Breaking News

30ಕ್ಕೂ ಅಧಿಕ ವರ್ಷದಲ್ಲೇ ಮೊದಲ ಬಾರಿಗೆ ಬೀದರ್‌ನ ಜೀವನದಿ ಮಾಂಜ್ರಾ ಭಾಗಶಃ ಖಾಲಿ‌

Spread the love

ಬೀದರ್: 30ಕ್ಕೂ ಅಧಿಕ ವರ್ಷದಲ್ಲೇ ಮೊದಲ ಬಾರಿಗೆ ಬೀದರ್ (Bidar) ಜಿಲ್ಲೆಯ ಜೀವನದಿ ಮಾಂಜ್ರಾ ನದಿ  ಎರಡು ತಿಂಗಳಿನಿಂದ ಮಳೆ ಇಲ್ಲದೆ ಖಾಲಿಯಾಗಿದೆ.

ಭೀಕರ ಬರಗಾಲಕ್ಕೆ ಜೀವನದಿ ಮಾಂಜ್ರಾ ಬಹುತೇಕ 95% ಖಾಲಿಯಾಗಿದ್ದು ರೈತರು, ಜನ, ಜಾನುವಾರು, ಪಕ್ಷಿಗಳಿಗೆ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಜಿಲ್ಲೆಯ ಎಲ್ಲಾ ಜಲ ಮೂಲಗಳು ಬತ್ತಿದ್ದರೂ ಮಾಂಜ್ರಾ ನದಿಯ ಜಲ ಮಾತ್ರ ಬತ್ತದೆ ಜಿಲ್ಲೆಯ ಹೂಲಸೂರು, ಭಾಲ್ಕಿ, ಔರಾದ್ ಮತ್ತು ಬೀದರ್ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಜಲ ಸಂಜೀವಿನಿಯಾಗಿರುತ್ತಿತ್ತು. ಆದ್ರೆ ಇದೀಗ ಮಾಂಜ್ರಾ ನದಿ ಬಹುತೇಕ ಖಾಲಿಯಾಗಿದೆ.

ನದಿ ಪಕ್ಕದಲ್ಲಿದ್ದ ಜಮೀನುಗಳ ರೈತರ ಬದುಕು ನೀರಲ್ಲದೆ ಹೇಳತೀರದಂತಾಗಿದೆ. ಇನ್ನೂ 15 ದಿನಗಳಲ್ಲಿ ವರುಣ ದೇವ ಕೃಪೆ ತೋರದೇ ಇದ್ದರೆ ಮಾಂಜ್ರಾ ನದಿ ಸಂಪೂರ್ಣ ಖಾಲಿಯಾಗಿ ಕೃಷಿಗೂ, ಕುಡಿಯುವ ಹನಿ ನೀರಿಗೂ ಜಿಲ್ಲೆಯಲ್ಲೇ ಜಲ ಕ್ಷಾಮ ಉಂಟಾಗಲಿದೆ.


Spread the love

About Laxminews 24x7

Check Also

ಹೈದ್ರಾಬಾದ್ ಡ್ರಗ್ಸ್ ಕೇಸ್‌ಗೂ ಬೆಂಗಳೂರಿಗೂ ಲಿಂಕ್ – ನಗರದ 2 ಕಡೆ ಇಡಿ ದಾಳಿ

Spread the loveಬೆಂಗಳೂರು: ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತು ಮಾರಾಟ ಕೇಸ್‌ಗೆ ಸಂಬಂಧಿಸಿದಂತೆ ನಗರದ  ಎರಡು ಕಡೆ ಇಡಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ