ಬೆಂಗಳೂರು: ರಾಜ್ಯದ ಜನತೆಗೆ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಹಾಲಿನ ದರ 8 ರೂ. ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರ ಜೊತೆಗೆ ಬಸ್ ಟಿಕೆಟ್ ದರ ಹೆಚ್ಚಳಕ್ಕೂ ಒಪ್ಪಿಗೆ ಸೂಚಿಸಲಾಗಿದೆ.
ಬಹುತೇಕ ನವೆಂಬರ್ 1 ರಿಂದ ಹಾಲಿನ ದರ ಹೆಚ್ಚಳವಾಗುವ ಸಾಧ್ಯತೆ ಇದೆ. 80:20 ರಂತೆ ದರ ಏರಿಕೆ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಅಂದರೆ, 8 ರೂ. ಏರಿಕೆಯಾದರೆ 6 ರೂ. ರೈತರಿಗೆ ಮತ್ತು 2 ರೂ. ಒಕ್ಕೂಟಗಳಿಗೆ ಸಿಗಲಿದೆ. ಸರ್ಕಾರಕ್ಕೆ 70:30 ರಂತೆ ದರ ಏರಿಕೆಗೆ ಒಕ್ಕೂಟಗಳು ಮನವಿ ಮಾಡಿದ್ದವು. ಆದರೆ, 80:20 ರಂತೆ ದರ ಏರಿಕೆ ಮಾಡಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಅದರಂತೆಯೇ 8 ರೂ. ಪೈಕಿ 6 ರೂ. ರೈತರಿಗೆ ಮತ್ತು 2 ರೂ. ಒಕ್ಕೂಟಗಳಿಗೆ ನೀಡುವ ಸಾಧ್ಯತೆಯಿದೆ.
ಬಸ್ ಟಿಕೆಟ್ ದರ ಹಾಗೂ ಹಾಲಿನ ದರ ಎರಡು ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಆದರೆ, ಅಧಿಕೃತ ಘೋಷಣೆ ಮಾಡದಿರಲು ತೀರ್ಮಾನಿಸಿದೆ. ಚುನಾವಣಾ ಆಯೋಗಕ್ಕೆ ಪ್ರಸ್ತಾಪ ಕಳುಹಿಸಿ ಅವರ ಅನುಮತಿ ಸಿಕ್ಕ ಮೇಲೆ ಅಧಿಕೃತ ಘೋಷಣೆ ಮಾಡಲು ಸರ್ಕಾರ ನಿರ್ಧರಿಸಿದೆ.
ಹಾಲಿನ ಮೇಲೆ ಪೂರ್ಣ 8 ರೂ. ದರ ಏರಿಕೆಯಾದರೆ
1 ಲೀಟರ್ ದರ
ಟೋನ್ಡ್ ಹಾಲು
46- 54 ರೂ.
ಹೋಮೋಜಿನೈಸ್ಡ್ ಟೋನ್ಡ್ ಹಾಲು
47- 55 ರೂ.
ಹೋಮೋಜಿನೈಸ್ಡ್ ಹಸುವಿನ ಹಾಲು
50- 58 ರೂ.
ಶುಭಂ ಹಾಲು
52- 60 ರೂ.
ಸಮೃದ್ಧಿ ಹಾಲು
55- 64 ರೂ.
ಸ್ಪೆಷಲ್ ಹಾಲು
52- 60 ರೂ.
ಡಬಲ್ ಟೋನ್ಡ್ ಹಾಲು
43- 51 ರೂ.
ಆರೆಂಜ್ ಪ್ಯಾಕೆಟ್: ಹಸುವಿನ ಹಾಲು: 50 – 58 ರೂ.
ಗ್ರೀನ್ ಸ್ಪೆಷಲ್: 50 – 58 ರೂ.
ನಾರ್ಮಲ್ ಗ್ರೀನ್: ಹಸುವಿನ ಹಾಲು – 50- 58 ರೂ.
Laxmi News 24×7