Breaking News

ಚಿಕ್ಕೋಡಿ:ಅದ್ಭುತ ಸ್ಮರಣಶಕ್ತಿಯ ಸಾಧಕಿ ವಚನಾ ವೀರೇಶ ಪಾಟೀಲಗೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಗೌರವ

Spread the love

ಚಿಕ್ಕೋಡಿ:ಮೂಲತಃ ಹಾವೇರಿ ಜಿಲ್ಲೆಯವರಾದ, ಸದ್ಯ ಚಿಕ್ಕೋಡಿ ತಾಲೂಕಿನ ನೇಜ ಗ್ರಾಮದ ವಾಸಿಗಳಾದ ಸಂಸ್ಕೃತಿ ಚಿಂತಕರಾದ ವೀರೇಶ ಗ. ಪಾಟೀಲ ಅವರ ಸುಪುತ್ರಿ ವಚನಾ ವೀರೇಶ ಪಾಟೀಲ(ವಯಸ್ಸು:2 ವರ್ಷ 1 ತಿಂಗಳು)ತಮ್ಮ ಅಗಾಧವಾದ ನೆನಪಿನ ಶಕ್ತಿಯ ಮೂಲಕ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಅಚೀವರ್ ಆಗಿ ಹೊರಹೊಮ್ಮಿದ್ದಾರೆ. ತಮ್ಮ ಅಪಾರ ಸ್ಮರಣ ಶಕ್ತಿಯಿಂದ ಎಲ್ಲರ ಗಮನ ಸೆಳೆದಿರುವ ವಚನಾ, ಹಲವು ವೈವಿಧ್ಯಮಯ ವಿಷಯಗಳನ್ನು ಸರಾಗವಾಗಿ ನೆನಪಿನಲ್ಲಿಟ್ಟುಕೊಳ್ಳುವ ಅಪರೂಪದ ಪ್ರತಿಭೆಯನ್ನು ಹೊಂದಿದ್ದಾರೆ
ವಚನಾ ಅವರ ಪ್ರಮುಖ ಸಾಧನೆಗಳು ಹಾಗೂ ಸಾಮರ್ಥ್ಯ:
ರಾಷ್ಟ್ರೀಯ ನಾಯಕರ ಗುರುತಿಸುವಿಕೆ: ಸುಮಾರು 21ಕ್ಕೂ ಹೆಚ್ಚು ರಾಷ್ಟ್ರೀಯ ನಾಯಕರು 14 ಕ್ಕೂ ಅಧಿಕ ಸಮಾಜ ಸುಧಾರಕರು , 26ಕ್ಕೂ ಹೆಚ್ಚು ಸಂತ ಮಹಾತ್ಮರು ಹಾಗೂ ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ನಿಖರವಾಗಿ ಗುರುತಿಸುತ್ತಾರೆ.
ಸಾಮಾನ್ಯ ಜ್ಞಾನ ಮತ್ತು ಜಾಗತಿಕ ಅರಿವು: 15ಕ್ಕಿಂತ ಅಧಿಕ ಪ್ರಶ್ನೆಗಳಿಗೆ ಉತ್ತರಿಸುವುದಲ್ಲದೆ,ಪ್ರಾಣಿ, ಪಕ್ಷಿ, ಹೂವು, ಹಣ್ಣು ಹಾಗೂ ತರಕಾರಿಗಳ ಚಿತ್ರಗಳನ್ನು ಕ್ಷಣಾರ್ಧದಲ್ಲಿ ಗುರುತಿಸುತ್ತಾಳೆ ; ಭಾರತದ ರಾಜ್ಯಗಳು, ಕರ್ನಾಟಕದ ಜಿಲ್ಲೆಗಳು, ದಿಕ್ಕುಗಳು ಮತ್ತು ಖಂಡಗಳ ಹೆಸರುಗಳನ್ನು ಅತ್ಯಂತ ಸರಾಗವಾಗಿ ಹೇಳುತ್ತಾರೆ.
* ಭಾಷಾ ಜ್ಞಾನ ಹಾಗೂ ಶಬ್ದಕೋಶ: 60ಕ್ಕೂ ಹೆಚ್ಚು ಇಂಗ್ಲಿಷ್ ಪದಗಳಿಗೆ ಸರಿಯಾದ ಕನ್ನಡ ಅರ್ಥಗಳನ್ನು ತಿಳಿಸುವ ವಚನಾ, ಮಾನವ ದೇಹದ ಭಾಗಗಳ ಹೆಸರುಗಳನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ವಿವರಿಸುತ್ತಾರೆ.
* ಆಲ್ಫಾಬೆಟಿಕ್ ಶರಣ ರತ್ನಮಾಲೆ: ಇಂಗ್ಲಿಷ್ ಅಕ್ಷರಮಾಲೆಯ ಪ್ರತಿಯೊಂದು ಅಕ್ಷರಕ್ಕೂ ಒಬ್ಬೊಬ್ಬ ಶರಣರ ಹೆಸರನ್ನು ಜೋಡಿಸಿ ಹೇಳುವ ವಿಶಿಷ್ಟ ಜ್ಞಾನ ಇವರದ್ದಾಗಿದೆ. 10 ಕ್ಕೂ ಹೆಚ್ಚು ಸಂಸ್ಕೃತ ಶ್ಲೋಕಗಳನ್ನು ಪಠಿಸುವ ವಚನಾ , 100ಕ್ಕಿಂತ ಅಧಿಕ ವಿವಿಧ ಚಿತ್ರಗಳನ್ನು ಗುರುತಿಸುತ್ತಾರೆ.
* ದಿನಗಳು ಮತ್ತು ಅಕ್ಷರಗಳ ಸ್ಪಷ್ಟತೆ: ವಾರಗಳು, ದಿನಗಳು, ತಿಂಗಳುಗಳು, ಮಾಸಗಳು ಸೇರಿದಂತೆ ಕನ್ನಡದ ಸ್ವರ-ವ್ಯಂಜನಗಳು ಹಾಗೂ ಇಂಗ್ಲಿಷ್ ಅಕ್ಷರಗಳನ್ನು ಅತ್ಯಂತ ಸ್ಪಷ್ಟವಾಗಿ ನೆನಪಿನಲ್ಲಿಟ್ಟುಕೊಂಡು ವ್ಯಕ್ತಪಡಿಸುತ್ತಾರೆ.
ಅದ್ಭುತ ಗ್ರಹಣ ಶಕ್ತಿ ಹಾಗೂ ತೀಕ್ಷ್ಣವಾದ ಸ್ಮರಣಶಕ್ತಿಯನ್ನು ಹೊಂದಿರುವ ವಚನಾ ವೀರೇಶ ಪಾಟೀಲ ಅವರ ಈ ಸಾಧನೆ ನಾಡಿಗೆ ಹಾಗೂ ಅವರ ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ.

Spread the love

About Laxminews 24x7

Check Also

ಭೀಮಾ ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕ ನಾಪತ್ತೆ

Spread the loveಯಾದಗಿರಿ: ಭೀಮಾ ನದಿಯಲ್ಲಿ  ಸ್ನಾನ ಮಾಡಲು ಹೋದ ಯುವಕ ನಾಪತ್ತೆಯಾಗಿರುವ ಘಟನೆ ಯಾದಗಿರಿ ತಾಲೂಕಿನ ಮಲ್ಹಾರ  ಗ್ರಾಮದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ