Breaking News

ಶಾಲಾ ಬ್ಯಾಗ್‌ಗಳಿಂದ 38 ಕೆಜಿ ಗಾಂಜಾ ಸೀಜ್‌; ಮೂವರು ಅಪ್ರಾಪ್ತರು ಸೇರಿ ಐವರು ವಶಕ್ಕೆ

Spread the love

ಪಾಟ್ನಾ: ಬಿಹಾರದ ಹಾಜಿಪುರದಿಂದ ವಿದ್ಯಾರ್ಥಿಯೊಬ್ಬನ ಶಾಲಾ ಬ್ಯಾಗ್‌ನಲ್ಲಿ ಕಳ್ಳಸಾಗಣೆ ಮಾಡಲಾಗುತ್ತಿದ್ದ 38 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮೂವರು ಅಪ್ರಾಪ್ತರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಳ್ಳಸಾಗಣೆದಾರರು ಪ್ರಯಾಣಿಸುತ್ತಿದ್ದ ಬಸ್ಸನ್ನು ತಡೆದು, 4 ಲಕ್ಷ ರೂ. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ ಎಂದು ವೈಶಾಲಿಯ ಹಿರಿಯ ಪೊಲೀಸ್ ಅಧೀಕ್ಷಕ ಶುಭಾಂಕ್ ಮಿಶ್ರಾ ತಿಳಿಸಿದ್ದಾರೆ.

ಭಗವಾನ್‌ಪುರ ಪೊಲೀಸ್ ಮತ್ತು ಮದ್ಯಪಾನ ನಿಷೇಧ ಇಲಾಖೆಯ (ಪಾಟ್ನಾ) ಜಂಟಿ ತಂಡವು ಭಗವಾನ್‌ಪುರ ಅಡ್ಡಾ ಚೌಕ್‌ನಲ್ಲಿ ತಡೆಗೋಡೆಯನ್ನು (ಬ್ಯಾರಿಕೇಡ್) ಹಾಕಿ, ಮುಜಫರ್‌ಪುರದಿಂದ ಪಾಟ್ನಾಕ್ಕೆ ತೆರಳುತ್ತಿದ್ದ ಬಸ್ಸನ್ನು ತಡೆಗಟ್ಟಿತು. ನಂತರ, ಅವರು ಬಸ್ಸಿನೊಳಗೆ ಪ್ರವೇಶಿಸಿ ಅನುಮಾನಾಸ್ಪದ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿದರು.

ಶೋಧದ ವೇಳೆ, ಅಪ್ರಾಪ್ತರ ಶಾಲಾ ಬ್ಯಾಗ್‌ಗಳಲ್ಲಿ ಅಡಗಿಸಿಟ್ಟಿದ್ದ ಹೆಚ್ಚಿನ ಪ್ರಮಾಣದ ಗಾಂಜಾವನ್ನು ಪೊಲೀಸರು ಪತ್ತೆಹಚ್ಚಿದರು. ಐವರು ಕಳ್ಳಸಾಗಣೆದಾರರಿಂದ ಒಟ್ಟು 38 ಕೆಜಿ ನಿಷೇಧಿತ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಯಿತು.

‘ಆಪರೇಷನ್ ನೀಲಕಂಠ’ದ ಅಡಿಯಲ್ಲಿ ಆ ಐವರನ್ನು ಬಂಧಿಸಲಾಗಿದೆ. ಪೊಲೀಸರು ಅವರೆಲ್ಲರನ್ನೂ ವಶಕ್ಕೆ ಪಡೆದು ಕಾನೂನು ಕ್ರಮವನ್ನು ಆರಂಭಿಸಿದ್ದಾರೆ. ಪೊಲೀಸರ ಪ್ರಕಾರ, ಮಾದಕ ವಸ್ತುಗಳನ್ನು ಪೂರೈಸಲು ಕಳ್ಳಸಾಗಣೆದಾರರು ಪಾಟ್ನಾದತ್ತ ತೆರಳುತ್ತಿದ್ದರು.

ಮದ್ಯಪಾನ ನಿಷೇಧಿತ ರಾಜ್ಯವಾಗಿರುವ ಬಿಹಾರದಲ್ಲಿ ಮಾದಕ ವಸ್ತುಗಳ ಬಳಕೆಯು ಹೆಚ್ಚುತ್ತಿದೆ. ಬಂಧಿತರಾದ ಐವರ ಪೈಕಿ ಮೂವರು ಅಪ್ರಾಪ್ತರಾಗಿರುವುದು ಆತಂಕಕಾರಿ ವಿಚಾರವಾಗಿದೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ