ಬೆಂಗಳೂರು: ಬಿಕೆ ಹರಿಪ್ರಸಾದ್‌ರವರ ಹಿನ್ನೆಲೆ ಏನೆಂದು ಎಲ್ಲರಿಗೂ ಗೊತ್ತಿದೆ. ನಿಮ್ಮ ಜೀವನದಲ್ಲೇ ಒಂದು ಚುನಾವಣೆ ಗೆಲ್ಲೋಕೆ ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
ಶಿಕಾರಿಪುರದಿಂದ ಕಾಂಗ್ರೆಸ್ ಪಾದಯಾತ್ರೆ ನಡೆಸುವ ವಿಚಾರದ ಕುರಿತು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್ ರವರಿಗೆ ನಮ್ಮ ಬಳ್ಳಾರಿ ಪಾದಯಾತ್ರೆ ಪ್ರೇರಣೆ ಕೊಟ್ಟಿದೆ. ರಾಜ್ಯ ಸರ್ಕಾರದ ಸೊಕ್ಕನ್ಬು ಅಡಗಿಸುವಲ್ಲಿ ನಮ್ಮ ಬಳ್ಳಾರಿ ಪಾದಯಾತ್ರೆ ಯಶಸ್ವಿಯಾಗಿದೆ. ನನ್ನ ಕ್ಷೇತ್ರದಲ್ಲೇ ಬಿ.ಕೆ ಹರಿಪ್ರಸಾದ್ ಪ್ರಾರಂಭ ಮಾಡುತ್ತೇನೆ ಎಂದಿದ್ದಾರೆ. ಅವರಿಗೆ ನಾನು ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ. ಯಡಿಯೂರಪ್ಪಗೆ ರಾಜಕೀಯ ಜನ್ಮಕೊಟ್ಟ ಕ್ಷೇತ್ರ ಶಿಕಾರಿಪುರ. ಅಲ್ಲಿ ಯಾವ ರೀತಿ ಅಭಿವೃದ್ಧಿ ಆಗಿದೆ ಎಂದು ಬಂದು ನೋಡಿಕೊಂಡು ಹೋಗಲಿ. ಡಿಕೆ ಶಿವಕುಮಾರ್ ಕ್ಷೇತ್ರ, ಮಲ್ಲಿಕಾರ್ಜುನ್ ಖರ್ಗೆ ಸೇರಿ ಕಾಂಗ್ರೆಸ್‌ನವರ ಕ್ಷೇತ್ರಗಳನ್ನು ನೋಡಲಿ. ಶಿಕಾರಿಪುರ ಮಣ್ಣಿನಲ್ಲೇ ಹೋರಾಟದ ಗುಣ ಇದೆ. ಶಿಕಾರಿಪುರದಲ್ಲಿ ಮುಂದೆ ಗೆಲ್ಲುತ್ತೇವೆ ಅಂತಿದ್ದಾರೆ. ಬಿ.ಕೆ.ಹರಿಪ್ರಸಾದ್‌ರವರ ಸವಾಲು ನಾನು ಸ್ವೀಕಾರ ಮಾಡುತ್ತೇನೆ ಎಂದರು.
ಬಿ.ಕೆ ಹರಿಪ್ರಸಾದ್‌ರವರು ಶಿಕಾರಿಪುರಕ್ಕೆ ಬರಲಿ, ಅವರಿಗೆ ಒಳ್ಳೆಯದು ಆಗಲಿ, ನಾನು ಅವರ ಪಾದಯಾತ್ರೆ ಸ್ವಾಗತ ಮಾಡುತ್ತೇನೆ ಎಮದು ಹೇಳಿದರು. ಬೆಂಗಳೂರಿನಿಂದ ಆರ್‌ಎಸ್‌ಎಸ್ ಮತ್ತೆ ಬಿಜೆಪಿಯವರನ್ನು ಓಡಿಸುವ ಬಗ್ಗೆ ಬಿ.ಕೆ ಹರಿಪ್ರಸಾದ್ ಹೇಳಿಕೆ ವಿಚಾರಕ್ಕೂ ವ್ಯಂಗ್ಯವಾಡಿದ ವಿಜಯೇಂದ್ರ, ಬಿ.ಕೆ ಹರಿಪ್ರಸಾದ್‌ರನ್ನು ಎಷ್ಟು ಬಾರಿ ಚುನಾವಣೆಗಳಲ್ಲಿ ಮತದಾರರು ಓಡಿಸಿದ್ದಾರೆಂದು ಗೊತ್ತಿದೆ ಎಂದು ಕೌಂಟರ್ ಕೊಟ್ಟರು.
ಇದೇ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ತಿರುಗೇಟು ನೀಡಿದ ವಿಜಯೇಂದ್ರ, ಸವಾಲು ಹಾಕೋರಿಗೆ ಮೊದಲು ಸವಾಲು ಹಾಕುವ ಯೋಗ್ಯತೆ ಇರಬೇಕು. ಮುಂದೆ ಸೊರಬ, ಶಿಕಾರಿಪುರದಲ್ಲಿ ಚುನಾವಣೆಯಲ್ಲಿ ಏನು ಆಗುತ್ತದೆ ಎಂದು ನೋಡೋಣ ಎಂದರು.
Laxmi News 24×7