ಬೆಂಗಳೂರು: ನೇಮಕಾತಿಯಲ್ಲಿ ಹಗರಣ ಪ್ರಕರಣ ಸಂಬಂಧ ಕೆಪಿಎಸ್‌ಸಿ ಮೇಲೆ ಅಧಿಕಾರಿಗಳು ದಾಳಿ ಮಾಡಿದ ವೇಳೆ ಶಾಕಿಂಗ್ ವಿಚಾರವೊಂದು ಬಯಲಾಗಿದೆ. ಕೆಪಿಎಸ್‌ಸಿ ಕೇಂದ್ರ ಕಚೇರಿಯಲ್ಲಿಯೇ ಅತಿ ದೊಡ್ಡ ಅಕ್ರಮ ನಡೆದಿದ್ದು, ಒಎಂಆರ್ ಶೀಟ್‌ಗಳನ್ನು ಸ್ಕ್ಯಾನ್ ಮಾಡಿರುವ ಹಾರ್ಡ್ ಡಿಸ್ಕ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಪರೀಕ್ಷೆ ಪ್ರಾರಂಭ ಆಗುವಾಗ ಸ್ಟ್ರಾಂಗ್ ರೂಂ ತೆರೆಯಬೇಕು. ಪ್ರಶ್ನೆ ಪತ್ರಿಕೆ ಒಎಂಆರ್ ಇಡುವಾಗ 24*7 ಸಿಸಿಟಿವಿ ಕಣ್ಗಾವಲು ಇಡಬೇಕು. ಕೆಪಿಎಸ್‌ಸಿ ಸ್ಟ್ರಾಂಗ್ ರೂಂ ಅಲ್ಲಿ ಸಿಸಿ ಟಿವಿ ಇದೆ, ಆದರೆ ಡೇಟಾ ಡಿಲೀಟ್ ಆಗಿದೆ. ಸ್ಟ್ರಾಂಗ್ ರೂಂನ ಸಿಸಿಟಿವಿ ಡೇಟಾ ಸಂಗ್ರಹ ಮಾಡಿ ಇಡಬೇಕು. ಪರೀಕ್ಷೆ ಮುಗಿದ ವರ್ಷದ ತನಕ ಡೇಟಾ ಇಟ್ಟಿರಬೇಕು. ಯಾವುದೇ ಆರೋಪ ಕೇಳಿಬರದೆ ಇದ್ದರೆ ಡೇಟಾ ಡಿಲೀಟ್ ಮಾಡಬಹುದು. ಆದರೆ 6 ತಿಂಗಳಲ್ಲಿ ಕೂಡ ಡೇಟಾ ಸಂಗ್ರಹ ಮಾಡಿ ಇಟ್ಟಿಲ್ಲ. ಇದೀಗ ಕೆಪಿಎಸ್‌ಸಿಯಲ್ಲಿ ಮತ್ತೊಂದು ಅಕ್ರಮ ಬಯಲಾಗಿದ್ದು, ಒಎಂಆರ್ ಶೀಟ್‌ಗಳ ಸ್ಕ್ಯಾನ್ ಮಾಡಿರುವ ಹಾರ್ಡ್ ಡಿಸ್ಕ್ ನಾಪತ್ತೆಯಾಗಿದೆ.
ಪರೀಕ್ಷೆ ಮುಗಿದ ಮೇಲೆ ಎಲ್ಲಾ ಒಎಂಆರ್ ಶೀಟ್ ಸ್ಕ್ಯಾನ್ ಮಾಡಲಾಗುತ್ತದೆ. ಆದರೆ ಪಶುವೈದ್ಯಾಧಿಕಾರಿ ನೇಮಕಾತಿಯ ಹಾರ್ಡ್ ಡಿಸ್ಕ್ ನಾಪತ್ತೆಯಾಗಿದೆ. ಇದರಿಂದ ಅತೀದೊಡ್ಡ ಅಕ್ರಮ ಕೇಂದ್ರ ಕಚೇರಿಯಲ್ಲಿಯೇ ನಡೆದಿರೋದು ಸಾಬೀತಾಗಿದೆ. ಪ್ರಶ್ನೆ ಪತ್ರಿಕೆ ಲೀಕ್ ಮತ್ತು ಒಎಂಆರ್ ಟ್ಯಾಂಪರಿಂಗ್ ಆಗಿರೋದು ಸ್ಪಷ್ಟವಾಗಿದೆ.
Laxmi News 24×7