಿ, ನಾನು ಸ್ವಾಮೀಜಿಗಳು ನನ್ನ ಸೇವೆ ಮಾಡಲಿ ಅಂತ ಹೇಳಿಲ್ಲ: ಡಿಕೆಶಿ

Spread the love

ಬೆಂಗಳೂರು: ನನಗೆ ಮದ ಅಂತ ಹೇಳುತ್ತಾರೆ. ಮದ ಇಳಿಸಲಿ ಯಾರು ಬೇಡ ಅಂದರು. ಮದ ನನಗೆ ಇದ್ದರೆ ಇಳಿಸಲಿ ಎಂದು ಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಲಿಂಗಾಯತ ಸ್ವಾಮೀಜಿಗಳು ನನ್ನ ಸೇವೆ ಮಾಡಬೇಕು ಎಂಬ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಸಿಎಂ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ನನ್ನ ಹೇಳಿಕೆ ತಿರುಚಲಾಗಿದೆ. ನನ್ನ ಸೇವೆ ಮಾಡಬೇಕು ಅಂತ ನಾನು ಸ್ವಾಮೀಜಿಗಳಿಗೆ ಹೇಳಿಲ್ಲ. ಯಾವ ಸ್ವಾಮೀಜಿಗೂ ನಾನು ಅಗೌರವ ತೋರಿಸಿಲ್ಲ. ನಾನು ಜನರಿಗೆ, ಮತದಾರರಿಗೆ ಅದನ್ನ ಹೇಳಿದ್ದು. ಸ್ವಾಮೀಜಿಗಳಿಗೆ ನಾನು ಹೇಳಿಲ್ಲ. ಅವರ ಪ್ರತಿನಿಧಿಗಳಿಗೆ, ಮತದಾರರಿಗೆ ನಮ್ಮ ಸೇವೆ ಮಾಡಬೇಕು, ನಮ್ಮ ರಕ್ಷಣೆ ಮಾಡಬೇಕು ನಾವು ಸಹಾಯ ಮಾಡುತ್ತೇವೆ ಎಂದು ಹೇಳಿದ್ದೇನೆ ಎಂದು ತಿಳಿಸಿದರು.

ನನಗೆ ಮಠಗಳು, ಸ್ವಾಮೀಜಿಗಳ ಮೇಲೆ ಗೌರವ ಈ ರಾಜ್ಯದಲ್ಲಿ ಯಾರಿಗೆ ಇದೆಯೋ ಗೊತ್ತಿಲ್ಲ.ನನಗೆ ಅವರ ಮೇಲೆ ಗೌರವ ಇದೆ. ಪಂಚಪೀಠದವರು ಎಲ್ಲರು ಬಂದಿದ್ದರು. ಪ್ರತಿ ಸಮಯದಲ್ಲೂ ಅವರ ಪಾದಗಳಿಗೆ ನಮಸ್ಕಾರ ಮಾಡಿದ್ದೇನೆ, ನಾನು ದೊಡ್ಡ ಭಕ್ತ. ದೈವರ ಮೇಲೆ ನಂಬಿಕೆ ಇರೋನು. ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ಶಾಂತಿ ಅಂತ ಎಲ್ಲಾ ಜಾತಿ, ಧರ್ಮಕ್ಕೆ ಗೌರವ ಕೊಡುತ್ತಿದ್ದೇನೆ. ಎಲ್ಲರು ಒಂದೇ ಎಂಬ ಭಾವನೆಯಿಂದ ರಾಜಕೀಯ ಶುರು ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.


Spread the love

About Laxminews 24x7

Check Also

ಡಿಸೆಂಬರ್ – ಜನವರಿಗೆ ಮೊದಲ ಹಂತದಲ್ಲಿ 5 ಲಕ್ಷ ಸೈಟು ಹಂಚಿಕೆ: ಡಿಸಿಎಂ ಪರಮೇಶ್ವರ್‌

Spread the loveಬೆಂಗಳೂರು: ರಾಜ್ಯದ ಜನರಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ರೂಪಿಸಿರುವ ಯೋಜನೆಯಡಿ ಡಿಸೆಂಬರ್‌–ಜನವರಿಯಲ್ಲಿ ಮೊದಲ ಹಂತದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ