Breaking News

ಯುವ ಮತದಾರರತ್ತ ಬಿಜೆಪಿ ಚಿತ್ತ – ‘Gen Z’ ಸಂಪರ್ಕಕ್ಕೆ ವಿಶೇಷ ತಂಡ

Spread the love

ನವದೆಹಲಿ: ಯುವಜನತೆ ಅದರಲ್ಲೂ Gen Z ಮತದಾರರೊಂದಿಗೆ ನೇರ ಸಂಪರ್ಕ ಸಾಧಿಸುವ ಉದ್ದೇಶದಿಂದ ಬಿಜೆಪಿ  ವಿಶೇಷ ತಂಡವೊಂದನ್ನು ರಚಿಸಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ನೇತೃತ್ವದಲ್ಲಿ ರೂಪಿಸಿರುವ ತಂಡದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸ್ಮೃತಿ ಇರಾನಿ  ಮತ್ತು ವಿನೋದ್ ತಾವಡೆ ಸೇರಿದಂತೆ ಹಲವು ಪ್ರಮುಖ ನಾಯಕರು ಸ್ಥಾನ ಪಡೆದಿದ್ದಾರೆ. ಗುಜರಾತ್ ಸಚಿವ ಹರ್ಷ್ ಸಾಂಘ್ವಿ ಹಾಗೂ ಛತ್ತೀಸ್‌ಗಢ ಸಚಿವ ಒ.ಪಿ. ಚೌಧರಿ ಕೂಡ ತಂಡದ ಭಾಗವಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ದೇಶದಾದ್ಯಂತ ಯುವಜನರೊಂದಿಗೆ ನೇರ ಹಾಗೂ ನಿರಂತರ ಸಂವಾದ ನಡೆಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. Gen Z ಯುವಕರ ಆಕಾಂಕ್ಷೆಗಳು, ಸಮಸ್ಯೆಗಳು ಮತ್ತು ನಿರೀಕ್ಷೆಗಳನ್ನು ನೇರವಾಗಿ ತಿಳಿದುಕೊಳ್ಳುವುದು ಕಾರ್ಯಕ್ರಮದ ಪ್ರಮುಖ ಗುರಿಯಾಗಿದೆ. ಯುವಜನರು ಬಿಜೆಪಿ ನಾಯಕರೊಂದಿಗೆ ನೇರವಾಗಿ ಸಂವಾದ ನಡೆಸಿ, ತಮ್ಮ ಅಭಿಪ್ರಾಯ ಹಾಗೂ ಪ್ರಶ್ನೆಗಳನ್ನು ಮಂಡಿಸಲು ವೇದಿಕೆ ಕಲ್ಪಿಸುವ ಉದ್ದೇಶವನ್ನೂ ಪಕ್ಷ ಹೊಂದಿದೆ.

ಸಂವಾದ, ಚರ್ಚೆ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳ ಮೂಲಕ ಯುವ ಮತದಾರರನ್ನು ತಲುಪಲು ಬಿಜೆಪಿ ಮುಂದಾಗಿದೆ. ಹೊಸ ತಲೆಮಾರಿನೊಂದಿಗೆ ಪಕ್ಷದ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಯುವಜನರ ರಾಜಕೀಯ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಈ ಅಭಿಯಾನದ ಉದ್ದೇಶವಾಗಿದೆ.

Gen Z ಸಂಪರ್ಕ ಅಭಿಯಾನದ ನಿಖರ ವೇಳಾಪಟ್ಟಿ, ಕಾರ್ಯಕ್ರಮಗಳ ಸ್ವರೂಪ ಹಾಗೂ ಸ್ಥಳಗಳ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ. ಈ ಬೆಳವಣಿಗೆ, ಮುಂಬರುವ ಚುನಾವಣಾ ಸವಾಲುಗಳ ಹಿನ್ನೆಲೆಯಲ್ಲಿ ಯುವ ಮತದಾರರತ್ತ ಬಿಜೆಪಿ ಹೆಚ್ಚಿನ ಗಮನ ಹರಿಸುತ್ತಿರುವುದರ ಸೂಚನೆಯಾಗಿದೆ.

ಇದೇ ವೇಳೆ, ನಿತಿನ್ ನಬೀನ್ ಅವರು ಶನಿವಾರ (ಆ.22) ಬಿಜೆಪಿಯ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಸಂಘಟನೆಯನ್ನು ಮತ್ತಷ್ಟು ಚುರುಕುಗೊಳಿಸುವುದು ಮತ್ತು ಚುನಾವಣಾ ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ.


Spread the love

About Laxminews 24x7

Check Also

ಯುವತಿ ಮೇಲೆ ಅತ್ಯಾಚಾರ ಎಸಗಿ ಕೊಲೆ – ಪ್ರಮುಖ ಆರೋಪಿ ನ್ಯಾಯಾಂಗ ಬಂಧನಕ್ಕೆ, ನಾಲ್ವರು ಪೇದೆ ಅಮಾನತು

Spread the loveರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ ನಡೆದಿದ್ದ ಯುವತಿ ಅತ್ಯಾಚಾರ & ಕೊಲೆ ಪ್ರಕರಣದ ಪ್ರಮುಖ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ