Breaking News

ವ್ಯಾಪಾರ ಒಪ್ಪಂದ ಮಾತುಕತೆ ವಿಫಲ; ಕೆನಡಾ ಉತ್ಪನ್ನಗಳ ಮೇಲೆ ಯುಎಸ್ 50% ಸುಂಕ

Spread the love

ವಾಷಿಂಗ್ಟನ್: ವ್ಯಾಪರ ಒಪ್ಪಂದ ಮಾತುಕತೆ ವಿಫಲವಾದ ಬೆನ್ನಲ್ಲೇ 20 ಬಿಲಿಯನ್‌ ಡಾಲರ್‌ ಮೌಲ್ಯದ ಕೆನಡಾದ  ಉತ್ಪನ್ನಗಳ ಮೇಲೆ ಅಮೆರಿಕ 50% ಸುಂಕವನ್ನು ವಿಧಿಸಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಅವರ ಆಮದು ತೆರಿಗೆಗಳು, ಕೆನಡಾ ಪ್ರತಿ ವರ್ಷ ಅಮೆರಿಕಕ್ಕೆ  ಸಾಗಿಸುವ ವಸ್ತುಗಳ ಸುಮಾರು 5% ರಷ್ಟು ಪರಿಣಾಮ ಬೀರುತ್ತವೆ.

ಅಮೆರಿಕದ ಹೊಸ ಸುಂಕಗಳು ಶನಿವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿವೆ. ವ್ಯಾಪಾರ ಮಾತುಕತೆ ವಿಫಲವಾಗುತ್ತಿದ್ದಂತೆ ಕೆನಡಾ ಪ್ರಧಾನಿ ಮಾರ್ಕೊ ಕಾರ್ನಿ, ಅಮೆರಿಕದ ಸುಂಕಕ್ಕೆ ನಾವು ಕೂಡ ಪ್ರತಿಸುಂಕ ವಿಧಿಸುತ್ತೇವೆಂದು ಎಚ್ಚರಿಸಿದ್ದಾರೆ.

ಯುಎಸ್ ಪ್ರಸ್ತಾಪಿಸಿದ ನಿಯಮಗಳು ಅನ್ಯಾಯ, ಆರ್ಥಿಕವಲ್ಲದವು ಮತ್ತು ಯಾವುದೇ ಒಪ್ಪಂದದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತವೆ ಎಂದು ಒಪ್ಪಂದ ನಿರಾಕರಿಸಿದ ಬಗ್ಗೆ ಕಾರ್ನಿ ಮಾತನಾಡಿದ್ದಾರೆ.


Spread the love

About Laxminews 24x7

Check Also

ಯುವ ಮತದಾರರತ್ತ ಬಿಜೆಪಿ ಚಿತ್ತ – ‘Gen Z’ ಸಂಪರ್ಕಕ್ಕೆ ವಿಶೇಷ ತಂಡ

Spread the love ನವದೆಹಲಿ: ಯುವಜನತೆ ಅದರಲ್ಲೂ Gen Z ಮತದಾರರೊಂದಿಗೆ ನೇರ ಸಂಪರ್ಕ ಸಾಧಿಸುವ ಉದ್ದೇಶದಿಂದ ಬಿಜೆಪಿ  ವಿಶೇಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ