Breaking News

`ವಂದೇ ಮಾತರಂ’ಗೆ ಕತ್ತರಿ; ಕಾಂಗ್ರೆಸ್ ವಿರುದ್ಧ ಸಂಸತ್ತಿನಲ್ಲಿ ರಣಕಹಳೆ: ಪ್ರಹ್ಲಾದ್ ಜೋಶಿ

Spread the love

ನವದೆಹಲಿ: `ವಂದೇ ಮಾತರಂ’  ಗೀತೆಯನ್ನು ಎರಡೇ ಚರಣಕ್ಕೆ ಕತ್ತರಿಸಿದ ರಾಜ್ಯ ಕಾಂಗ್ರೆಸ್  ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ರಣಕಹಳೆ ಮೊಳಗಿಸಲಿದ್ದೇವೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ) ಎಚ್ಚರಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಕಾಂಗ್ರೆಸ್ ಪಕ್ಷ ದೇಶವಿರೋಧಿ ಕ್ರೂರ ಮನಸ್ಥಿತಿ ಹೊಂದಿದ್ದು, ಕರ್ನಾಟಕದಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದೆ. ಸರ್ಕಾರ ಕಾನೂನು ಬಾಹಿರವಾಗಿ ಮನಸೋ ಇಚ್ಛೆ ಫರ್ಮಾನು ಹೊರಡಿಸುತ್ತಿದೆ. ವಿಧಾನಸೌಧದಲ್ಲಿ `ವಂದೇ ಮಾತರಂ’ ಗೀತೆಯನ್ನು ಕಾನೂನು ಬಾಹಿರವಾಗಿ ಕತ್ತರಿಸಿ, ಕೇವಲ ಎರಡೇ ಚರಣವನ್ನು ಹಾಡಿ ದೇಶವಿರೋಧಿ ನೀತಿ ಪ್ರದರ್ಶಿಸಿದ್ದು, ಇದರ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತಲಿದ್ದೇವೆ ಎಂದು ಕಿಡಿಕಾರಿದರು.

ನಕಲಿ ದೇಶಭಕ್ತಿ ಕಳಚಿದೆ:
ಕಾಂಗ್ರೆಸ್ ತನ್ನ ನಕಲಿ ದೇಶಭಕ್ತಿಯ ಮುಖವಾಡವನ್ನು ಇಂದು ಸಂಪೂರ್ಣ ಕಳಚಿಟ್ಟಿದೆ. `ವಂದೇ ಮಾತರಂ’ ಅನ್ನು ಎರಡೇ ಚರಣಕ್ಕೆ ಸೀಮಿತಗೊಳಿಸಿ ಹಾಡಿದ್ದು ಅತ್ಯಂತ ಖಂಡನೀಯ ಮತ್ತು ನಾಚಿಕೆಗೇಡಿನ ಸಂಗತಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಡಿಕೆಶಿ ಆಡಳಿತದಲ್ಲಿ ರಾಷ್ಟ್ರಗೀತೆಗೆ ಅಪಮಾನ:
ಡಿಕೆ ಶಿವಕುಮಾರ ಆಡಳಿತದಲ್ಲಿ ರಾಷ್ಟ್ರಗೀತೆಗೆ ಹೀಗೆ ಅಪಮಾನ ಎಸಗುವುದನ್ನು ಕನ್ನಡಿಗರು ಯಾರೂ ನಿರೀಕ್ಷಿಸಿರಲಿಲ್ಲ. ದೆಹಲಿಯ ನಕಲಿ ಕುಟುಂಬವನ್ನು ಓಲೈಸಲು ರಾಜ್ಯ ಕಾಂಗ್ರೆಸ್ಸಿಗರು ಏನೆಲ್ಲಾ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಕಾಂಗ್ರೆಸ್‌ಗೆ ರಾಷ್ಟ್ರಗೀತೆ ಮೇಲೇಕೆ ಇಷ್ಟು ದ್ವೇಷ?
ಕಾಂಗ್ರೆಸ್ ಪಕ್ಷಕ್ಕೆ ನಮ್ಮ ರಾಷ್ಟ್ರಗೀತೆ ಮೇಲೇಕೆ ಇಷ್ಟು ದ್ವೇಷ? ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ರಾಷ್ಟ್ರೀಯ ಗೌರವ ರಕ್ಷಣೆಗೆಂದು ಇತ್ತೀಚಿನ ಸಂಸತ್ ಅಧಿವೇಶನದಲ್ಲಿ ಜಾರಿ ತಂದ ಕಾಯ್ದೆಗೂ ಅಪಮಾನಿಸಿದಂತಿದೆ ಎಂದು ಆಕ್ಷೇಪಿಸಿದರು.

ದೇಶದ ಹೆಮ್ಮೆಯನ್ನೇ ಬಲಿ ಕೊಡುತ್ತಿರುವ ಕಾಂಗ್ರೆಸ್:
ರಾಜ್ಯ ಕಾಂಗ್ರೆಸ್ ಸರ್ಕಾರ ಈ ದೇಶದ ಹೆಮ್ಮೆಯನ್ನೇ ಬಲಿ ಕೊಡಲು ನಿಂತಿದೆ. ಆದರೆ, ಇಂಥ ತುಘಲಕ್ ಆದೇಶಗಳಿಂದ ಭಾರತಾಂಬೆಯ ಅಸ್ಮಿತೆಯನ್ನು ಅಳಿಸಲು ಸಾಧ್ಯವಿಲ್ಲ. ಕರ್ನಾಟಕದ ಜನತೆ ಈ ನೀಚ ಕೃತ್ಯಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಎಚ್ಚರಿಸಿದರು. 


Spread the love

About Laxminews 24x7

Check Also

ಗೌರವಯುತವಾಗಿ ನಡೆದುಕೊಳ್ಳಬೇಕು ಎಂದರೆ ಘರ್ಷಣೆ ಬೇಡ ಎಂದರ್ಥ: ಶಿವಲಿಂಗೇಗೌಡ ಸ್ಪಷ್ಟನೆ

Spread the loveಹಾಸನ: ಗೌರವಯುತವಾಗಿ ನಡೆದುಕೊಳ್ಳಬೇಕು ಎಂದರೆ ಘರ್ಷಣೆ ಬೇಡ ಎಂದು ಅರ್ಥ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ