ಹಾಸನ: ನಾಲೆಯಲ್ಲಿ ನವವಿವಾಹಿತೆ ಕಣ್ಮರೆಯಾದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿನಡೆದಿದೆ.
ಜಯಶೀಲಾ.ಬಿ.ಕೆ (ಪ್ರಿಯಾಂಕ 24) ಅನುಮಾನಾಸ್ಪದವಾಗಿ ಕಣ್ಮರೆಯಾದ ಮಹಿಳೆ. ಎಂಟು ತಿಂಗಳ ಹಿಂದೆ ಕುರುವಂಕ ಗ್ರಾಮದ ರಾಜಶೇಖರ (27) ಎಂಬಾತನ ಜೊತೆ ಪ್ರಿಯಾಂಕಳನ್ನು ಮದುವೆ ಮಾಡಿಕೊಡಲಾಗಿತ್ತು. ರಾಜಶೇಖರ ಬಡ್ಡಿ ವ್ಯವಹಾರ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಮದುವೆಯಾದ ಬಳಿಕ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಎರಡು ಬಾರಿ ರಾಜಿ ಪಂಚಾಯ್ತಿ ಸಹ ಮಾಡಲಾಗಿತ್ತು. ವರದಕ್ಷಿಣೆಗಾಗಿ ಪತಿಯೇ ಕೊಲೆ ಮಾಡಿದ್ದಾನೆ ಎಂದು ಮೃತಳ ಪೋಷಕರ ಆರೋಪಿಸಿದ್ದಾರೆ.
ನಾಲೆಗೆ ತಳ್ಳಿ ಹತ್ಯೆ ಆರೋಪ
ಎರಡುವರೆ ತಿಂಗಳ ಗರ್ಭಿಣಿಯಾಗಿದ್ದ ಜಯಶೀಲಾಳನ್ನು ಪತಿ ರಾಜಶೇಖರ ಸೆ.19 ರಂದು ಬೈಕ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ತಂದೆ ದೊರೆಸ್ವಾಮಿಗೆ ಕರೆ ಮಾಡಿ ಆಸ್ಪತ್ರೆಗೆ ಬರುವಂತೆ ಜಯಶೀಲಾ ಹೇಳಿದ್ದಳು. ತಂದೆಗೆ ಫೋನ್ ಮಾಡಿದ್ದಕ್ಕೆ ಜಯಶೀಲಾ ಜೊತೆ ಪತಿ ಹಾಗೂ ಅತ್ತೆ ವಿಜಯಲಕ್ಷ್ಮಿ ಜಗಳ ಮಾಡಿದ್ದರು. ಇದರಿಂದ ತಂದೆಗೆ ಕರೆ ಮಾಡಿ ಆಸ್ಪತ್ರೆಗೆ ಬರಬೇಡಿ ಎಂದಿದ್ದಳು.
ಆಸ್ಪತ್ರೆಗೆ ತೋರಿಸಿ ಚಿಕ್ಕನಾಯಕನಹಳ್ಳಿ ಗ್ರಾಮದ ಹೇಮಾವತಿ ಎಡದಂಡೆ ನಾಲೆ ಬಳಿ ಬರುವಾಗ ಬೈಕ್ ನಿಲ್ಲಿಸುವಂತೆ ಹೇಳಿ ಪತ್ನಿ ನೀರಿಗೆ ಜಿಗಿದಿದ್ದಾಳೆ ಎಂದು ರಾಜಶೇಖರ ಹೇಳಿದ್ದಾನೆ. ಅಲ್ಲದೇ ತಾನೂ ಕಾಪಾಡಲು ನೀರಿಗೆ ಜಿಗಿದಿದ್ದೆ, ಆದರೆ ಸಾಧ್ಯವಾಗಿಲ್ಲ. ವರದಕ್ಷಿಣೆಗಾಗಿ ನಾನಾಗಲಿ ನಮ್ಮ ಮನೆಯವರಾಗಲಿ ಕಿರುಕುಳ ನೀಡಿಲ್ಲ ಎಂದು ಹೇಳಿಕೊಂಡಿದ್ದಾನೆ. ರಕ್ಷಣೆಗೆ ನಾಲೆಗೆ ಜಿಗಿದಾಗ ನೀರು ನಾನು ಸಹ ನೀರು ಕುಡಿದಿದ್ದೇನೆ ಎಂದು ಆತ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ರಾಜಶೇಖರ, ಮಾವ ದೊರೆಸ್ವಾಮಿ ಹಾಗೂ ಅತ್ತೆ ವಿಜಯಲಕ್ಷ್ಮಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಆಕೆಗೆ ಈಜು ಕೂಡ ಬರ್ತಿತ್ತು ಆಕೆ ಸತ್ತಿದ್ದಾಳೊ, ಬದುಕಿದ್ದಾಳೋ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ.
ಪತಿ ಕುಟುಂಬಸ್ಥರ ಆರೋಪ
ಜಯಶೀಲಾಗೆ ಈಗಾಗಲೇ ಪ್ರೇಮಿಯ ಜೊತೆ ಮದುವೆಯಾಗಿತ್ತು. ಆಕೆಯನ್ನು ಅವಳ ತಂದೆ ತಾಯಿ ವಾಪಸ್ ಕರೆತಂದು ವಿಷದ ಬಾಟಲ್ ಹಿಡಿದು ಬೆದರಿಸಿ, ರಾಜಶೇಖರನನ್ನು ಮದುವೆಯಾಗುವಂತೆ ಒತ್ತಡ ಹೇರಿದ್ದರು. ಈ ವಿಚಾರ ಮುಚ್ಚಿಟ್ಟು ಮದುವೆ ಮಾಡಿದ್ದರು. ಅವರು ಮಾಡಿದ ತಪ್ಪಿಗೆ ನಮ್ಮ ಹುಡುಗನ ಜೀವನ ಹಾಳಾಗಿದೆ ಎಂದು ರಾಜಶೇಖರನ ಪೋಷಕರು ಆರೋಪಿಸಿದ್ದಾರೆ.
Laxmi News 24×7