Breaking News

ಚಿನ್ನದ ದರ 1,771 ರೂ., ಬೆಳ್ಳಿ ದರ 3,128 ರೂ. ಏರಿಕೆ

Spread the love

ನವದೆಹಲಿ: ಅಮೆರಿಕ ಡಾಲರ್‌ ದುರ್ಬಲತೆ, ಅಮೆರಿಕದ ಬಡ್ಡಿದರಗಳಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಸುರಕ್ಷಿತ ಹೂಡಿಕೆ ಹುಡುಕಾಟ ಹೀಗೆ ಅನೇಕ ಕಾರಣಗಳಿಂದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಎಂಸಿಎಕ್ಸ್‌ನಲ್ಲಿ ಫ್ಯೂಚರ್‌ ಚಿನ್ನ, ಬೆಳ್ಳಿ ದರ ಏರಿಕೆಯಾಗಿದೆ.

ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ ನಲ್ಲಿ ಶುಕ್ರವಾರ (ಇಂದು) ಮಧ್ಯಾಹ್ನ 3:10ರ ವೇಳೆಗೆ ಚಿನ್ನದ ಫ್ಯೂಚರ್ಸ್ ಬೆಲೆ 10 ಗ್ರಾಂಗೆ ಸುಮಾರು 1,61,196 ರೂ.ನಷ್ಟಕ್ಕೆ ತಲುಪಿತ್ತು. ಹಿಂದಿನ ಮುಕ್ತಾಯದ ಬೆಲೆಗೆ ಹೋಲಿಸಿದರೆ 1,771 ರೂ. ಅಥವಾ 1.11% ಏರಿಕೆ ಕಂಡುಬಂದಿದೆ.

ಇದೇ ವೇಳೆ ಬೆಳ್ಳಿ  ಫ್ಯೂಚರ್ಸ್ ಕೂಡ ಏರಿಕೆ ಕಂಡಿದ್ದು, ಕೆಜಿಗೆ ಸುಮಾರು 2,46,371 ರೂ.ಕ್ಕೆ ವಹಿವಾಟು ನಡೆದಿದೆ. ಹಿಂದಿನ ಬೆಲೆಗೆ ಹೋಲಿಸಿದ್ರೆ 3,128 ರೂ. ಅಥವಾ 1.29% ಏರಿಕೆ ದಾಖಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಏರಿಕೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಳೆದ 3 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಈ ಮೂಲಕ ಸತತ 3ನೇ ವಾರವೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

ಇದಕ್ಕೂ ಮೊದಲು, ಇದೇ ವರ್ಷದ ಜನವರಿಯಲ್ಲಿ ಭಾರತದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು 1.80 ರೂ. ದಾಖಲೆ ಮಟ್ಟಕ್ಕೆ ತಲುಪಿತ್ತು. ಬೆಳ್ಳಿ ಬೆಲೆಯೂ ಪ್ರತಿ ಕೆ.ಜಿಗೆ ಸುಮಾರು 4.25 ಲಕ್ಷ ರೂ. ಗರಿಷ್ಠ ಮಟ್ಟ ಕಂಡಿತ್ತು.


Spread the love

About Laxminews 24x7

Check Also

ತೊಂದರೆ ಆದ್ರೆ ಮಾತ್ರ ಕಾಯ್ದೆ ತೋರಿಸುತ್ತೀರಿ, ಅವಘಡ ಆಗಿದ್ರೆ ಯಾರು ಹೊಣೆ? – ದೇವಿಗೆರೆಯಲ್ಲಿ ಗಣೇಶ ವಿಸರ್ಜನೆಗೆ ಡಿಸಿ ಅಸಮಾಧಾನ

Spread the loveಹಾಸನ: ದೇವಿಗೆರೆಯಲ್ಲಿ ಗಣೇಶ ವಿಸರ್ಜನೆ  ವೇಳೆ ಯಾವುದಾದರೂ ಅವಘಡ ಸಂಭವಿಸಿದ್ದರೆ ಜಿಲ್ಲಾಡಳಿತ ಸಮಸ್ಯೆಗೆ ಸಿಲುಕುತ್ತಿತ್ತು. ಅದರ ಹೊಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ