Breaking News

ಹೊಸ ಸಿಮ್ ಪಡೆಯಲು ಇನ್ಮುಂದೆ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯ

Spread the love

ನವದೆಹಲಿ: ಹೊಸ ಸಿಮ್ ಕಾರ್ಡ್  ಪಡೆಯಲು ಇನ್ಮುಂದೆ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ  ಆದೇಶಿಸಿದೆ.

ಕೇಂದ್ರದ ಆದೇಶದ ಹಿನ್ನೆಲೆ ಹೊಸ ಸಿಮ್ ಕಾರ್ಡ್‌ ಪಡೆಯುವ ಮುನ್ನ ಗ್ರಾಹಕರು ಬಯೋಮೆಟ್ರಿಕ್ ಪರಿಶೀಲಿಸಬೇಕು. ಗ್ರಾಹಕರ ಮಾಹಿತಿ ಅಪ್‌ಡೇಟ್ ಹಾಗೂ ಮರುಪರಿಶೀಲನೆ ಸಂದರ್ಭದಲ್ಲೂ ಬಯೋಮೆಟ್ರಿಕ್ ವೆರಿಫಿಕೇಶನ್ ಅಗತ್ಯ ಅಂತ ಸೂಚಿಸಿದೆ.

ಸಿಮ್ ಕಾರ್ಡ್‌ ಸ್ಥಗಿತಗೊಳಿಸುವ ಪ್ರಕ್ರಿಯೆಯಲ್ಲೂ ಗುರುತು ಪರಿಶೀಲನೆ ನಿಯಮ ಅನ್ವಯವಾಗಲಿದೆ. ಸೈಬರ್ ವಂಚನೆ ಹಾಗೂ ನಕಲಿ ಸಿಮ್ ಕಾರ್ಡ್ ಕನೆಕ್ಷನ್‌ಗಳಿಗೆ ಕಡಿವಾಣ ಹಾಕಲು ಕೇಂದ್ರ ಈ ಕ್ರಮ ಕೈಗೊಂಡಿದೆ. ಈ ಹೊಸ ನಿಯಮಗಳನ್ನು ಸಿಮ್ ಕಾರ್ಡ್ ಮತ್ತು ಟೆಲಿಕಾಂ ಸೇವೆ ಒದಗಿಸುವ ಕಂಪನಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಅಂತ ಆದೇಶಿಸಿದೆ.


Spread the love

About Laxminews 24x7

Check Also

ಹೇಳದೇ ಕೇಳದೇ ಸರ್ಕಾರಿ ಶಾಲೆ ಪ್ರವೇಶ, ಶಿಕ್ಷಕರಿಗೆ ಬೆದರಿಕೆ – ʻಕಾಕ್ರೋಚ್‌ʼ ದೀಪ್ಕೆ ವಿರುದ್ಧ ಎಫ್‌ಐಆರ್

Spread the loveಮುಂಬೈ: ಮಹಾರಾಷ್ಟ್ರದ ಲಾತೂರ್  ಜಿಲ್ಲೆಯ ಪೊಲೀಸರು ಕಾಕ್ರೋಚ್‌ ಜನತಾ ಪಾರ್ಟಿ  ಮುಖ್ಯಸ್ಥ ಅಭಿಜೀತ್ ದೀಪ್ಕೆ ಹಾಗೂ ಇತರರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ