Breaking News

ಖಾನಾಪುರದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಗೃಹಲಕ್ಷ್ಮಿ ಪುನರ್‌ಪರಿಶೀಲನೆ ತರಬೇತಿ

Spread the love

ಖಾನಾಪುರ: ಗೃಹಲಕ್ಷ್ಮಿ ಯೋಜನೆಯ ಪುನರ್‌ಪರಿಶೀಲನೆ ಹಾಗೂ ಕೆವೈಸಿ ಪ್ರಕ್ರಿಯೆ ಕುರಿತು ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಮಂಗಳವಾರ ಖಾನಾಪುರ ನಗರದ ಶಿವಸ್ಮಾರಕ ಭವನದಲ್ಲಿ ನಡೆಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಾಲ ಅಭಿವೃದ್ಧಿ ಯೋಜನಾ ಕಚೇರಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚ ಹಮೀ ಯೋಜನೆಗಳ ತಾಲೂಕು ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ವಹಿಸಿದ್ದರು.

ತರಬೇತಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪುನರ್‌ಪರಿಶೀಲನೆ, ಕೆವೈಸಿ ಮಾಡುವುದು ಹಾಗೂ ಯೋಜನೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಪರಿಹಾರ ಕುರಿತು ಅಂಗನವಾಡಿ ಕಾರ್ಯಕರ್ತೆಯರಿಗೆ ಸವಿಸ್ತಾರವಾಗಿ ಮಾರ್ಗದರ್ಶನ ನೀಡಲಾಯಿತು. ಪ್ರಾಯೋಗಿಕ ತರಬೇತಿಯನ್ನೂ ನೀಡಲಾಯಿತು.

ಕಾರ್ಯಕ್ರಮದಲ್ಲಿ ಎಸಿಡಿಪಿಒ ಶಾರ್ದಾ ಮರಾಠೆ, ಎಫ್‌ಡಿಸಿ ಸಂ. ಸಂದೀಪ ದೇಶಮುಖ, ಮೇಲ್ವಿಚಾರಕರಾದ ಸರಸ್ವತಿ ಬಡಸರಿ, ಮಂಜುಳಾ ಟೋನಿ, ಸೌಮ್ಯಾ, ಅಮೃತಾ ಡಬ್, ಮಂಜುಳಾ ಕುಲಕರ್ಣಿ, ಯಾಲವಾ ಕೇಸರೂರ್, ಜಯಶ್ರೀ ಕಾನೋಜಿ, ಸುರೇಖಾ ಪಾಟೀಲ ಸೇರಿದಂತೆ ವಿವಿಧ ವಿಭಾಗಗಳ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ತಾಲೂಕಿನ ಸುಮಾರು 150 ಅಂಗನವಾಡಿ ಕಾರ್ಯಕರ್ತೆಯರು ತರಬೇತಿಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸೂರ್ಯಕಾಂತ ಕುಲಕರ್ಣಿ, ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ಕೆಲಸದ ಒತ್ತಡದ ನಡುವೆಯೂ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಪುನರ್‌ಪರಿಶೀಲನೆ ಕಾರ್ಯವನ್ನು ಯಾವುದೇ ಲೋಪವಾಗದಂತೆ ನಿಖರವಾಗಿ ನಿರ್ವಹಿಸಬೇಕು. ಯಾವುದೇ ಸಮಸ್ಯೆ ಅಥವಾ ತೊಂದರೆ ಎದುರಾದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಅವರು ತಿಳಿಸಿದರು.

ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ಸ್ವಾಗತ ಹಾಗೂ ಮಾರ್ಗದರ್ಶನದ ಬಳಿಕ ಆಭಾರ ಪ್ರದರ್ಶನದೊಂದಿಗೆ ಮುಕ್ತಾಯಗೊಂಡಿತು.


Spread the love

About Laxminews 24x7

Check Also

ತೊಂದರೆ ಆದ್ರೆ ಮಾತ್ರ ಕಾಯ್ದೆ ತೋರಿಸುತ್ತೀರಿ, ಅವಘಡ ಆಗಿದ್ರೆ ಯಾರು ಹೊಣೆ? – ದೇವಿಗೆರೆಯಲ್ಲಿ ಗಣೇಶ ವಿಸರ್ಜನೆಗೆ ಡಿಸಿ ಅಸಮಾಧಾನ

Spread the loveಹಾಸನ: ದೇವಿಗೆರೆಯಲ್ಲಿ ಗಣೇಶ ವಿಸರ್ಜನೆ  ವೇಳೆ ಯಾವುದಾದರೂ ಅವಘಡ ಸಂಭವಿಸಿದ್ದರೆ ಜಿಲ್ಲಾಡಳಿತ ಸಮಸ್ಯೆಗೆ ಸಿಲುಕುತ್ತಿತ್ತು. ಅದರ ಹೊಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ