Breaking News

ಶಾಸಕಿ ರೂಪಕಲಾ ಶಶಿಧರ್ ಅವರೇ ಬಂದು ಟೇಬಲ್ ಕುಟ್ಟಿ ನೋಡ್ಕೊತೀನಿ ಅಂದ್ರು: ನಾರಾಯಣಸ್ವಾಮಿ

Spread the love

ಕೋಲಾರ: ಅವತ್ತು ಸದನದಲ್ಲಿ ಸುಬ್ಬಾರೆಡ್ಡಿ ನಾವು ತಮಾಷೆಯಾಗಿ ಮಾತನಾಡುತ್ತಿದ್ದೆವು. ರೂಪಕಲಾ ಶಶಿಧರ್‌  ಬಗ್ಗೆ ನಾವು ಮಾತಾಡಿಲ್ಲ. ಏಕಾಏಕಿ ಬಂದು ಟೇಬಲ್ ಗುದ್ದಿ ನಿಮ್ಮನ್ನ ನೋಡಿಕೊಳ್ಳುತ್ತೇನೆ ಎಂದು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಹೇಳಿದ್ದಾರೆ.

ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋಲಾರದಲ್ಲಿ ಬಣ ಬಡಿದಾಟ ಯಾವುದು ಇಲ್ಲ. ಅಭಿವೃದ್ಧಿ ವಿಚಾರವಾಗಿ ಸಿಎಂ ಬಳಿ ಮಾತಾಡಿದ್ದೇವೆ, ಡಿಸಿಸಿ ಬ್ಯಾಂಕ್ ಹಗರಣದ ತನಿಖೆ ಆಗಬೇಕು. ಈಗ ಎಂಡಿಯನ್ನಾಗಿ ವೆಂಕಟೇಶ್ ಅವರನ್ನ ಹಾಕಿದ್ದಾರೆ, ಅವರನ್ನೇ ಮುಂದುವರಿಸಬೇಕು. ಚಿಕ್ಕಬಳ್ಳಾಪುರ ಕೋಲಾರ ಶಾಸಕರು ಒಮ್ಮತದಿಂದ ಅಧಿಕಾರಿ ಪರ ಇದ್ದೇವೆ. ಈಗ ಏಕಾಏಕಿ ಒಬ್ಬ ಶಾಸಕರು ಬಂದು ಆ ಅಧಿಕಾರಿ ಸರಿ ಇಲ್ಲ ಅಂದಿದ್ದಾರೆ ಎಂದು ವಿರೋಧಿ ಬಣಕ್ಕೆ ತಿರುಗೇಟು ನೀಡಿದರು.

ಆಕೆ ಮಾತಾಡಿದಕ್ಕೂ ನಮಗೂ ಸಂಬಂಧವೇ ಇಲ್ಲ. ಆ ಶಕ್ತಿ ಇದೆ, ಅವರ ತಂದೆ ಸಂಸದರಾಗಿ ಕೇಂದ್ರ ಸಚಿವರಾಗಿದ್ದರು. ಈಗ ಅವರ ತಂದೆ ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ, ರೂಪಕಲಾ ಶಶಿಧರ್ ಎರಡು ಬಾರಿ ಶಾಸಕರಾಗಿದ್ದಾರೆ. ಅವರಿಗೆ ಶಕ್ತಿ ಇದೆ, ಅದಕ್ಕೆ ತಲೆಬಾಗಲೇಬೇಕಲ್ಲವಾ? ನಾವು ಯಾವತ್ತು ಅವರ ಬಣದ ಪರವಾಗಿಲ್ಲ ಎಂದು ಟಾಂಗ್ ಕೊಟ್ಟರು.


Spread the love

About Laxminews 24x7

Check Also

ಡಿಸೆಂಬರ್ – ಜನವರಿಗೆ ಮೊದಲ ಹಂತದಲ್ಲಿ 5 ಲಕ್ಷ ಸೈಟು ಹಂಚಿಕೆ: ಡಿಸಿಎಂ ಪರಮೇಶ್ವರ್‌

Spread the loveಬೆಂಗಳೂರು: ರಾಜ್ಯದ ಜನರಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ರೂಪಿಸಿರುವ ಯೋಜನೆಯಡಿ ಡಿಸೆಂಬರ್‌–ಜನವರಿಯಲ್ಲಿ ಮೊದಲ ಹಂತದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ