Breaking News

ಅಂತಾರಾಷ್ಟ್ರೀಯ ಕಬ್ಬಡಿ ಆಟಗಾರ ಶೀಲು ಬಲ್ಹಾರ್ ಪತ್ನಿ ಆತ್ಮಹತ್ಯೆ

Spread the love

ಚಂಡೀಗಢ: ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಶೀಲು ಬಲ್ಹಾರ್ ಅವರ 23 ವರ್ಷದ ಪತ್ನಿ ಹರಿಯಾಣದ ರೋಹ್ಟಕ್ ಜಿಲ್ಲೆಯ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ರೋಹ್ಟಕ್‌ನ ಮೆಹಮ್ ಪ್ರದೇಶದ ನಿವಾಸಿ ಮುಸ್ಕಾನ್ (23) ಆತ್ಮಹತ್ಯೆಗೆ ಶರಣಾದ ಮಹಿಳೆ. ಅವರು ಡಿಸೆಂಬರ್ 2023 ರಲ್ಲಿ ಶೀಲು ಅವರನ್ನು ವಿವಾಹವಾಗಿದ್ದರು. ದಂಪತಿಗೆ ಕಳೆದ ನವೆಂಬರ್‌ನಲ್ಲಿ‌ ಗಂಡು ಮಗು ಜನಿಸಿತ್ತು ಎಂದು ತಿಳಿದು ಬಂದಿದೆ.

ಮುಸ್ಕಾನ್ ಆತ್ಮಹತ್ಯೆಗೂ ಒಂದು ದಿನದ ಮೊದಲು ಸಾಮಾಜಿಕ ಜಾಲತಾಣದಲ್ಲಿ ಪಂಜಾಬಿ ಹಾಡಿನ ರೀಲ್ಸ್ ಪೋಸ್ಟ್ ಮಾಡಿದ್ದರು.‌ ಅವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಕರಣ ಸಂಬಂಧ ಶೀಲು ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇಲ್ಲಿ ಎಲ್ಲವೂ ವಿಚಿತ್ರವಾಗಿದೆ ಎಂದು ನೇಣಿಗೆ ಶರಣಾಗಿದ್ದ ನವವಿವಾಹಿತ ಶಿಕ್ಷಕಿ
ಇತ್ತೀಚೆಗೆ ಡೆಹ್ರಾಡೂನ್‌ನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿ ಸೃಷ್ಟಿ ಕಂಧಾರಿ ಎಂಬವರು ನೇಣಿಗೆ ಶರಣಾಗಿದ್ದರು. ಆಕೆಯ ಪತಿ ಮತ್ತು ಅತ್ತೆ ಮಾವಂದಿರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಮುಸ್ಕಾನ್ ಆತ್ಮಹತ್ಯೆ ನಡೆದಿದೆ.

ಸೃಷ್ಟಿ ಕಂಧಾರಿ ಕಳೆದ ವರ್ಷ ನವೆಂಬರ್‌ನಲ್ಲಿ ಸರ್ಕಾರಿ ಉದ್ಯೋಗಿ ಆಗಿರುವ ಸೌರಭ್ ರಾತುರಿ ಅವರನ್ನು ವಿವಾಹವಾಗಿದ್ದರು. ಅವರು ಡೆಹ್ರಾಡೂನ್ ನಗರದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ದೋಯಿವಾಲಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಇನ್ನೂ ಕಂಧಾರಿ ನೇಣು ಬಿಗಿದುಕೊಳ್ಳುವ ಮೊದಲು ವೀಡಿಯೊ ರೆಕಾರ್ಡ್ ಮಾಡಿದ್ದಾರೆ, ಇದನ್ನು ವ್ಯಾಪಕವಾಗಿ ವೈರಲ್‌ ಆಗಿದೆ.

ಕಂಧಾರಿಯವರ ತಾಯಿ ನೀಡಿದ ದೂರಿನಲ್ಲಿ ತಮ್ಮ ಮಗಳಿಗೆ ವರದಕ್ಷಿಣೆಗಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.

ಕಂಧಾರಿ ವಿಡಿಯೋದಲ್ಲಿ ಹೇಳಿದ್ದೇನು?
ಅಮ್ಮ ಕ್ಷಮಿಸಿ, ನಾನು ಹೀಗೆ ಹೋಗುತ್ತಿದ್ದೇನೆ, ಎಂದು ಅವರು ಅಳುತ್ತಾ ಹೇಳಿದ್ದಾರೆ. ಎಲ್ಲವೂ ತುಂಬಾ ವಿಚಿತ್ರವಾಗಿದೆ. ನಾನು ಆರು ತಿಂಗಳಿನಿಂದ ಇದನ್ನು ಸಹಿಸಿಕೊಳ್ಳುತ್ತಿದ್ದೇನೆ. ಈಗ ನಾನು ಇನ್ನು ಮುಂದೆ ಅದನ್ನು ಸಹಿಸಲಾರೆ. ಅವರ ಮನಸ್ಥಿತಿ ಎಂದಿಗೂ ಬದಲಾಗುವುದಿಲ್ಲ. ನಮ್ಮ ಮದುವೆಯ ನಂತರ ನಡೆದ ವಿಷಯಗಳಿಗೆ ಅವರು ನನ್ನನ್ನು ದೂಷಿಸುತ್ತಲೇ ಇದ್ದಾರೆ. ನನ್ನನ್ನು ಶಾಪಗ್ರಸ್ತಳು ಎನ್ನುತ್ತಾರೆ ವಿಡಿಯೋದಲ್ಲಿ ಹೇಳಿದ್ದರು.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ