Breaking News

ಸೋಮವಾರ ಡಿಕೆ ಸಂಪುಟ ವಿಸ್ತರಣೆ?; ನಾಳೆ-ನಾಡಿದ್ದು ಅಂತಿಮ ಪಟ್ಟಿ ರವಾನೆ

Spread the love

ಬೆಂಗಳೂರು: ಸಿಎಂ ಡಿ.ಕೆ.ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಸೋಮವಾರ ಡಿಕೆ ಸಂಪುಟ ವಿಸ್ತರಣೆಯಾಗಲಿದ್ದು, ನಾಳೆ ಅಥವಾ ನಾಡಿದ್ದು ಅಂತಿಮ ಪಟ್ಟಿ ರವಾನೆಯಾಗಲಿದೆ.

ಸೋಮವಾರ ಅಧಿಕೃತವಾಗಿ ಸಂಪುಟ ವಿಸ್ತರಣೆ ಆಗಲಿದೆ. ಸೋಮವಾರವೇ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ‘ಪಬ್ಲಿಕ್ ಟಿವಿ’ಗೆ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಇಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದರು. ಭೇಟಿ ಬಳಿಕ, ‘ನೀವು ಹೊರಡಿ.. ನಾವು ಪಟ್ಟಿ ಕಳಿಸುತ್ತೇವೆ’ ಎಂದು ಹೈಕಮಾಂಡ್ ಸ್ಪಷ್ಟ ಸಂದೇಶ ರವಾನಿಸಿದೆ. ಬಳಿಕ ಸಿಎಂ ಬೆಂಗಳೂರಿಗೆ ವಾಪಸಾದರು.

ವಿಶೇಷ ವಿಮಾನದಲ್ಲಿ ಹೆಚ್‌ಎಎಲ್ ಡಿಕೆಶಿ ಬಂದಿಳಿದರು. ಕಳೆದ 4 ದಿನಗಳಿಂದ ಸಿಎಂ ದೆಹಲಿಯಲ್ಲಿದ್ದರು. ಸಿಎಂ ಡಿಕೆ ಜೊತೆಯೇ ಸಿದ್ದರಾಮಯ್ಯ ಅವರು ಕೂಡ ಬೆಂಗಳೂರಿಗೆ ವಾಪಸಾದರು.


Spread the love

About Laxminews 24x7

Check Also

ಅತ್ತೆ-ಮಾವನ ಮನಸ್ಥಿತಿ ಎಂದಿಗೂ ಬದಲಾಗಲ್ಲʼ; ವಿಡಿಯೋ ರೆಕಾರ್ಡ್‌ ಮಾಡಿ ನೇಣಿಗೆ ಶರಣಾದ ಶಿಕ್ಷಕಿ

Spread the loveನವದೆಹಲಿ: ಮದುವೆಯಾದ 8 ತಿಂಗಳ ಬಳಿಕ ಸರ್ಕಾರಿ ಶಿಕ್ಷಕಿಯೊಬ್ಬರು ವಿಡಿಯೋ ರೆಕಾರ್ಡ್‌ ಮಾಡಿ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ