Breaking News

ನನ್ನದು ಲವ್ ಅಲ್ಲ, ಅರೇಂಜ್ ಮ್ಯಾರೇಜ್; ಪಾವನಾ ಸಿಕ್ಕಿದ್ದು ನನ್ನ ಲಕ್‌ ಎಂದ ಚಿಕ್ಕಣ್ಣ

Spread the love

ಹಾಸ್ಯನಟ ಚಿಕ್ಕಣ್ಣ ಅವರ ಮದುವೆ ವಿಚಾರ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ. ಈ ನಡುವೆ ತಮ್ಮ ಮದುವೆ ಹಾಗೂ ಪಾವನಾ ಅವರ ಬಗ್ಗೆ ಚಿಕ್ಕಣ್ಣ ಮಾತನಾಡಿದ್ದಾರೆ. ನನ್ನದು ಲವ್ ಅಲ್ಲ, ಅರೇಂಜ್ ಮ್ಯಾರೇಜ್. ಆದರೆ, ಮನೆಯವರು ಹುಡುಕಲು ಶುರು ಮಾಡಿದ ಬಳಿಕ ಲವ್ ಆಯ್ತು. ಹೀಗಾಗಿ ನಮ್ಮದು ಅರೇಂಜ್ ಕಮ್ ಲವ್ ಮ್ಯಾರೇಜ್ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿಕ್ಕಣ್ಣ, ತಮ್ಮನ್ನು ಹಾಸ್ಯನಟನಾಗಿ ಬೆಳೆಸಿ, ಹೀರೋ ಆಗಿ ನೋಡುತ್ತಿರುವ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಎಲ್ಲರೂ ನನ್ನ ಮದುವೆಗೆ ಬನ್ನಿ. ಬರಲು ಸಾಧ್ಯವಾಗದವರು ಮನೆಯಿಂದಲೇ ಹರಸಿ ಎಂದು ಅಭಿಮಾನಿಗಳಲ್ಲಿ ಮಾಡಿದ್ದಾರೆ.

ತಮ್ಮ ಮದುವೆ ದಿನಾಂಕವನ್ನೂ ಘೋಷಿಸಿರುವ ಚಿಕ್ಕಣ್ಣ, ಇದೇ ತಿಂಗಳ 29 ಮತ್ತು 30ರಂದು ಮದುವೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪಾವನಾ ಅವರ ಬಗ್ಗೆ ಮಾತನಾಡಿದ ಅವರು, ಪಾವನಾ ಬ್ಯುಸಿನೆಸ್ ಮಾಡುತ್ತಿದ್ದಾರೆ. ಅವರು ಸಿನಿಮಾ ಪ್ರೇಮಿಯಾಗಿದ್ದು, ನನ್ನ ವೃತ್ತಿಯನ್ನು ಅರ್ಥಮಾಡಿಕೊಳ್ಳುವ ಹುಡುಗಿ. ಜೊತೆಗೆ ಪರಿಸರ ಪ್ರೇಮಿಯೂ ಹೌದು. ಪಾವನಾ ಸಿಗೋಕೆ ನಾನು ಲಕ್ಕಿ ಎಂದು ಚಿಕ್ಕಣ್ಣ ಹೇಳಿದ್ದಾರೆ.

ದರ್ಶನ್ ಪ್ರಕರಣದಲ್ಲಿ ಸಾಕ್ಷಿಯಾಗಿರುವ ಕಾರಣ ಅವರನ್ನು ಮದುವೆಗೆ ಕರೆಯಲು ಸಾಧ್ಯವಾಗುತ್ತಿಲ್ಲ ಎಂದು ಚಿಕ್ಕಣ್ಣ ತಿಳಿಸಿದ್ದಾರೆ. ಇದೇ ವೇಳೆ ಪಾವನಾ ಜೊತೆ ‘ಡೆವಿಲ್’ ಸಿನಿಮಾ ನೋಡಿದ್ದೇವೆ ಎಂದು ಹೇಳಿದ್ದಾರೆ.

ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಮಾತನಾಡಿದ ಚಿಕ್ಕಣ್ಣ, ಮದುವೆಯಾದ ಬಳಿಕ ಪಾವನಾ ಜೊತೆ ಸಿನಿಮಾ ನೋಡಲು ಹೋಗುತ್ತೇನೆ ಎಂದು ಹೇಳಿದ್ದಾರೆ


Spread the love

About Laxminews 24x7

Check Also

ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ- UP ವಿದ್ಯಾರ್ಥಿನಿಯ ಅರ್ಜಿ ವಜಾ

Spread the loveಲಕ್ನೋ: ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ