Breaking News

ರಾಜ್ಯದ ಇತರೆಡೆ ‘ಬಿ’ ಖಾತಾ ನಿವೇಶನಕ್ಕೆ ಎ ಖಾತೆ: ಸರ್ಕಾರ ಬಿ ಖಾತಾ ಆಸ್ತಿ ತೆರಿಗೆ ಪಾವತಿ ಕಡ್ಡಾಯ

Spread the love

ಬೆಂಗಳೂರು: ರಾಜ್ಯಾದ್ಯಂತ ನಗರ ಪ್ರದೇಶಗಳ ವ್ಯಾಪ್ತಿಗಳಲ್ಲಿನ ನಿವೇಶನಗಳಿಗೂ ‘ಬಿ’ ಖಾತಾದಿಂದ  ‘ಎ’ ಖಾತೆ ನೀಡಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಅಲ್ಲದೆ, ಅನಧಿಕೃತ ನಿವೇಶನಗಳಿಗೆ ಖಾತೆ ನೀಡುವುದನ್ನು ನಿಯಂತ್ರಸಲು ಯಾವುದೇ ಖಾತೆ ಹೊಂದಿರದ ನಿವೇಶನಗಳಿಗೆ ಹೊಸದಾಗಿ ಎ-ಖಾತಾ ನೀಡದಿರಲು ನಿರ್ಧರಿಸಲಾಗಿದೆ.

ಈಗಾಗಲೇ ಬೆಂಗಳೂರಿನಲ್ಲಿ ಬಿ ಖಾತೆಗೆ ಎ ಖಾತೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದೇ ರೀತಿಯಲ್ಲಿ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿನ ಸ್ಥಳೀಯ ಯೋಜನಾ ಪ್ರದೇಶಗಳ ಒಳಗೆ ಅಥವಾ ಹೊರಗೆ ಇರುವ ಬಿ-ಖಾತಾ ನಿವೇಶನಗಳಿಗೂ ಎ ಖಾತೆ ನೀಡಲು ತೀರ್ಮಾನಿಸಲಾಗಿದೆ.

ಮೊದಲನೆಯದಾಗಿ, ಬಿ ಖಾತಾದಲ್ಲಿರುವ ಆಸ್ತಿಯ ಇಲ್ಲಿಯವರೆಗಿನ ಎಲ್ಲ ಬಾಕಿ ಆಸ್ತಿ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸಬೇಕು.

ಯಾವುದೇ ಬಾಕಿ ಉಳಿಸಿಕೊಳ್ಳಬಾರದು. ಆಸ್ತಿಯ ಹಕ್ಕು ಪತ್ರ, ಕ್ರಯ ಪತ್ರ, ಆಸ್ತಿ ತೆರಿಗೆ ಪಾವತಿಸಿದ ರಸೀದಿಗಳು, ಅನುಮೋದಿತ ಕಟ್ಟಡ ನಿರ್ಮಾಣ ನಕ್ಷೆ ಜತೆ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಪರಿಶೀಲಿಸಿ ಕ್ರಮಬದ್ಧವಾಗಿದ್ದರೆ ಮಾತ್ರ ಎ ಖಾತಾ ನೀಡಬಹುದು.


Spread the love

About Laxminews 24x7

Check Also

ಯಂತ್ರಕ್ಕೆ ಸಿಲುಕಿದ್ದ ಅಡುಗೆ ಸಿಬ್ಬಂದಿಯನ್ನು ರಕ್ಷಿಸಿದ ಬಾಲಕ – ಪುಟಾಣಿಯ ಸಾಹಸಕ್ಕೆ ಡಿಕೆಶಿ ಮೆಚ್ಚುಗೆ

Spread the loveಮಂಗಳೂರು: ಬಂಟ್ವಾಳದ  ನರಿಕೊಂಬು  ಗ್ರಾಮದ ಶಾಲೆಯಲ್ಲಿ ಅಡುಗೆ ಮಾಡುವಾಗ ತೆಂಗಿನ ಕಾಯಿ ತುರಿಯುವ ವಿದ್ಯುತ್ ಯಂತ್ರಕ್ಕೆ ಸಿಲುಕಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ