Breaking News

ಕಕ್ಷೆ ತಲುಪಿ ಇತಿಹಾಸ ಬರೆದ ಬೆನ್ನಲ್ಲೇ ದುರಂತ: ಪೆಸಿಫಿಕ್ ಸಾಗರದಲ್ಲಿ ಸ್ಫೋಟಗೊಂಡ ಸ್ಟಾರ್‌ಶಿಪ್

Spread the love

ಟೆಕ್ಸಾಸ್‌: ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್  ಸಂಸ್ಥೆಯ ಸ್ಟಾರ್‌ಶಿಪ್  ಮೆಗಾ ರಾಕೆಟ್‌ನ 14ನೇ ಪರೀಕ್ಷಾರ್ಥ ಉಡಾವಣೆ  ಸೆಪ್ಟೆಂಬರ್ 28 ರಂದು ನಡೆದಿದ್ದು, ಉಡಾವಣೆಯ ಬಳಿಕ ರಾಕೆಟ್‌ನ ಬೂಸ್ಟರ್ ಭಾಗವು ಸಮುದ್ರಕ್ಕೆ ಅಪ್ಪಳಿಸಿದಾಗ ಭೀಕರವಾಗಿ ಸ್ಫೋಟಗೊಂಡಿದೆ.

ಸ್ಫೋಟಗೊಂಡರೂ ಈ ಮಿಷನ್ ಅನ್ನು ಸಂಪೂರ್ಣ ವೈಫಲ್ಯ ಎಂದು ಕರೆಯಲು ಸಾಧ್ಯವಿಲ್ಲ. ಸ್ಟಾರ್‌ಶಿಪ್‌ನ ಇತಿಹಾಸದಲ್ಲೇ ಮೊದಲ ಬಾರಿಗೆ ಈ ರಾಕೆಟ್ ಭೂಮಿಯ ಕಕ್ಷೆಯನ್ನು  ತಲುಪುವಲ್ಲಿ ಯಶಸ್ವಿಯಾಗಿದೆ.

ಟೆಕ್ಸಾಸ್‌ನಲ್ಲಿರುವ ಸ್ಪೇಸ್‌ಎಕ್ಸ್‌ನ ‘ಸ್ಟಾರ್‌ಬೇಸ್’ ಉಡಾವಣಾ ಕೇಂದ್ರದಿಂದ 124 ಮೀಟರ್ ಎತ್ತರದ ಬೃಹತ್ ಸ್ಟಾರ್‌ಶಿಪ್-ಸೂಪರ್ ಹೆವಿ ರಾಕೆಟ್ ಸೋಮವಾರ ಗಗನಕ್ಕೆ ಚಿಮ್ಮಿತು. ಉಡಾವಣೆಯಾದ ಕೆಲವೇ ನಿಮಿಷಗಳಲ್ಲಿ ಸೂಪರ್ ಹೆವಿ ಬೂಸ್ಟರ್ ಮೇಲಿನ ಹಂತದಿಂದ ಯಶಸ್ವಿಯಾಗಿ ಬೇರ್ಪಟ್ಟು, ಸ್ಟಾರ್‌ಶಿಪ್ ಮುಂದುವರಿಯಿತು.

ಭೂಮಿಯ ಕಕ್ಷೆ ತಲುಪಿದ ಸ್ಟಾರ್‌ಶಿಪ್ ನೌಕೆಯು ತನ್ನಲ್ಲಿದ್ದ 26 ಮುಂದಿನ ಪೀಳಿಗೆಯ ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತು. ಈ ಮೂಲಕ ಕಾರ್ಯಾಚರಣಾ ಪೇಲೋಡ್‌ಗಳನ್ನು ಹೊತ್ತೊಯ್ಯುವ ಮತ್ತು ಬಿಡುಗಡೆ ಮಾಡುವ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತು.

ಸ್ಟಾರ್‌ಬೇಸ್‌ನಿಂದ ಉಡಾವಣೆಗೊಂಡ ಬಳಿಕ ಹಾರಾಟದ ಮಧ್ಯೆ ರಾಕೆಟ್‌ ಒಂದು ಇಂಜಿನ್ ಸಮಸ್ಯೆಯನ್ನು ಎದುರಿಸಿದರೂ ಸಹ ಸ್ಟಾರ್‌ಶಿಪ್ ಯಶಸ್ವಿಯಾಗಿ ಭೂಮಿಯ ಕಕ್ಷೆಯನ್ನು ತಲುಪಿತ್ತು. ರಾಕೆಟ್‌ನ ಕೆಳಭಾಗವಾದ ಸೂಪರ್ ಹೆವಿ ಬೂಸ್ಟರ್, ಮೇಲಿನ ಸ್ಟಾರ್‌ಶಿಪ್ ನೌಕೆಯನ್ನು ಬಾಹ್ಯಾಕಾಶಕ್ಕೆ ನೂಕಿದ ಬಳಿಕ ಮರಳಿ ಭೂಮಿಗೆ ಬರುವಾಗ ಮೆಕ್ಸಿಕೋ ಕೊಲ್ಲಿಯ ಸಮುದ್ರಕ್ಕೆ ತೀವ್ರ ವೇಗವಾಗಿ ಅಪ್ಪಳಿಸಿ  ಬೆಂಕಿಯ ಉಂಡೆಯಾಗಿ ಸ್ಫೋಟಿಸಿತು.

ಸ್ಪೇಸ್‌ಎಕ್ಸ್ ಸಂಸ್ಥೆಯು ಈ ಹಿಂದೆ 2023, 2024 ಮತ್ತು 2025 ರಲ್ಲಿ ನಡೆಸಿದ ಪರೀಕ್ಷಾರ್ಥ ಪ್ರಯೋಗಗಳಲ್ಲೂ ಇಂತಹ ಹಲವು ಸ್ಫೋಟಗಳನ್ನು ಎದುರಿಸಿತ್ತು.

ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಮಾನವ ಸಹಿತ ಯಾತ್ರೆಗಳನ್ನು ಕೈಗೊಳ್ಳುವ ಸ್ಪೇಸ್‌ಎಕ್ಸ್‌ನ ಮಹತ್ವಾಕಾಂಕ್ಷೆಯ ಯೋಜನೆಗೆ ಹಾಗೂ ಗಗನಯಾತ್ರಿಗಳನ್ನು ಮತ್ತೆ ಚಂದ್ರನ ಅಂಗಳಕ್ಕೆ ಕಳುಹಿಸುವ ನಾಸಾದ ಯೋಜನೆಗೆ ಚಂದ್ರನ ಮೇಲೆ ಇಳಿಯುವ ನೌಕೆಯಾಗಿ  ಸ್ಟಾರ್‌ಶಿಪ್‌ನ ಆವೃತ್ತಿಯನ್ನು ಆಯ್ಕೆ ಮಾಡಿಕೊಂಡಿದೆ.


Spread the love

About Laxminews 24x7

Check Also

ಮೈಸೂರು ದಸರಾ – ಯತೀಂದ್ರ ಅಬ್ಬರಕ್ಕೆ ಡಿಕೆಶಿ ಬ್ರೇಕ್‌!

Spread the loveಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಆರಂಭದ ಹೊಸ್ತಿಲಲ್ಲೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಂತೆ ಕಾಣುತ್ತಿದೆ. ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ