Breaking News

ಕುಮಾರಸ್ವಾಮಿ ಈವರೆಗೂ ಹೇಳಿದ ಯಾವುದೇ ದಾಖಲಾತಿ ಬಿಡುಗಡೆ ಮಾಡಿಲ್ಲ: ಚಲುವರಾಯಸ್ವಾಮಿ

Spread the love

ಬೆಂಗಳೂರು: ನೈಸ್ ಯೋಜನೆ ಕುರಿತು ಸಿಎಂ ವಿರುದ್ಧ ಕುಮಾರಸ್ವಾಮಿ  ಏನು ದಾಖಲಾತಿ ಬಿಡುಗಡೆ ಮಾಡುತ್ತಾರೋ ಮಾಡಲಿ ಎಂದು ಸಚಿವ ಚಲುವರಾಯಸ್ವಾಮಿ ಸವಾಲ್ ಹಾಕಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ದಾಖಲೆ ಬಿಡುಗಡೆ ಮಾಡಲಿ. ಅವರು ಇದುವರೆಗೂ ಬಿಡುಗಡೆ ಮಾಡ್ತೀನಿ ಅಂದರು ಯಾವುದೇ ದಾಖಲಾತಿ ಬಿಡುಗಡೆ ಮಾಡಿಲ್ಲ. ಕಳೆದ 3 ವರ್ಷದಲ್ಲಿ ಯಾವುದಾದರೂ ದಾಖಲೆ ಬಿಡುಗಡೆ ಮಾಡಿದ್ರಾ? ಯಾವುದು ಬಿಡುಗಡೆ ಮಾಡಿಲ್ಲ. ಕುಮಾರಸ್ವಾಮಿ ಅವರನ್ನ ಯಾಕೆ ಬಿಡುಗಡೆ ಮಾಡಲ್ಲ ಕೇಳಿ ಎಂದು ಪ್ರಶ್ನೆ ಮಾಡಿದರು.

ನೈಸ್ ಕಂಪನಿ ವಿಚಾರದಲ್ಲಿ ಕುಮಾರಸ್ವಾಮಿ ಹಿಟ್ ಅಂಡ್ ರನ್ ಕೇಸ್ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗಿ ಕ್ಯಾಬಿನೆಟ್ ಗೆ ಹೋಗ್ತಾರೋ ಇಲ್ಲವೋ ಗೊತ್ತಿಲ್ಲ. ಬೆಂಗಳೂರಿನಲ್ಲಿ ಮಾತ್ರ ಇರುತ್ತಾರೆ. ಅದು ಹೇಗೆ ಉಕ್ಕು ಕೈಗಾರಿಕಾ ಇಲಾಖೆ ನಡೆಸುತ್ತಿದ್ದಾರೆ ಎಂದರು.

ವಿಜಯವಾಡದಲ್ಲಿ ಫ್ಯಾಕ್ಟರಿ ಕೊಡೋದು ಪ್ರಧಾನಮಂತ್ರಿಗಳ ಭರವಸೆ ಆಗಿತ್ತು ಮಾಡಿದ್ರು. ಕುಮಾರಸ್ವಾಮಿ ಕರ್ನಾಟಕಕ್ಕೆ ಏನು ಮಾಡಿದ್ದಾರೆ ಹೇಳಲಿ. ಹೆಚ್‌ಎಂಟಿ ಲಾಭ ಮಾಡುತ್ತಿದೆ. ಎಲ್ಲಿಗೆ ಹೋಯ್ತು ಗಿಫ್ಟ್? ಗಿಫ್ಟ್ ಕೊಟ್ಟಿದ್ದಾರೆ ಗೊತ್ತಾ? ಅವರು ದುಡ್ಡು ಕೊಟ್ಟು ತಗೊಂಡರೆ ಏನು ತಪ್ಪು ಬಿಡಿ. ಅವರ ಅವಧಿ ಎಷ್ಟು ದಿನ ಇದೆ. ಅವರು ಏನು ಮಾಡುತ್ತಾರೆ ನೋಡೋಣ ಎಂದು ಹೆಚ್‌ಡಿಕೆ ವಿರುದ್ಧ ಕಿಡಿಕಾರಿದರು.

ಇನ್ನು ನಾಗೇಂದ್ರ ವಿರುದ್ಧ ಬಿಜೆಪಿ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರು ಪಾದಯಾತ್ರೆ ಮಾಡಿ ವಾಕ್ ಮಾಡಿಕೊಂಡು ಬರಲಿ. ಬಿಜೆಪಿ ಪಾದಯಾತ್ರೆ ಮಾಡಲಿ ಅವರಿಗೆ ಯಾವುದೇ ವಿಷಯ ಇಲ್ಲ. ಸದನದಲ್ಲಿ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ವಿಷಯ ಇಲ್ಲ. ಹೀಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ, ಮಾಡಲಿ. ವಾಕ್ ಮಾಡಿಕೊಂಡು ಬರಲಿ ಎಂದರು.

ಅಶೋಕ್‌ಗೆ ವಾಕ್ ಮಾಡಬೇಕು ಅಂತ ಇದೆ ಅನ್ನಿಸುತ್ತೆ ಮಾಡಲಿ. ಪ್ರತಿಭಟನೆ ಮಾಡೋದು ಬೇಡ ಅನ್ನಲು ಆಗಲ್ಲ. ನಾಗೇಂದ್ರಗೆ ರಾಜ್ಯಪಾಲರು ಪ್ರಮಾಣವಚನ ಬೋಧನೆ ಮಾಡಿದ್ದಾರೆ. ರಾಜ್ಯಪಾಲರನ್ನ ಬಿಜೆಪಿ ಅವರು ಕೇಳಲಿ ಅಂತ ಬಿಜೆಪಿಗೆ ಪ್ರಶ್ನೆ ಮಾಡಿದರು. ಸಿಬಿಐಗೆ ಪ್ರಾಸಿಕ್ಯೂಷನ್‌ಗೆ ಕೊಡುವ ಬಗ್ಗೆ ರಾಜ್ಯಪಾಲರು ಸರ್ಕಾರವನ್ನ ಕೇಳಲಿ. ಕ್ಯಾಬಿನೆಟ್‌ಗೆ ವಿಷಯ ಬರಲಿ ಮಾತಾಡೋಣ. ರಾಜ್ಯಪಾಲರು ಯರ‍್ಯಾರ ಕೇಸ್ ಪೆಂಡಿಂಗ್ ಇಟ್ಟುಕೊಂಡಿದ್ದಾರೆ ಚರ್ಚೆ ಮಾಡೋಣ. ಅನೇಕ ಜನರದ್ದು ಕೇಸ್ ಬಾಕಿ ಇದೆ. ಅದನ್ನು ಸಿಬಿಐಗೆ ರಾಜ್ಯಪಾಲರು ಕಳಿಸಲಿ ಎಂದು ಒತ್ತಾಯಿಸಿದರು.


Spread the love

About Laxminews 24x7

Check Also

ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ- UP ವಿದ್ಯಾರ್ಥಿನಿಯ ಅರ್ಜಿ ವಜಾ

Spread the loveಲಕ್ನೋ: ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ