Breaking News

ಕುಮಾರಸ್ವಾಮಿ ಅವರ ಮನೆಯಲ್ಲಿ ಏನಾಗ್ತಿದೆ ಅಂತ ಮೊದಲು ತಿಳಿದುಕೊಳ್ಳಲಿ: ಪ್ರಿಯಾಂಕ್ ಖರ್ಗೆ

Spread the love

ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮೊದಲು ಅವರ ಮನೆಯಲ್ಲಿ ಮಕ್ಕಳು ಏನು ಮಾಡುತ್ತಿದ್ದಾರೆ ಅಂತ ತಿಳಿದುಕೊಳ್ಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ  ಕುಮಾರಸ್ವಾಮಿಗೆ  ತಿರುಗೇಟು ನೀಡಿದ್ದಾರೆ.

ಸಿದ್ದಾರ್ಥ ಟ್ರಸ್ಟ್‌ನಿಂದ ಫಾರ್ಮ್ 7 ಪ್ರಿಂಟ್ ಆಗುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದಾರ್ಥ ವಿಹಾರ್ ಟ್ರಸ್ಟ್‌ನಲ್ಲಿ ಏನಾಗುತ್ತಿದೆ ಅಂತ ಕುಮಾರಸ್ವಾಮಿಗೆ ಗೊತ್ತಿಲ್ಲ. ಮೊದಲು ಅವರ ಮನೆ ಮಕ್ಕಳಿಗೆ ನೋಡಿಕೊಳ್ಳೋಕೆ ಹೇಳಿ. ಮನೆಯಲ್ಲಿ ಮಕ್ಕಳು ಏನು ಮಾಡುತ್ತಿದ್ದಾರೆ ನಿಮಗೆ ಗೊತ್ತಿಲ್ಲ. ಸಿದ್ದಾರ್ಥ ವಿಹಾರ್ ಟ್ರಸ್ಟ್‌ನಲ್ಲಿ ಏನಾಗುತ್ತೆ ಗೊತ್ತಾ ನಿಮಗೆ? ಚುನಾವಣೆ ಆಯೋಗದಲ್ಲಿ ಏನಾಗುತ್ತಿದೆ ಗೊತ್ತಾ ಅವರಿಗೆ ಎಂದು ಕಿಡಿಕಾರಿದರು.

ಹಿರಿಯ ನಾಯಕರು ನೀವು ಆರ್‌ಎಸ್‌ಎಸ್ ಹೇಳಿಕೊಟ್ಟಿರುವ ಪಾಠ ಹೇಳಿದ್ರೆ ನಾವು ಮಾತಾಡಬೇಕಾಗುತ್ತದೆ. ನೀವು ಮರ್ಯಾದೆ ಕೊಡಿ ನಾವು ಮರ್ಯಾದೆ ಕೊಡುತ್ತೇವೆ. ಮರ್ಯಾದೆ ಬಿಟ್ಟು ಮಾತಾಡೋಕೆ ನೀವು ರೆಡಿ ಇದ್ದರೆ ನಾವೂ ರೆಡಿ ಇದ್ದೇವೆ ಎಂದು ವಾಗ್ದಾಳಿ ನಡೆಸಿದರು.ಇನ್ನು ಕಾಂಗ್ರೆಸ್ ವಿರುದ್ದ ರಾಜ್ಯಪಾಲರಿಗೆ ಎನ್‌ಡಿಎ ಕೂಟ ದೂರು ಕೊಟ್ಟ ಕುರಿತು ಪ್ರತಿಕ್ರಿಯಿಸಿದ ಅವರು, ಎನ್‌ಡಿಎ ನಾಯಕರು ರಾಜ್ಯಪಾಲರಿಗೆ ದೂರು ಕೊಡಲಿ. ಅವರ ಲೆಟರ್ ಹೆಡ್‌ನಲ್ಲಿ ಫಾರ್ಮ್ 7 ಹೋಗಿದೆ. ಅದರ ಬಗ್ಗೆ ದೂರು ಕೊಡಲಿ. ಕಾರ್ಪೋರೇಟರ್, ನಾಯಕರು, ಲೆಟರ್ ಹೆಡ್‌ನಲ್ಲಿ ಫಾರ್ಮ್ 7 ಯಾಕೆ ಇದೆ? 7 ಸಾವಿರ 5 ಸಾವಿರ ಫಾರ್ಮ್ 7 ಡಿಲೀಟ್ ಮಾಡಲು ಕೊಡುತ್ತಿದ್ದೀರಾ. ಅದೆಲ್ಲವನ್ನು ರಾಜ್ಯಪಾಲರು, ಚುನಾವಣೆ ಆಯೋಗಕ್ಕೆ ಹೇಳಲಿ. ಇವರು ಏನು ಬೇಕಾದರೂ ಮಾಡಬಹುದಾ ಎಂದು ಹರಿಹಾಯ್ದರು.

ಕುಮಾರಸ್ವಾಮಿ ಫಾರ್ಮ್ 7 ಕೊಡೋದು ಸಂವಿಧಾನ ಹಕ್ಕು ಅಂತಾರೆ. ಮತದಾರರು ತಮ್ಮ ಮತ ಡಿಫೆಂಡ್ ಮಾಡಿಕೊಳ್ಳೋದು ಅವರ ಹಕ್ಕು ಅಲ್ಲವಾ? ಮತದಾರರಿಗೆ ಮೋಸ ಮಾಡಿದ್ರೆ, ಪಟ್ಟಿಯಿಂದ ಹೊರಗೆ ಇಟ್ಟರೆ ನನ್ನ ಹಕ್ಕು ಅಂತ ಅವರು ದೂರು ಕೊಡಬಹುದು ಅಲ್ಲವಾ? ನಾನು ಬದುಕಿದ್ದೇನೆ ಅಂತ ದೂರು ಕೊಡೋದು ತಪ್ಪಾ ಎಂದು ಗುಡುಗಿದರು.

ಎಫ್‌ಐಆರ್ ರದ್ದು ಮಾಡದೇ ಹೋದ್ರೆ ನಮ್ಮ ಕಾರ್ಯಕರ್ತರನ್ನು ಪೊಲೀಸ್ ಠಾಣೆಗೆ ನುಗ್ಗಿಸುತ್ತೇವೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಪೊಲೀಸ್ ಠಾಣೆಗೆ ನುಗ್ಗಿದ್ರೆ ಏನು ಮಾಡ್ತೀನಿ ಗೊತ್ತಲ್ಲ. ನುಗ್ಗಿದ್ರೆ ಕರ್ನಾಟಕದ ಗೃಹ ಸಚಿವರು ಏನು ಮಾಡ್ತಾರೆ ಅವರಿಗೂ ಗೊತ್ತಿದೆ. ನುಗ್ಗುತ್ತೇನೆ, ಹೊಡೆಯುತ್ತೇನೆ, ಬಡಿಯುತ್ತೇನೆ ಇವೆಲ್ಲ ಇಲ್ಲಿ ನಡೆಯಲ್ಲ. ಉತ್ತರ ಪ್ರದೇಶದಲ್ಲಿ ಇಟ್ಟುಕೊಳ್ಳಿ. ಇಲ್ಲಿ ಏನೇ ನಡೆದರೂ ಅಂಬೇಡ್ಕರ್ ಅವರ ಸಂವಿಧಾನ ನಡೆಯುತ್ತದೆ ಅಷ್ಟೇ ಎಂದು ತಿರುಗೇಟು ಕೊಟ್ಟರು.

ಪ್ರಿಯಾಂಕ್ ಖರ್ಗೆ ಪೊಲೀಸ್ ಇಲಾಖೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಕೋರ್ಟ್‌ಗೆ ಹೋಗೋಕೆ ಹೇಳಿ. ಅವರು ಮಾಡಿದ್ದೆಲ್ಲಾ ಕಾನೂನಾತ್ಮಕವಾಗಿದೆ ಅಂತನಾ? ನಾವು ಏನು ಅಕ್ರಮ ಮಾಡುತ್ತಿದ್ದೇವೆ ಹೇಳಲಿ. ಮಾಜಿ ಸಿಎಂ ಅವರಿಗೆ ಕಾಮನ್ ಸೆನ್ಸ್ ಇಲ್ಲವಾ? ಬಿಎಲ್‌ಒ 100, 200, 1 ಸಾವಿರ ಫಾರ್ಮ್ 7 ಕೊಡಬಹುದಾ? ದುಡ್ಡು ಕೊಟ್ಟು, ದುಡ್ಡು ಹಂಚಿ ಆರಿಸಿ ಬಂದವರು ಇವರು. ಅದಕ್ಕೆ ಇವರಿಗೆ ಪ್ರೊಸೆಸ್ ಗೊತ್ತಿಲ್ಲ. ಬಿಎಲ್‌ಒಗಳು ಬಿಜೆಪಿಯಿಂದ ಒತ್ತಡ ಬಂದಿದೆ ಅಂತ ನಮ್ಮ ಬಳಿ ಹೇಳಿದ್ದಾರೆ. ಇದರ ಬಗ್ಗೆ ಬಿಜೆಪಿಯವರನ್ನು ಕೇಳಿ ಎಂದು ವಾಗ್ದಾಳಿ ನಡೆಸಿದರು.


Spread the love

About Laxminews 24x7

Check Also

ತೊಂದರೆ ಆದ್ರೆ ಮಾತ್ರ ಕಾಯ್ದೆ ತೋರಿಸುತ್ತೀರಿ, ಅವಘಡ ಆಗಿದ್ರೆ ಯಾರು ಹೊಣೆ? – ದೇವಿಗೆರೆಯಲ್ಲಿ ಗಣೇಶ ವಿಸರ್ಜನೆಗೆ ಡಿಸಿ ಅಸಮಾಧಾನ

Spread the loveಹಾಸನ: ದೇವಿಗೆರೆಯಲ್ಲಿ ಗಣೇಶ ವಿಸರ್ಜನೆ  ವೇಳೆ ಯಾವುದಾದರೂ ಅವಘಡ ಸಂಭವಿಸಿದ್ದರೆ ಜಿಲ್ಲಾಡಳಿತ ಸಮಸ್ಯೆಗೆ ಸಿಲುಕುತ್ತಿತ್ತು. ಅದರ ಹೊಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ