ಜಾತಿ ಪ್ರಮಾಣ ಪತ್ರದ ಗೊಂದಲಗಳ ನಿವಾರಣೆಗೆ ಕ್ರಮ , ನೂರೊಂದು ಸಮುದಾಯಗಳ ಅಭಿವೃದ್ಧಿಗೆ ಆದ್ಯತೆ
ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೆಹೆಚ್. ಮುನಿಯಪ್ಪ ರವರ ನೇತೃತ್ವದಲ್ಲಿ ಇಂದು ವಿಕಾಸ ಸೌಧದದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಿದರು.
ಸಮಾಜ ಕಲ್ಯಾಣ ಇಲಾಖೆಯ ಅಡಿ ಬರುವ ಭೋವಿ ಅಭಿವೃದ್ಧಿ ನಿಗಮದ ಸಭೆಯನ್ನು ನಡೆಸಿದರು.
ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ ರವರು ಸಮುದಾಯದ ಸಮಸ್ಯಗಳ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರು
ಭೋವಿ ಸಮುದಾಯದಲ್ಲಿ ಜಾತಿ ಪ್ರಮಾಣ ಪತ್ರದ ಗೊಂದಲಗಳಿದ್ದು ಭೋವಿ ವಡ್ಡ ಎಂದೆ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲು ಇಲಾಖೆಯ ವತಿಯಿಂದ ಕ್ರಮವಹಿಸಬೇಕು ಎಂದರು,ಹಾಗೆಯೇ ಭೋವಿ ಸಮುದಾಯ ಭವನ ಗಳನ್ನು ನಿರ್ಮಿಸಲು ಕ್ರಮವಹಿಸಲು ಸಚಿವರಿಗೆ ಒತ್ತಾಯಿಸಿದರು.
ಸಮಾಜ ಕಲ್ಯಾಣ ಇಲಾಖೆಯಡಿ ನಾವು ಈಗಾಗಲೇ ಅಂಬೇಡ್ಕರ್ ಭವನ ,ಜಗಜೀವನ್ ರಾಮ್ ಭವನ ನಿರ್ಮಿಸುತ್ತಿದ್ದು ಭೋವಿ ಸಮುದಾಯದ ಗುರುಗಳಾದ ಸಿದ್ದರಾಮೇಶ್ವರ ರವರ ಹೆಸರನಡಿ 10 ಭವನಗಳನ್ನು ನಿರ್ಮಾಣ ಮಾಡಲು ಕ್ರಮವಹಿಸಲಾಗುವುದು ಜಿಲ್ಲಾ ವಾರು ಸಿಎ.ನಿವೇಶನಗಳನ್ನು ಗುರುತು ಮಾಡಿ ಜಿಲ್ಲಾಧಿಕಾರಿಗಳಿಂದ ಪಟ್ಟಿ ಜರೂರಾಗಿ ತರಸಿ ಸೂಕ್ತ ಸ್ಥಳದಲ್ಲಿ ಸಿದ್ದರಾಮೇಶ್ವರ ಭೋವಿ ಸಮುದಾಯ ಭವನಗಳನ್ನು ನಿರ್ಮಿಸಲು ಬದ್ದವಾಗಿದ್ದೇವೆ ಎಂದರು
ಹಾಗೆಯೇ ಲಂಬಾಣಿ ಸಮುದಾಯದ ಅಭಿವೃದ್ಧಿ ಗಾಗಿ ಬಂಜಾರ ಸಮುದಾಯ ಭವನಗಳನ್ನು ನಿರ್ಮಿಸಲಾಗುವುದು ಎಂದರು
ಪರಿಶಿಷ್ಟ ಜಾತಿಯ ಎಲ್ಲಾ ನೂರೊಂದು ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲಾ ಸಮುದಾಯಗಳ ಕಾರ್ಯಕ್ರಮಗಳ ಅನುಷ್ಠಾನ ಮಾಡಲಾಗುವುದು ಎಂದರು
ಈ ಸಮುದಾಯ ಭವನಗಳು ಅಧ್ಯಾಯನ ಕೇಂದ್ರಗಳಾದಾಗ ಮಾತ್ರ ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಪಡೆಯಲು ಸಹಕಾರಿಯಾಗಲಿದೆ ಸಮುದಾಯ ಭವನದಲ್ಲಿ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಿ ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಈ ದೂರದೃಷ್ಟಿಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಕ್ರಮವಹಿಸಲಾಗುವುದು ಎಂದರು
ಭೋವಿ ಸಮುದಾಯದ ಎಲ್ಲಾ ಸಮಸ್ಯೆಗಳನ್ನು ಒಂದು ವಾರದಲ್ಲಿ ಬಗೆಹರಿಸಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಅಂದಿನ ದಿವಂಗತ ಮಾಜಿ ರಾಷ್ಟಪತಿ ಪ್ರಣಬ್ ಮುಖರ್ಜಿ ರವರ ಬಳಿ ನಾನು ಕೇಂದ್ರದಲ್ಲಿ ಸಚಿವನಿದ್ದಾಗ ನಮ್ಮ ರಾಜ್ಯದ ಮಾಜಿ ಸಂಸದ ಚಂದ್ರಪ್ಪ, ಮಾಜಿ ಸಚಿವ ಆಂಜನೇಯ ದೃವನಾರಾಯಣ ಹಾಗೂ ಸಂಸದರ ನಿಯೋಗ ಪ್ರಣಬ್ ಮುಖರ್ಜಿ ರವರನ್ನು ಬೇಟಿ ಮಾಡಿ ಪರಿಶಿಷ್ಟ ಜಾತಿಯ ಸಮುದಾಯಗಳಿಗೆ ಗುತ್ತಿಗೆಯಲ್ಲಿ 50 ಲಕ್ಷಗಳವರೆಗೂ ಮೊದಲ ಆದ್ಯತೆಯಲ್ಲಿ ಅವರಿಗೆ ಮೀಸಲಿಡಬೇಕು ಎಂಬ ಮನವಿಯನ್ನು ಸಲ್ಲಿಸಿದಾಗ ಜಾರಿಗೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಅಂದಿನ ತೀರ್ಮಾನದಿಂದ ಈಗ ಒಂದು ಕೋಟಿಯವರೆಗೂ ಗುತ್ತಿಗೆ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದರು
ಸಭೆಯಲ್ಲಿ ಸಚಿವರಾದ ಶಿವರಾಜ್ ತಂಗಡಗಿ,ಭೋವಿ ನಿಗಮದ ಅಧ್ಯಕ್ಷರಾದ ರಾಮಪ್ಪ, ಸರ್ಕಾರದ ಕಾರ್ಯದರ್ಶಿ ಮೋಹನ್ ರಾಜ್ ಕೆ.ಪಿ,ಆಯುಕ್ತರಾದ ರಾಕೇಶ್ ಕುಮಾರ್ ,ಎಸ್ಸಿ ಎಸ್ಸಪಿ ನೊಡಲ್ ಏಜನಸ್ಸಿ ಸಲಹೆಗಾರ ಈ ವೆಂಕಟಯ್ಯ,ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Laxmi News 24×7