ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ʻಬಿಗ್‌ಬಾಸ್ ಕನ್ನಡ ಸೀಸನ್ 13ಕ್ಕೆ ಎಂಟ್ರಿ ಕೊಡಲು ಸ್ಪರ್ಧಿಗಳು ಸಿದ್ಧರಾಗಿದ್ದಾರೆ. ಇದೀಗ ಮನೆಗೆ ಎಂಟ್ರಿ ಕೊಡಲು ಗ್ಯಾಂಡ್ ಓಪನಿಂಗ್‌ಗೆ ಮುಹೂರ್ತ ಫಿಕ್ಸ್ ಆಗಿದೆ.
ಈ ಬಾರಿ ವಿಭಿನ್ನ ರೀತಿಯಲ್ಲಿ ವಾಹಿನಿ ಬಿಗ್ ಬಾಸ್ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್ ಪ್ರೋಮೋವನ್ನು ಹಂಚಿಕೊಂಡಿದೆ. ಆ.16ರಿಂದ ಬಿಗ್ ಮನೆಗೆ ಎಂಟ್ರಿ ಕೊಡಲು ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಗಾಗಿ ಅಗ್ನಿಪರೀಕ್ಷೆ ನಡೆಯುತ್ತಿದೆ. ಇದೀಗ ಆಯ್ಕೆಯಾದ ಸ್ಪರ್ಧಿಗಳನ್ನು ದೊಡ್ಮನೆಗೆ ಕಳುಹಿಸಲು ವೇದಿಕೆ ಸಜ್ಜಾಗಿದ್ದು, ಸೆ.6ರಂದು ಸಂಜೆ 7 ಗಂಟೆಗೆ Grand Opening ನಡೆಯಲಿದೆ.
ಈ ಬಾರಿ ಕಿಚ್ಚ ಸುದೀಪ್ ವಿಮಾನ ಹತ್ತುವ ಮೂಲಕ ಗ್ರ್ಯಾಂಡ್ ಓಪನಿಂಗ್ ಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ. ಪೈಲಟ್ ಆದ ಸುದೀಪ್, ಬಿಗ್ ಬಾಸ್ 13ರ ವಿಮಾನವನ್ನು ಆಗಸಕ್ಕೆ ಕೊಂಡೊಯ್ಯಲಿದ್ದಾರೆ. ಪ್ರತಿಯೊಬ್ಬರಿಗೂ ಹಾರುವ ಕನಸಿರುತ್ತೆ ಆದ್ರೆ ರೆಕ್ಕೆ ಕಟ್ಟೋ ಅವಕಾಶ ಕೆಲವರಿಗೆ ಮಾತ್ರ ಸಿಗುತ್ತೆ. ಒಂದು ಸಾರಿ ಫ್ಲೈಟ್ ಮೋಡ್ ಆನ್ ಆದ್ರೆ ಹೊರಗಡೆ ನೆಟ್‌ವರ್ಕ್ ಕಟ್ ಆಗುತ್ತದೆ. ನಿಮ್ಮ ನಿಜವಾದ ಬಣ್ಣ ಬಯಲಾಗುತ್ತದೆ.
ಜರ್ನಿ ನಿಮ್ಮದಾದರೂ ಯಾವುದೂ ನಿಮ್ಮ ಕಂಟ್ರೋಲ್‌ನಲ್ಲಿರಲ್ಲ. ಆದರೆ ಈ ಜರ್ನಿಯನ್ನ ನೋಡೋ ಮಜಾನೇ ಬೇರೆ ಎಂದಿದ್ದಾರೆ. ಹೊಸ ಪ್ರೋಮೋ ಇದೀಗ ವೀಕ್ಷಕರಲ್ಲಿ ಮತ್ತಷ್ಟು ಸಂಭ್ರಮವನ್ನು ಹೆಚ್ಚಿಸಿದೆ. ಇನ್ನೂ ಈ ಸೀಸನ್‌ಗೆ ಯಾರೆಲ್ಲ ಎಂಟ್ರಿ ಕೊಡಲಿದ್ದಾರೆ ಎನ್ನುವ ಬಗ್ಗೆ ಗ್ರ್ಯಾಂಡ್ ಓಪನಿಂಗ್ ವೇದಿಕೆಯಲ್ಲಿ ಹೊರಬೀಳಲಿದೆ.
ಇತ್ತೀಚಿಗಷ್ಟೇ ಕಿಚ್ಚ ಸುದೀಪ್ (Kiccha Sudeep) ಅವರ ಪ್ರೋಮೋ ಬಿಡುಗಡೆಯಾಗಿದ್ದು, ಈ ಮೂಲಕ ಹೊಸ ಸೀಸನ್‌ಗೆ ಅಧಿಕೃತವಾಗಿ ಕೌಂಟ್‌ಡೌನ್ ಶುರುವಾಗಿತ್ತು. The Bigg Wait is Over!” ಕ್ಯಾಪ್ಷನ್ ಬರೆದಿರುವ ಪ್ರೋಮೋದಲ್ಲಿ ಬ್ಲ್ಯಾಕ್ ಸೂಟ್‌ನಲ್ಲಿ ಸ್ಟೈಲಿಷ್ ಆಗಿ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್, ʻಕರ್ನಾಟಕದ ಜನ ಯಾರಿಗೂ ಕಾಯೋದಿಲ್ಲ… ಆದರೆ ವರ್ಷಕ್ಕೆ ಒಂದು ಸಲ ಕಾಯ್ತಾರೆ. ಒಂದೇ ಮನೆ, ಒಂದು ಅವಕಾಶ, ಕೋಟಿ ಕನಸುಗಳು… ಮತ್ತೆ ಶುರು ಮಾಡೋಣ್ವಾ?ʼ ಎನ್ನುವ ಡೈಲಾಗ್ ಎಲ್ಲರ ಗಮನ ಸೆಳೆದಿತ್ತು.
Laxmi News 24×7