Breaking News

ವಿಜಯೇಂದ್ರ ಸಮ್ಮುಖದಲ್ಲೇ ಬಿಜೆಪಿ ಕಾರ್ಯಕರ್ತರ ಕಿತ್ತಾಟ

Spread the love

ತುಮಕೂರು: ಇಲ್ಲಿನ ಬಿಜೆಪಿ ಘಟಕದಲ್ಲಿ ಬಣ ಬಡಿದಾಟ ಜೋರಾಗಿದೆ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ  ಸಮ್ಮುಖದಲ್ಲೇ ಕಾರ್ಯಕರ್ತರು ಕಿತ್ತಾಡಿಕೊಂಡಿದ್ದಾರೆ.

ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ಬೂತ್ ಅಭಿಯಾನದ ವೇಳೆ ಗ್ಯಾಸ್ ಬಾಬು, ದಿಲೀಪ್ ಕುಮಾರ್ ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ. ಗ್ಯಾಸ್ ಬಾಬು ಭಾಷಣ ಮಾಡುವಾಗ ದಿಲೀಪ್ ಹೆಸರು ಹೇಳದಿದ್ದಕ್ಕೆ ಗಲಾಟೆಯಾಗಿದೆ.

ಇನ್ನು ದಿಲೀಪ್ ಕುಮಾರ್ ಕಳೆದ ಚುನಾವಣೆಯಲ್ಲಿ ಸೋತಿದ್ದರು. ಇಬ್ಬರ ಜಗಳದ ವೇಳೆ ಮಧ್ಯಪ್ರವೇಶಿಸಿ ವಿಜಯೇಂದ್ರ ಪರಿಸ್ಥಿತಿ ತಿಳಿಗೊಳಿಸಿದರು. ವೇದಿಕೆಯಲ್ಲಿ ಗ್ಯಾಸ್ ಬಾಬು ಭಾಷಣ ಮಾಡುವಾಗ ದಿಲೀಪ್ ಕುಮಾರ್ ಹೆಸರನ್ನ ಹೇಳಲಿಲ್ಲ ಅನ್ನೋ ಕಾರಣಕ್ಕೆ ಗಲಾಟೆ ಶುರುವಾಗಿದೆ.

ದಿಲೀಪ್ ಕುಮಾರ್ ಹೆಸರು ಹೇಳು ಎಂದು ಬೆಂಬಲಿಗರು ಗ್ಯಾಸ್ ಬಾಬುಗೆ ತಾಕೀತು ಮಾಡಿ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ. ಈ ವೇಳೆ ವೇದಿಕೆಯಿಂದ ಕೆಳಗಿಳಿದು ಬಂದ ಗ್ಯಾಸ್ ಬಾಬು, ನೇರವಾಗಿ ದಿಲೀಪ್ ಬೆಂಬಲಿಗರ ನಡುವೆ ವಾಗ್ವಾದಕ್ಕಿಳಿದಿದ್ದಾರೆ. ಕಿತ್ತಾಟ ನೋಡಿ ವೇದಿಕೆಯಲ್ಲಿದ್ದ ಬಿ.ವೈ ವಿಜಯೇಂದ್ರ ಅವರೇ ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಬೇಕಾಯ್ತು. ಕಾರ್ಯಕರ್ತರ ಕಿತ್ತಾಟಕ್ಕೆ ಕೆರಳಿ ಇನ್ನು ಮುಂದೆ ನಾನೇ ಗುಬ್ಬಿಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.


Spread the love

About Laxminews 24x7

Check Also

ವೋಟ್‌ಚೋರಿಗೆ SIR ದುರ್ಬಳಕೆ..? – ಬೆಂಗಳೂರಿನ ಜನರಿಗೂ ಸಿಎಂ ಡಿಕೆಶಿ ಎಚ್ಚರಿಕೆ

Spread the loveಬೆಂಗಳೂರು: ರಾಜ್ಯದಲ್ಲಿ ಎಸ್‌ಐಆರ್ ಫಾರಂ-7 ವಿವಾದ ಮತ್ತೊಂದು ಮಜಲಿಗೆ ತಲುಪಿದೆ. ಬೆಂಗಳೂರಿನಲ್ಲೂ ಎಸ್‌ಐಆರ್ ಸಂಬಂಧ ಇಬ್ಬರ ವಿರುದ್ಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ