ಬೆಳಗಾವಿ : ಸದಾ ಒಂದಿಲ್ಲೊಂದು ಕರ್ಮಕಾಂಡದ ಮೂಲಕ ಸುದ್ದಿಯಲ್ಲಿರುವ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಈ ಬಾರಿ ಮೂರು ವರ್ಷಗಳಲ್ಲಿ ನಾಲ್ವರು ಲಪಂಗ ಸಿಬ್ಬಂದಿಗಳು ಸೇರಿ PF, NPS ಗಳಲ್ಲಿ ಲಕ್ಷಾಂತರ ರೂ ಭ್ರಷ್ಟಾಚಾರ ಮಾಡಿ ಜೈಲು ಸೇರುವ ಮೂಲಕ ಇತಿಹಾಸ ಪುಟದಲ್ಲಿ ರಾಚವಿ ಗೆ ಕಪ್ಪು ಚುಕ್ಕೆ ತಂದಿದ್ದಾರೆ.
ALSO READ
ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ
ಹಣಕಾಸು ಇಲಾಖೆಯ ಸಹಾಯಕ ರಿಜಿಸ್ಟ್ರಾರ್ 1.ಮುರಿಗೇಶ ಎಚ್ ಎಂ
2.ಮಹೇಶ್ ವೀರೇಶ್ ವಾಲಿ
3.ಸಂದೀಪ್ ಬುರ್ಲಿ
4.ರಾಮು ಯಮನಪ್ಪಾ ಹಂಚಿನಾಳ ಸೇರಿ
ನಾಲ್ವರು ಭ್ರಷ್ಟಾಚಾರ ಮಾಡಿರುವ ಆರೋಪಿಗಳು.
ಈ ನಾಲ್ವರು ಖದೀಮರು 2020 ರಿಂದ 2023 ರವರೆಗೂ ಸುಮಾರು 32 ಲಕ್ಷಕ್ಕೂ ಹೆಚ್ಚು ರೂ ಮೊತ್ತಗಳನ್ನು ಅಕ್ರಮವಾಗಿ ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಬಾರಿ ಭ್ರಷ್ಟಾಚಾರ ಮಾಡಿ ಮೇಲಧಿಕಾರಿಗಳಿಗೆ ಪಂಗನಾಮ ಹಾಕಿದ್ದರು. ಈ ವಿಷಯ ತಡವಾಗಿ ಬೆಳಕಿಗೆ ಬರುತ್ತಿದ್ದಂತೆ ಮೇಲಧಿಕಾರಿಗಳು ಎಚ್ಚೆತ್ತುಕೊಂಡು ಕೊನೆಗೂ ತನಿಖೆಗೆ ಮುಂದಾಗಿ
ಈ ನಾಲ್ವರು ಮೇಲೆ ಸೆಪ್ಟೆಂಬರ್ 8 ರಂದು ವಿಶ್ವವಿದ್ಯಾಲಯದ ಉಪ ಕುಲಸಚಿವ ಡಿ ಕೆ ಕಾಂಬಳೆ ಕಾಕತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದರು.
ಪರಾರಿಯಾಗಿದ್ದ ಖದೀಮರನ್ನು ಬೆನ್ನತ್ತಿದ್ದ ಕಾಕತಿ PSI ಮಂಜುನಾಥ ನಾಯಿಕ, ಮೃತ್ಯುಂಜಯ ಮಠದ ಹಾಗೂ ಸಿಬ್ಬಂದಿಗಳು ಹುಬ್ಬಳ್ಳಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಶೋಧ ನಡೆಸಿ ಕೊನೆಗೂ ಬಂಧಿಸಿ ಹಿಂಡಲಗಾ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
1.ಮುರಿಗೇಶ ಎಚ್ ಎಂ
2.ಮಹೇಶ್ ವೀರೇಶ್ ವಾಲಿ
3.ಸಂದೀಪ್ ಬುರ್ಲಿ ಇಂದು ಜೈಲು ಸೇರಿರುವ ಆರೋಪಿಗಳು.
ಈ ನಾಲ್ವರು ಆರೋಪಿಗಳು ಸೇರಿಕೊಂಡು ಇನ್ನೂ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ನಡೆಸಿದ್ದು, ಅದರ ಭಾಗವಾಗಿ ತನಿಖೆ ಮುಂದುವರಿಸುವುದಾಗಿ ತಿಳಿದು ಬಂದಿದೆ.
ಒಟ್ಟಿನಲ್ಲಿ ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿ ಮಾಡಬೇಕಿದ್ದ ವಿಶ್ವವಿದ್ಯಾಲಯ ಭ್ರಷ್ಟಾಚಾರದಲ್ಲಿ ಹೆಸರು ಮಾಡಿದ್ದು ಬೆಳಗಾವಿಗೆ ದುರ್ದೈವದ ಸಂಗತಿಯಾಗಿದೆ.
—————————————
ಮತ್ತಷ್ಟು ಓದಲು ಭೇಟಿ ನೀಡಿ / Read more at: https://janajeevala.com/news.php?title=lakhs-of-rupees-in-rcu-three-jailed
© KhushiHost News Portal – All Rights Reserved.
Laxmi News 24×7