Breaking News

ಬರ ಚರ್ಚೆಗೆ ಸರ್ವಪಕ್ಷ ನಿಯೋಗದ ಜೊತೆ ಬಿಜೆಪಿಯವ್ರು ಬರಬೇಕು, ಇಲ್ಲದಿದ್ರೆ ಅವರದ್ದು ಕಪಟ ಅಂತ ಗೊತ್ತಾಗುತ್ತೆ: ಡಿಕೆಶಿ

Spread the love

ಬೆಂಗಳೂರು: ಬರದ  ಬಗ್ಗೆ ಕೇಂದ್ರದ ಬಳಿ ಚರ್ಚಿಸಲು ಸರ್ವಪಕ್ಷ ನಿಯೋಗದ  ಜೊತೆ ಬಿಜೆಪಿಯವರು ಬರಬೇಕು. ಅವರು ಬರದೇ ಇದ್ದರೆ ಕಪಟ ನಾಟಕ ಅಂತ ಗೊತ್ತಾಗುತ್ತದೆ ಎಂದು ಸಿಎಂ ಡಿ.ಕೆ ಶಿವಕುಮಾರ್‌  ಅವರು ಕುಟುಕಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಬರದ ಬಗ್ಗೆ ಚರ್ಚೆ ಮಾಡೋದಕ್ಕೆ ಸರ್ವಪಕ್ಷ ಸಭೆಗೆ ಬರಲ್ಲ ಎಂಬ ವಿಪಕ್ಷ ಗಳ ಹೇಳಿಕೆಗೆ ಅವರು ತಿರುಗೇಟು ಕೊಟ್ಟರು. ಅಕ್ಟೋಬರ್ 3ರಂದು ಬರ ಅಧ್ಯಯನ ತಂಡ ಬರಲಿದೆ. ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲು ಸಮಯ ಕೇಳ್ತೀನಿ. ನಾವು ಪರಿಹಾರ ಕೊಡ್ತೀವಿ, ಕೇಂದ್ರದಿಂದ ನೀವು ಪರಿಹಾರದ ಹಣ ಕೊಡಿಸಿ ಎಂದು ಬಿಜೆಪಿಗರಿಗೆ ಹೇಳಿದ್ದೇವೆ. ಅವರು ಸರ್ವಪಕ್ಷ ನಿಯೋಗದ ಜೊತೆ ಬರದೇ ಇದ್ದರೆ ಅವರದ್ದು ಕಪಟ ನಾಟಕ ಅಂತ ಗೊತ್ತಾಗುತ್ತದೆ ಎಂದರು.

ಈಗಾಗಲೇ ಕಸ್ತೂರಿರಂಗನ್ ವರದಿ, ಬರದ ವಿಚಾರವಾಗಿ ಚರ್ಚೆ ನಡೆದಿದೆ. ನಾನು ಕೇಂದ್ರ ಸಚಿವರನ್ನು ಭೇಟಿಯಾಗುತ್ತೇನೆ. ಸರ್ವಪಕ್ಷ ನಿಯೋಗಕ್ಕೆ ಪ್ರಧಾನಿ ಅವರ ಬಳಿ ಸಮಯ ಕೇಳ್ತೀನಿ. ಬಿಜೆಪಿಯವರು ಬರಬೇಕು, ಬರಲಿಲ್ಲ ಅಂದ್ರೂ ನಾನೇ ಪ್ರಧಾನಿಗಳ ಬಳಿ ಮನವಿ ಮಾಡುತ್ತೇನೆ ಎಂದಿದ್ದಾರೆ.

ಬಿಜೆಪಿಯವರಿಗೆ ಬರೋದಕ್ಕೆ ಇಷ್ಟ ಇಲ್ಲ ಎಂದರೆ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂಬುದು ಅರ್ಥ ಆಗುತ್ತದೆ. ಅವರಿಗೆ ಕೇಂದ್ರದ ಜೊತೆ ಮಾತಾಡೋದಕ್ಕೆ ಆಗಲ್ಲ, ಕೇಂದ್ರದವರನ್ನು ಎದುರಿಸೋಕೆ ಶಕ್ತಿ ಇಲ್ಲ. ರೈತರ ಬಗ್ಗೆ ಕಪಟ ನಾಟಕ ಅಷ್ಟೇ.

ಅ.3 ರಂದು ಕಮಿಟಿ ಬರುತ್ತದೆ, ಅವರಿಗೆ ಕಾನೂನು ರೀತಿ ಸಹಕಾರ ಕೊಡುತ್ತೇವೆ. ಅವರು ಬರಲಿಲ್ಲ ಅಂದ್ರೆ ನಾನಂತೂ ರಾಜ್ಯದ ರೈತರ ಹಿತ ಕಾಪಾಡೋಕೆ ಏನು ಬೇಕೋ ಅದು ಮಾಡುತ್ತೇನೆ. ಕಸ್ತೂರಿರಂಗನ್ ವಿಷಯವಾಗಿ ಕೇಂದ್ರದ ನಾಯಕರು, ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ ಎಂದರು.


Spread the love

About Laxminews 24x7

Check Also

ಲವ್ವರ್‌ ಮದುವೆಯಾಗಲು 21 ವಯಸ್ಸಾಗುವವರೆಗೆ ಕಾಯುವಂತೆ ಹೇಳಿದ ತಂದೆಯನ್ನೇ ಗುಂಡಿಕ್ಕಿ ಕೊಂದ 18 ವರ್ಷದ ಪುತ್ರ

Spread the loveಚಂಡೀಗಢ: ನಿನಗಿನ್ನೂ 18 ವರ್ಷ. ನಿನ್ನ ಲವ್ವರ್‌ನ ಮದುವೆ ಆಗೋಕೆ 21 ವಯಸ್ಸಾಗುವವರೆಗೆ ಕಾಯಿ ಎಂದು ಬುದ್ದಿಮಾತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ