ಬೆಂಗಳೂರು: ರಾಜ್ಯದ ಎಸ್‌ಐಆರ್ ಕರಡು ಪಟ್ಟಿ ಪ್ರಕಟವಾಗಿದ್ದು, 1.7 ಕೋಟಿ ಮತದಾರರು ಎಎಸ್‌ಡಿಡಿಓ ವ್ಯಾಪ್ತಿಯಲ್ಲಿದ್ದಾರೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿ ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್‌ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎರಡು ಪುಟಗಳ ಪತ್ರ ಬರೆದಿದ್ದಾರೆ.
1.07 ಕೋಟಿಗೂ ಹೆಚ್ಚು ಮತದಾರರನ್ನು ಎಎಸ್‌ಡಿಡಿಓ ಎಂದು ಗುರುತಿಸಲಾಗಿದೆ. ಸುಮಾರು 43 ಲಕ್ಷ ಮತದಾರರಿಗೆ ನೋಟಿಸ್‌ಗಳನ್ನ ನೀಡಲಾಗುತ್ತಿದೆ. ಈ ಕುರಿತು ಹಲವು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಿಎಂ ಡಿಕೆಶಿ ಮನವಿ ಮಾಡಿದ್ದಾರೆ.
ನೋಟಿಸ್‌ಗಳನ್ನ ಪಡೆಯುವ ಮತದಾರರಿಗೆ ಈಗ ನೀಡಲಾಗಿರುವ ನೋಟಿಸ್‌ಗೆ ಪ್ರತಿಕ್ರಿಯಿಸಲು ಕನಿಷ್ಠ 3-4 ವಾರಗಳ ಕಾಲಾವಕಾಶ ನೀಡಬೇಕು. ಚುನಾವಣೆ ಹಕ್ಕಿನಿಂದ ಯಾರೂ ಕೂಡ ವಂಚಿತರಾಗಬಾರದು ಅನ್ನೋದೇ ತಮ್ಮ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಡಿಕೆಶಿ ಹೇಳಿದ್ದಾರೆ.
ಈ ಮಧ್ಯೆ, 27 ಜಿಲ್ಲೆಗಳ ಕಾಂಗ್ರೆಸ್ ಶಾಸಕರ ಜಿಲ್ಲಾವಾರು ಸಭೆ ನಡೆಸಿದ ಸಿಎಂ, ಎಸ್‌ಐಆರ್ ಬಗ್ಗೆ ವಿಶೇಷ ಗಮನ ಕೊಡುವಂತೆ ಸೂಚಿಸಿದ್ದಾರೆ.
Laxmi News 24×7