Breaking News

ಒಂದು ನಿಮಿಷದಲ್ಲಿ 28,000 ಅಡಿ ಕುಸಿದ ಬ್ರಿಟಿಷ್‌ ಏರ್‌ವೇಸ್‌ ವಿಮಾನ – ತಪ್ಪಿತು ಭಾರೀ ದುರಂತ!

Spread the love

ಲಂಡನ್‌: ಯುಕೆ ರಾಜಧಾನಿ ಲಂಡನ್‌ನಿಂದ ಚಿಕಾಗೋಗೆ ತೆರಳುತ್ತಿದ್ದ ಬ್ರಿಟಿಷ್ ಏರ್‌ವೇಸ್ ವಿಮಾನವೊಂದು  ಐರ್ಲೆಂಡ್‌ ವಾಯುಪ್ರದೇಶದಲ್ಲಿದ್ದಾಗ ಏಕಾಏಕಿ ಭಾರೀ ಪ್ರಮಾಣದಲ್ಲಿ ಕುಸಿದ ಘಟನೆ ನಡೆದಿದೆ. ವಿಮಾನವು ಸುಮಾರು 37 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ, ಕೇವಲ 1 ನಿಮಿಷದಲ್ಲಿ 28,000 ಅಡಿಗೆ ಕುಸಿದು, 9,000 ಅಡಿಗೆ ಇಳಿದಿದೆ.

ಘಟನೆ ವೇಳೆ ವಿಮಾನದಿಂದ ʻ7700ʼ ಎಮರ್ಜೆನ್ಸಿ ಸಂದೇಶ ರವಾನೆಯಾಗಿದೆ ಎಂದು ವರದಿಯಾಗಿದೆ. ಏಕಾಏಕಿ ವಿಮಾನ ಕೆಳಕ್ಕೆ ಕುಸಿದಿದ್ದರಿಂದ ಪ್ರಯಾಣಿಕರು ಹಾಗೂ ಸಿಬ್ಬಂದಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಬ್ರಿಟಿಷ್ ಏರ್‌ವೇಸ್‌ ವಿಮಾನ (ಸಂಖ್ಯೆ BA295), ಬೋಯಿಂಗ್ 777-200ER ವಿಮಾನವಾಗಿದ್ದು, ಇಂದು ಬೆಳಗ್ಗೆ 10:50 ಕ್ಕೆ ಲಂಡನ್‌ನ ಹೀಥ್ರೂ ಏರ್‌ಪೋರ್ಟ್‌ನ ಟರ್ಮಿನಲ್‌-5 ರಿಂದ ಚಿಕಾಗೋದ ಓʼಹೇರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಹೊರಟಿತ್ತು. ವಿಮಾನ ಟೇಕಾಫ್‌ ಆದ ಸುಮಾರು 1 ಗಂಟೆಯ ನಂತರ ವಿಮಾನವು 37,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ತುರ್ತುಪರಿಸ್ಥಿತಿ ಎದುರಾಗಿದೆ. ಅನಿರೀಕ್ಷಿತ ಸಮಸ್ಯೆಯಿಂದ ವಿಮಾನ 1 ನಿಮಿಷದಲ್ಲಿ 28,000 ಅಡಿ ಕುಸಿದಿದೆ.

7700 ಕೋಡ್‌ ಸಕ್ರಿಯಗೊಳಿಸಿದ ಬಳಿಕ ವಿಮಾನವು ಏಕಾಏಕಿ 37 ಸಾವಿರ ಅಡಿಯಿಂದ ಸುಮಾರು 9,000 ಅಡಿಗೆ ಕುಸಿದಿದೆ. ಇನ್ನೂ ಘಟನೆ ಬಳಿಕ ಚಿಕಾಗೋಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್‌ನ ವಿಮಾನ ತನ್ನ ಪ್ರಯಾಣ ಮೊಟಕುಗೊಳಿಸಿ ಲಂಡನ್ ಹೀಥ್ರೂ ಏರ್‌ಪೋರ್ಟ್‌ಗೆ  ವಾಪಸ್‌ ಆಗಿದೆ.

ಸದ್ಯಕ್ಕೆ ವಿಮಾನದಲ್ಲಿ ಯಾವ ರೀತಿಯ ತುರ್ತು ಪರಿಸ್ಥಿತಿ ಎದುರಾಯಿತು? ಅದರ ನಿಖರ ಕಾರಣವೇನು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

ಏನಿದು 7700 ಕೋಡ್‌ ಸಂದೇಶ?
ಬ್ರಿಟಿಷ್‌ ಏರ್‌ವೇಸ್‌ ವಿಮಾನವು ಐರ್ಲೆಂಡ್‌ ಮೇಲಿನ ವಾಯುಪ್ರದೇಶದಲ್ಲಿದ್ದಾಗ 7700 ಕೋಡ್‌ ಸಂದೇಶವನ್ನು ರವಾನೆ ಮಾಡಿದೆ. ವಿಮಾನ ಸಿಬ್ಬಂದಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಏರ್‌ ಟ್ರಾಫಿಕ್‌ ಕಂಟ್ರೋಲ್‌ಗೆ ತಕ್ಷಣದ ನೆರವು ಅಗತ್ಯವಿದೆ ಎಂಬುದನ್ನ ತಿಳಿಸಲು ಈ ಕೋಡ್‌ ಬಳಸುತ್ತಾರೆ.

7700 ಕೋಡ್‌ ಏಕೆ ಬಳಸುತ್ತಾರೆ?
ʻ7700ʼ ಎಂಬುದು ವಿಮಾನಯಾನದಲ್ಲಿ ಸಾಮಾನ್ಯ ತುರ್ತು ಪರಿಸ್ಥಿತಿಯನ್ನು ಸೂಚಿಸುವ ಪ್ರಮಾಣಿತ ಟ್ರಾನ್ಸ್‌ಪಾಂಡರ್‌ ಕೋಡ್‌. ಪೈಲಟ್‌ಗಳು ಈ ಕೋಡ್‌ ಸಕ್ರಿಯಗೊಳಿಸಿದಾಗ ಏರ್‌ ಟ್ರಾಫಿಕ್‌ ಕಂಟ್ರೋಲರ್‌ಗಳಿಗೆ ವಿಮಾನಕ್ಕೆ ತುರ್ತು ನೆರವು ಅಗತ್ಯವಿದೆ ಎಂಬ ಸಂದೇಶ ರವಾನೆಯಾಗುತ್ತದೆ.

ಆದ್ರೆ 7700 ಕೋಡ್‌ನಿಂದ ಯಾವ ಸಮಸ್ಯೆ ಎದುರಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುವುದಿಲ್ಲ. ತಾಂತ್ರಿಕ ದೋಷ, ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ಇತರ ಯಾವುದೇ ತುರ್ತು ಸಂದರ್ಭಗಳಲ್ಲಿ ಈ ಕೋಡ್‌ ಬಳಸಬಹುದು.


Spread the love

About Laxminews 24x7

Check Also

ಡಿಸಿಗಳು ಚುನಾವಣಾ ಆಯೋಗಕ್ಕೆ ದೂರು ಕೊಟ್ಟರೆ SIT ರಚನೆ: ಪ್ರಿಯಾಂಕ್ ಖರ್ಗೆ

Spread the loveಬೆಂಗಳೂರು: ಡಿಸಿಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ ಫಾರ್ಮ್-7 ದುರ್ಬಳಕೆ ಬಗ್ಗೆ ವಿಶೇಷ ತನಿಖಾ ತಂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ