Breaking News

ತುಂಗಾ ನಾಲೆಯಲ್ಲಿ ಈಜಲು ಹೋಗಿದ್ದ ಬಾಲಕ ನೀರುಪಾಲು

Spread the love

ಶಿವಮೊಗ್ಗ: ತುಂಗಾ ನಾಲೆಯಲ್ಲಿ  ಈಜಲು ಹೋಗಿದ್ದ ಬಾಲಕ  ನೀರುಪಾಲಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಬಳಿಯ ತುಂಗಾ ಮೇಲ್ದಂಡೆ ನಾಲೆಯಲ್ಲಿ ನಡೆದಿದೆ.

ಬೊಮ್ಮನಕಟ್ಟೆಯ ನಿವಾಸಿ ಕೃಷ್ಣ (15) ನೀರುಪಾಲಾದ ಬಾಲಕ. ಕೃಷ್ಣ ಶಿವಮೊಗ್ಗ ನಗರದ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಆರು ಜನ ಸ್ನೇಹಿತರ ಜೊತೆ ತುಂಗಾ ನಾಲೆಗೆ ಈಜಲು ತೆರಳಿದ್ದ ವೇಳೆ ನಾಲೆಯಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ನಿಯಂತ್ರಣ ಕಳೆದುಕೊಂಡು ಕೃಷ್ಣ ಕಣ್ಮರೆಯಾಗಿದ್ದಾನೆ.

ಬಾಲಕ ಕೃಷ್ಣನ ರಕ್ಷಿಸಲು ಸ್ನೇಹಿತರ ಯತ್ನ ವಿಫಲವಾಗಿದೆ. ಅಗ್ನಿಶಾಮಕ ದಳ ಹಾಗೂ ಸ್ಥಳೀಯರಿಂದ ಬಾಲಕನಿಗೆ ಶೋಧ ಕಾರ್ಯ ನಡೆಯುತ್ತಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

About Laxminews 24x7

Check Also

Bro Wait, ಭಾರತ್ ಮಾತಾ ಕಿ ಜೈ ಶುರು ಮಾಡೋಣ – ರಾಗಾ ಪಿತೃಪ್ರಧಾನ ವ್ಯವಸ್ಥೆ ಹೇಳಿಕೆಗೆ ಕಂಗನಾ ತಿರುಗೇಟು

Spread the loveನವದೆಹಲಿ: ಕೃತಿ ಸನೋನ್‌ಗೆ ಸಾಥ್ ನೀಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಇದೀಗ ನಟಿ, ಬಿಜೆಪಿ ಸಂಸದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ