ಬೆಂಗಳೂರು: ಪ್ರದೋಷ್ ಮಾಫಿ ಸಾಕ್ಷಿ ಸಂಬಂಧ ದರ್ಶನ್ ಸಲ್ಲಿಸಿದ್ದ ಎರಡು ಅರ್ಜಿಗಳನ್ನ ಸೆಷನ್ಸ್ ಕೋರ್ಟ್ ವಜಾ ಮಾಡಿದೆ.
ಜೈಲಿಂದ ಪ್ರದೋಷ್ ಕರೆತರುವಾಗ ಯಾರೊಂದಿಗೂ ಮಾತನಾಡಲು ಅವಕಾಶ ನೀಡಬಾರದು ಅಂತಾ ಸಿಆರ್ ಪಿಸಿ ಸೆಕ್ಷನ್ 267 ಮತ್ತು ಬಿಎನ್ಎಸ್ಎಸ್ ಸೆಕ್ಷನ್ 302ರ ಅಡಿಯಲ್ಲಿ ಸಲ್ಲಿಸಿದ್ದ ಒಂದು ಅರ್ಜಿ, ಎವಿಡೆನ್ಸ್ ಆ್ಯಕ್ಟ್ ಸೆಕ್ಷನ್ 137 ಮತ್ತು 138 ಅಡಿಯಲ್ಲಿ ಸಲ್ಲಿಸಿದ್ದ ಮತ್ತೊಂದು ಅರ್ಜಿ ವಜಾಗೊಂಡಿದೆ.
ಮಾಫಿ ಸಾಕ್ಷಿ ದಾಖಲು ವೇಳೆ ನಿನ್ನೆ ಮರೆತಿದ್ದೆ ಅಂತ ಅದನ್ನ ಮತ್ತೊಮ್ಮೆ ಸೇರಿಸಲು ಪ್ರದೋಷ್ಗೆ ಅವಕಾಶ ನೀಡದಂತೆ ದರ್ಶನ್ ವಕೀಲರು ಮನವಿ ಮಾಡಿದ್ದರು. ಮೊದಲ ದಿನ ಪ್ರದೋಷ್ ನಿನ್ನೆ ಹೇಳಲು ಮರೆತಿದ್ದೆ ಅಂತಾ ಎರಡನೇ ದಿನ ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆಯನ್ನ ಮಾಫಿ ಸಾಕ್ಷಿಯಲ್ಲಿ ದಾಖಲು ಮಾಡಿಕೊಳ್ಳಬಾರದು. ಹೇಳಿಕೆ ಪ್ರಕ್ರಿಯೆಯಿಂದ ಆ ಅಂಶವನ್ನ ಡಿಲೀಟ್ ಮಾಡುವಂತೆ ಸಹ ದರ್ಶನ್ ಪರ ವಕೀಲರು ಮನವಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿ ದರ್ಶನ್ ಸಲ್ಲಿಸಿದ್ದ ಎರಡು ಅರ್ಜಿಗಳನ್ನ ವಜಾ ಮಾಡಿ 59ನೇ ಸಿಸಿಹೆಚ್ ನ್ಯಾಯಾಲಯ ಆದೇಶ ನೀಡಿದೆ.
ಪ್ರದೋಷ್ ಡಾಕ್ಯುಮೆಂಟ್ ಮಾರ್ಕಿಂಗ್ ಪ್ರಕ್ರಿಯೆ ನಾಳೆ ಕೂಡ ಮುಂದುವರಿಯಲಿದೆ. ಪ್ರದೋಷ್ ಕುಟುಂಬಸ್ಥರ ಭೇಟಿಗೆ ಅವಕಾಶ ಕಲ್ಪಿಸದ ಜೈಲಾಧಿಕಾರಿಗಳ ಕ್ರಮದ ವಿರುದ್ಧ ಪ್ರದೋಷ್ ಸಲ್ಲಿಸಿದ್ದ ಅರ್ಜಿ ಸಂಬಂಧ ಜೈಲು ಅಧಿಕಾರಿಗಳಿಂದ ವರದಿ ಸಲ್ಲಿಕೆಗೆ ಕೋರ್ಟ್ ಸೂಚನೆ ನೀಡಿದ್ದು, ನಾಳೆಗೆ ಆದೇಶ ಪ್ರಕಟಿಸಲಿದೆ. ಪವಿತ್ರಗೌಡ ಬ್ಯಾರಕ್ ಬದಲಾವಣೆ ಸಂಬಂಧ ಆಕೆಯ ಆರೋಗ್ಯ ವರದಿಯನ್ನ ಇ-ಮೇಲ್ ಮೂಲಕ ಜೈಲಾಧಿಕಾರಿಗಳು ಸಲ್ಲಿಕೆ ಮಾಡಿದ್ದು, ನಾಳೆ ಈ ಆದೇಶವನ್ನ ಸಹ ನ್ಯಾಯಾಧೀಶರು ಪ್ರಕಟಿಸಲಿದ್ದಾರೆ.
Laxmi News 24×7