Breaking News

ವಿಧಾನಸೌಧ ಡಿಸಿಪಿ ಯೋಗೇಶ್ ಮೇಲೆ ಸಿದ್ದರಾಮಯ್ಯ ಗರಂ

Spread the love

ಬೆಂಗಳೂರು: ವಿಧಾನಸಭೆ ಕಲಾಪ ಮುಗಿಸಿ ನಿರ್ಗಮಿಸುತ್ತಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ವಿಧಾನಸೌಧ ಡಿಸಿಪಿ ಯೋಗೇಶ್  ಮೇಲೆ ಗರಂ ಆಗಿದ್ದಾರೆ.

ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಮೆಟ್ಟಿಲು ಇಳಿದು ಬಂದು ಕಾರು ಹತ್ತಲು ಸಿದ್ದರಾಮಯ್ಯ ತೆರಳಿದ್ದರು. ಆದರೆ, ಕೆಂಗಲ್ ದ್ವಾರದ ಬಳಿ ನಿಲ್ಲಿಸಿದ್ದ ಅವರ ಕಾರನ್ನು ಡಿಸಿಪಿ ಯೋಗೇಶ್ ಅಲ್ಲಿಂದ ತೆಗೆಸಿ ಪಾರ್ಕಿಂಗ್‌ಗೆ ಕಳುಹಿಸಿದ್ದರು. ಹೀಗಾಗಿ ಕೆಂಗಲ್ ದ್ವಾರದ ಬಳಿ ಸಿದ್ದರಾಮಯ್ಯ ಕಾರಿಗಾಗಿ ಕಾಯಬೇಕಾಗಿತ್ತು. 

ಕಾರು ಅಲ್ಲಿಲ್ಲದಿರುವುದನ್ನು ಕಂಡು ಆಕ್ರೋಶಗೊಂಡ ಸಿದ್ದರಾಮಯ್ಯ ಅವರು, ತಕ್ಷಣವೇ ಡಿಸಿಪಿ ಯೋಗೇಶ್ ಅವರನ್ನು ಕರೆದು ಯಾಕೆ ಕಾರು ತೆಗೆಸಿದ್ದು? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದೇ ವೇಳೆ ನಿನ್ನ ಮೇಲೆ ಬಹಳ ಆರೋಪಗಳಿವೆ, ಶಾಸಕರನ್ನ ಸರಿಯಾಗಿ ನಡೆಸಿಕೊಳ್ತಿಲ್ಲ ಎಂಬ ದೂರುಗಳಿವೆ, ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಕಿಡಿಕಾರಿದ್ದಾರೆ. ಕಾರು ತೆಗೆಸಿದ್ದಕ್ಕೆ ಸಿದ್ದರಾಮಯ್ಯ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೂ ವಿಚಾರ ಮುಟ್ಟಿಸಿ ಕಿಡಿಕಾರಿದ್ದಾರೆ. ಕೊನೆಗೆ ಡಿಸಿಪಿ ಯೋಗೇಶ್ ಅವರು ಸಾರಿ ಸರ್ ಎಂದು ಕ್ಷಮೆ ಕೋರಿದ್ದಾರೆ.


Spread the love

About Laxminews 24x7

Check Also

ಲೇಡಿ ಪಿಎಸ್‌ಐಗೆ ಕಪಾಳಮೋಕ್ಷ ಪ್ರಕರಣ – ಕ್ಷಮೆಯಾಚಿಸಿದ ಶಾಸಕ ಸುರೇಶ್‌ಗೌಡ ಪುತ್ರಿ

Spread the loveಮಂಡ್ಯ: ಲೇಡಿ ಪಿಎಸ್‌ಐಗೆ  ಕಪಾಳಮೋಕ್ಷ ಪ್ರಕರಣ ಸಂಬಂಧ ಶಾಸಕ ಸುರೇಶ್‌ಗೌಡ  ಪುತ್ರಿ ಐಶ್ವರ್ಯ ಪಿಎಸ್‌ಐ ಸವಿತಾ ಪಾಟೀಲ್‌ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ