Breaking News

ಬರಪೀಡಿತ ಎಂದು ಘೋಷಿಸದ್ದಕ್ಕೆ ರಾಜೀನಾಮೆ ಸಲ್ಲಿಸಿದೆ – ಕ್ಷೇತ್ರದ ಜನರಿಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧ: ಯಶವಂತರಾಯಗೌಡ

Spread the love

ವಿಜಂಯಪುರ: 188 ತಾಲೂಕುಗಳು ಘೋಷಣೆ ಆದಾಗಲೂ, ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ 11 ಘೋಷಣೆ ಆದರೂ ಇಂಡಿ, ಚಡಚಣ ಬರಪೀಡಿತ ಎಂದು ಘೋಷಣೆ ಮಾಡಿರಲಿಲ್ಲ. ಹೀಗಾಗಿ ನಾನು ರಾಜೀನಾಮೆ ಸಲ್ಲಿಸಿದೆ. ಕ್ಷೇತ್ರದ ಜನರಿಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧ ಎಂದು ಇಂಡಿ ಶಾಸಕ ( ಯಶವಂತರಾಯಗೌಡ ಪಾಟೀಲ್  ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಹಂತ ಹಂತವಾಗಿ 217 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. ರಾಜ್ಯದಲ್ಲಿ ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಈಗ ಜಿಲ್ಲೆಯ 13 ತಾಲೂಕುಗಳನ್ನು ಬರ ಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದೆ. ಈ ಕಾಂಗ್ರೆಸ್  ಪಕ್ಷವನ್ನು ನಾನು ಕಟ್ಟಿರುವೆ. 40 ವರ್ಷದಿಂದ ನಾನು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿರುವೆ. ನಾನು ಕಾಂಗ್ರೆಸ್ ಪಕ್ಷದಲ್ಲೇ ಹುಟ್ಟಿರುವೆ, ಇದರಲ್ಲೇ ಸಾಯುವೆ. ನಾನು ಯಾವುದೇ ಕಾರಣಕ್ಕೂ ಪಕ್ಷಾಂತರಿ ಆಗಲ್ಲ. ಕ್ಷೇತ್ರದ ಜನರಿಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧ ಎಂದರು.

ನಾನು ರಾಜೀನಾಮೆ ನೀಡಿದ ವಿಚಾರವಾಗಿ ವ್ಯಂಗ್ಯವಾಡುವ ಯಾರ ಮಾತಿಗೆ ಮಹತ್ವ ಕೊಡಲ್ಲ. ಮತಕ್ಷೇತ್ರದ ಜನರ ಸಮಸ್ಯೆಗೆ ಗಟ್ಟಿ ಧ್ವನಿಯಾಗಿ ನಿಲ್ಲುವುದು ನನ್ನ ಧರ್ಮ. ಸರ್ಕಾರಕ್ಕೆ ಮನವರಿಕೆ ಮಾಡುವುದು ಕೆಲವೊಮ್ಮೆ ತಡವಾಗಬಹುದು. ಕೆಲವೊಮ್ಮೆ ಪತ್ರದ ಮೂಲಕ, ಕೆಲವೊಮ್ಮೆ ಭೇಟಿಯಾಗಿ ಮನವರಿಕೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ನಾನು ಕಳೆದ ಬಾರಿ ರಾಜೀನಾಮೆ ಕೊಟ್ಟಿದ್ದು ನನಗೆ ಸಚಿವ ಸ್ಥಾನ ಕೊಡಲಿಲ್ಲ ಎನ್ನುವ ಕಾರಣಕ್ಕೆ ಅಲ್ಲ. ಬದಲಿಗೆ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂಬ ಕಾರಣಕ್ಕೆ ನೀಡಿದ್ದೆ. ಬಳಿಕ ಅವರು ಬಂದು ಮನವರಿಕೆ ಮಾಡಿದಾಗ ರಾಜೀನಾಮೆ ವಾಪಸ್ ಪಡೆದಿದ್ದೆ. ಈ ಬಾರಿ ಜಿಲ್ಲೆಯ 13 ತಾಲೂಕುಗಳ ಪೈಕಿ 11 ಘೋಷಣೆ ಮಾಡಿ ನಮ್ಮ ಮತಕ್ಷೇತ್ರ ಘೋಷಣೆ ಮಾಡದ ಕಾರಣ ರಾಜೀನಾಮೆ ನೀಡಿದ್ದೆ. ನನ್ನ ಸ್ಥಾನದಲ್ಲೇ ಯಾರೇ ಇದ್ದರೂ ಅದನ್ನೇ ಮಾಡುತ್ತಿದ್ದರು. ತಾಳ್ಮೆಗೆ ಒಂದು ಮಿತಿ ಇರುತ್ತೆ ಎಂದು ಅಸಮಾಧಾನ ಹೊರಹಾಕಿದರು.


Spread the love

About Laxminews 24x7

Check Also

ಚುನಾವಣಾ ಆಯೋಗದಲ್ಲಿ ಯಾಕೆ ಭಿನ್ನಾಭಿಪ್ರಾಯ ಬಂದಿದೆ ಅಂತ ಆಯೋಗವೇ ಸ್ಪಷ್ಟಪಡಿಸಲಿ: ಹೆಚ್‌ಡಿಕೆ

Spread the loveಬೆಂಗಳೂರು: ಚುನಾವಣಾ ಆಯೋಗದಲ್ಲಿ ಯಾಕೆ ಭಿನ್ನಾಭಿಪ್ರಾಯ ಬಂದಿದೆ ಅಂತ ಆಯೋಗವೇ ಸ್ಪಷ್ಟಪಡಿಸಲಿ ಎಂದು ಕೇಂದ್ರ ಸಚಿವ ಹೆಚ್‌ಡಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ