Breaking News

ಮದ್ವೆಗೆ ನಿರಾಕರಿಸಿದ್ದಕ್ಕೆ ಬೈಕ್ ತಡೆದಿದ್ದ ಪ್ರೇಯಸಿ – ಹ್ಯಾಂಡಲ್‌ಗೆ ಜೋತುಬೀಳಿಸಿಕೊಂಡೇ ರಸ್ತೆಯಲ್ಲಿ ಎಳೆದೊಯ್ದ ಪ್ರಿಯಕರ

Spread the love

ಪಾಟ್ನಾ: ಮದುವೆಗೆ ನಿರಾಕರಿಸಿದ್ದಕ್ಕೆ ಬೈಕ್ ತಡೆದು ನಿಂತಿದ್ದ ಪ್ರೇಯಸಿಯನ್ನು ಹ್ಯಾಂಡಲ್‌ಗೆ ಜೋತುಬೀಳಿಸಿಕೊಂಡೇ ಪ್ರಿಯಕರ ರಸ್ತೆಯಲ್ಲೇ ಎಳೆದಾಡಿದ ಘಟನೆ ಬಿಹಾರದ ನಳಂದ ಜಿಲ್ಲೆಯ ರಾಜಗಿರ್‌ನಲ್ಲಿ ನಡೆದಿದೆ. ಈ ಭೀಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಾಹಿತಿಯ ಪ್ರಕಾರ, ಬೈಕ್ ಸವಾರ ಸರ್ಕಾರಿ ಉದ್ಯೋಗಿಯಾಗಿದ್ದು, ಯುವತಿ ಆತನ ಪ್ರೇಯಸಿ ಎನ್ನಲಾಗಿದೆ. ಇಬ್ಬರೂ ಕಳೆದ ಕೆಲವು ತಿಂಗಳಿನಿಂದ ಪ್ರೀತಿಸುತ್ತಿದ್ದರು. ಆದರೆ, ಕುಟುಂಬಸ್ಥರ ವಿರೋಧದಿಂದಾಗಿ ಪ್ರೇಯಸಿಯನ್ನು ಮದುವೆಯಾಗಲು ಪ್ರಿಯಕರ ನಿರಾಕರಿಸಿದ್ದ. ಇದೇ ವಿಷಯವಾಗಿ ಇಬ್ಬರು ರಾಜಗಿರ್‌ನ ಕಿಲ್ಲಾ ಮೈದಾನ್ ಮತ್ತು ವೇಣುವನ ಬಳಿ ನಿಂತು ಮಾತಾಡುತ್ತಿದ್ದರು.

ಮಾತುಕತೆ ಬಳಿಕ ಪ್ರಿಯಕರ ಅಲ್ಲಿಂದ ಹೊರಡಲು ಮುಂದಾದಾಗ, ಪ್ರೇಯಸಿ ಬೈಕ್ ತಡೆಯಲು ಯತ್ನಿಸಿದ್ದಾರೆ. ಹ್ಯಾಂಡಲ್ ಹಿಡಿದುಕೊಂಡಿದ್ದರೂ ಕೂಡ ಬೈಕ್ ನಿಲ್ಲಿಸದೇ ಪ್ರೇಯಸಿಯನ್ನು ಜೋತುಬೀಳಿಸಿಕೊಂಡೇ ಕೆಲ ಮೀಟರ್‌ಗಳವರೆಗೆ ಕ್ರೂರ ಪ್ರಿಯಕರ ಎಳೆದುಕೊಂಡು ಹೋಗಿದ್ದಾನೆ.

ವೈರಲ್ ಆದ ವಿಡಿಯೋದಲ್ಲಿ ಪ್ರೇಯಸಿ ಕಿರುಚಾಡುತ್ತಿರುವುದು ಕೇಳಿಬಂದಿದೆ. ಬೈಕ್ ಮುಂದೆ ಹೋದಂತೆ ನಿಯಂತ್ರಣ ಕಳೆದುಕೊಂಡಿದ್ದು, ಇಬ್ಬರು ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದ ಜನರು ಮಧ್ಯಪ್ರವೇಶಿಸಿ, ಯುವಕನಿಗೆ ಹೊಡೆದು ಯುವತಿಯನ್ನು ರಕ್ಷಿಸಿದ್ದಾರೆ.

ವೈರಲ್ ಆಗಿರುವ ಈ ವಿಡಿಯೋ ಹಾಗೂ ಘಟನೆಗೆ ಸಂಬಂಧಿಸಿದಂತೆ ನವಾಡ ಜಿಲ್ಲೆಯ ನರ್ದಿಗಂಜ್ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ಹೈದ್ರಾಬಾದ್ ಡ್ರಗ್ಸ್ ಕೇಸ್‌ಗೂ ಬೆಂಗಳೂರಿಗೂ ಲಿಂಕ್ – ನಗರದ 2 ಕಡೆ ಇಡಿ ದಾಳಿ

Spread the loveಬೆಂಗಳೂರು: ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತು ಮಾರಾಟ ಕೇಸ್‌ಗೆ ಸಂಬಂಧಿಸಿದಂತೆ ನಗರದ  ಎರಡು ಕಡೆ ಇಡಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ