Breaking News

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ – ಸಾವಿನ ಸುತ್ತ ಅನುಮಾನದ ಹುತ್ತ

Spread the love

ಹಾಸನ: ಚನ್ನರಾಯಪಟ್ಟಣದ ಅಂಬಿಕ ನಗರದಲ್ಲಿ ಯುವತಿಯೊಬ್ಬಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದೆ.

ನಗರದ ಸಾಕಮ್ಮ-ಮಂಜಶೆಟ್ಟಿ ದಂಪತಿ ಪುತ್ರಿ ರಚಿತಾ (19) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವತಿ. ಈಕೆ ಮೊದಲ ವರ್ಷದ ಬಿಎ ಓದುತ್ತಿದ್ದಳು. ಆ.21 ರ ರಾತ್ರಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಪೋಷಕರು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಯುವತಿ ಸುಮಾರು ಒಂದು ವರೆ ವರ್ಷದಿಂದ ನವೀನ್‌ ಎಂಬಾತನನ್ನು (Love) ಪ್ರೀತಿಸುತ್ತಿದ್ದಳು. ನವೀನ್‌ ಪಟ್ಟಣದ ರೇಣುಕಾಂಬ ರಸ್ತೆಯಲ್ಲಿರುವ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಇದೇ ಬೇಕರಿಯಲ್ಲಿ ರಚಿತಾ ತಾಯಿ ಸಾಕಮ್ಮ ಕೆಲಸ ಮಾಡುತ್ತಿದ್ದರು. ಇಬ್ಬರು ಪ್ರೀತಿಸುವ ವಿಷಯವನ್ನು ಸಾಕಮ್ಮ ಬಳಿ ರಚಿತಾ ಹಾಗೂ ನವೀನ್ ಹೇಳಿದ್ದರು. ಮದುವೆ ಮಾಡಿಸುವುದಾಗಿ ರಚಿತಾ ತಾಯಿ ಭರವಸೆಕೊಟ್ಟಿದ್ದರು. ಆದರೆ ಇತ್ತೀಚಿಗೆ ರಚಿತಾಳಿಗೆ ನವೀನ್ ಕಿರುಕುಳ ನೀಡುತ್ತಿದ್ದ ಎಂದು ಸಾಕಮ್ಮ ಆರೋಪಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ತೊಂದರೆ ಆದ್ರೆ ಮಾತ್ರ ಕಾಯ್ದೆ ತೋರಿಸುತ್ತೀರಿ, ಅವಘಡ ಆಗಿದ್ರೆ ಯಾರು ಹೊಣೆ? – ದೇವಿಗೆರೆಯಲ್ಲಿ ಗಣೇಶ ವಿಸರ್ಜನೆಗೆ ಡಿಸಿ ಅಸಮಾಧಾನ

Spread the loveಹಾಸನ: ದೇವಿಗೆರೆಯಲ್ಲಿ ಗಣೇಶ ವಿಸರ್ಜನೆ  ವೇಳೆ ಯಾವುದಾದರೂ ಅವಘಡ ಸಂಭವಿಸಿದ್ದರೆ ಜಿಲ್ಲಾಡಳಿತ ಸಮಸ್ಯೆಗೆ ಸಿಲುಕುತ್ತಿತ್ತು. ಅದರ ಹೊಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ