Breaking News

PSI ನೇಮಕಾತಿಯಲ್ಲಿ ಅಕ್ರಮ – ಆರ್‌ಡಿ ಪಾಟೀಲ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ

Spread the love

ಬೆಂಗಳೂರು: ಪಿಎಸ್‌ಐ  ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್‌ಡಿ ಪಾಟೀಲ್ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ.

ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಡೆಸಿದ ಸುಪ್ರೀಂಕೋರ್ಟ್, ಆರ್‌ಡಿ ಪಾಟೀಲ್ ವಿರುದ್ಧದ ಇತರೆ ಪ್ರಕರಣಗಳ ಮಾಹಿತಿ ಕೇಳಿದೆ. ಅದಕ್ಕೆ ನಮ್ಮ ವಿರುದ್ಧ 22 ಪ್ರಕರಣಗಳಿವೆ, ಅದರ ಮಾಹಿತಿ ನಮ್ಮಲ್ಲಿ ಇದೆ ಎಂದು ಆರ್‌ಡಿ ಪಾಟೀಲ್  ಪರ ವಕೀಲರು ವಾದಿಸಿದರು. ಈ ವೇಳೆ ಆರ್‌ಡಿ ಪಾಟೀಲ್ ವಿರುದ್ಧ 24 ಕೇಸ್‌ಗಳಿದೆ ಎಂದು ಆಕ್ಷೇಪ ಕೇಳಿಬಂದಿದ್ದು, ಈ ಹಿನ್ನೆಲೆ ಕೋರ್ಟ್ ವಿಸ್ತೃತ ಮಾಹಿತಿ ಸಲ್ಲಿಕೆಗೆ ಸೂಚನೆ ನೀಡಿದೆ.

ಈ ವೇಳೆ ಮೂರು ವರ್ಷದಿಂದ ನ್ಯಾಯಂಗ ಬಂಧನದಲ್ಲಿದ್ದಾರೆ, ಶೀಘ್ರ ಜಾಮೀನು ನೀಡುವಂತೆ ಆರ್‌ಡಿ ಪಾಟೀಲ್ ಪರ ವಕೀಲರು ಕೇಳಿದ್ದು, ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ.


Spread the love

About Laxminews 24x7

Check Also

ಹೈಕೋರ್ಟ್‌ನ ಎಸ್‌ಐಟಿ ಆದೇಶ ಪ್ರಶ್ನಿಸಿ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾದ ಸರ್ಕಾರ

Spread the loveಬೆಂಗಳೂರು: ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ  ರಚಿಸಿ ಧಾರವಾಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ