Breaking News

ರಾಕಿಂಗ್ ಸ್ಟಾರ್ ಅಬ್ಬರ – ಮೊದಲ ದಿನವೇ 140 ಕೋಟಿ ಬಾಚಿದ ಟಾಕ್ಸಿಕ್

Spread the love

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರ ವಿಶ್ವಾದ್ಯಂತ ಮೊದಲ ದಿನವೇ ಬರೋಬ್ಬರಿ 140 ಕೋಟಿಗೂ ಅಧಿಕ ಗಳಿಕೆ ಕಾಣುವ ಮೂಲಕ ಸಿನಿಮಾ ಭರ್ಜರಿ ಆರಂಭ ಪಡೆದುಕೊಂಡಿದೆ.

ಭಾರತದಲ್ಲಿ ಈ ಚಿತ್ರ 120.75 ಕೋಟಿ ರೂ., ವಿದೇಶಗಳಲ್ಲಿ 20 ಕೋಟಿ ರೂ. ಗಳಿಸಿದೆ ಎಂದು ಅಂದಾಜಿಸಲಾಗಿದೆ. ಯಾವುದೇ ಪ್ರೀಮಿಯರ್ ಅಥವಾ ಸೆಲೆಬ್ರಿಟಿ ಶೋಗಳಿಲ್ಲದೆ ನೇರವಾಗಿ ಆರು ಭಾಷೆಗಳಲ್ಲಿ ತೆರೆಕಂಡ ಈ ಚಿತ್ರಕ್ಕೆ ಬಹುತೇಕ ಫ್ಯಾನ್ ಶೋಗಳು ಹೌಸ್‌ಫುಲ್ ಪ್ರದರ್ಶನ ಕಂಡಿವೆ.

ಈ ವರ್ಷ ರಿಲೀಸ್ ಆದ ಮೊದಲ ದಿನವೇ 100 ಕೋಟಿ ರೂ. ಕ್ಲಬ್ ಸೇರಿದ ಎರಡನೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಟಾಕ್ಸಿಕ್’ ಪಾತ್ರವಾಗಿದೆ. ಈ ಸಾಲಿನಲ್ಲಿ ಮೊದಲ ದಿನ 146 ಕೋಟಿ ರೂ. ಗಳಿಸಿದ್ದ ‘ಧುರಂಧರ್ 2’ ಮೊದಲ ಸ್ಥಾನದಲ್ಲಿದ್ದರೆ, ‘ಟಾಕ್ಸಿಕ್’ ಎರಡನೇ ಸ್ಥಾನ ಪಡೆದುಕೊಂಡಿದೆ.

ಬೆಂಗಳೂರು ನಗರವೊಂದರಲ್ಲೇ 34 ಪ್ರಮುಖ ಕೇಂದ್ರಗಳಲ್ಲಿ ಸಿನಿಮಾಗೆ ಹೌಸ್‌ಫುಲ್ ಓಪನಿಂಗ್ ಸಿಕ್ಕಿದೆ. ಮಲ್ಟಿಪ್ಲೆಕ್ಸ್‌ಗಳಲ್ಲೂ ಶೇ.55ಕ್ಕೂ ಹೆಚ್ಚು ಪ್ರೇಕ್ಷಕರ ಹಾಜರಾತಿ ಕಂಡುಬಂದಿದೆ.

ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ‘ಕೆಜಿಎಫ್ 2’ ಮೂಲಕ ಈ ರೀತಿಯ ಬಿಗ್ ಓಪನಿಂಗ್ ದಾಖಲಾಗಿತ್ತು. ಇದೀಗ 4 ವರ್ಷಗಳ ಬಳಿಕ ಬೆಳ್ಳಿಪರದೆಗೆ ಮರಳಿರುವ ಯಶ್, ತಮ್ಮದೇ ದಾಖಲೆಯನ್ನು ಮುಂದುವರಿಸಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದ್ದಾರೆ.


Spread the love

About Laxminews 24x7

Check Also

ಬ್ಯಾಲೆಟ್ ಪೇಪರ್‌ನಲ್ಲೇ ಕಾಂಗ್ರೆಸ್ ಸೋತಿದೆ, ಪತನದ ದಿನಗಳು ಹತ್ತಿರ ಬರ್ತಿದೆ: ನಿಖಿಲ್ ಕುಮಾರಸ್ವಾಮಿ

Spread the loveರಾಮನಗರ: ಕಾಂಗ್ರೆಸ್  ಇವಿಎಂ ಮೇಲೆ ಅನುಮಾನ ಪಟ್ಟು, ಬ್ಯಾಲೆಟ್ ಪೇಪರ್  ಚುನಾವಣೆ ಬೇಕು ಅಂತಿದ್ದರು. ಈಗ ಬ್ಯಾಲೆಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ